ಆ್ಯಪ್ನಗರ

ಭದ್ರತೆಗೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿ: ಎಸ್ಪಿ ರಾಧಿಕಾ

ಮಂಡ್ಯ : ವಿಧಾನಸಭೆ ಕ್ಷೇತ್ರದ ಚುನಾವಣೆ ಸಂಬಂಧ ಮೇ 15ರಂದು ನಡೆಯುವ ಮತ ಎಣಿಕೆ ಪ್ರಕ್ರಿಯೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

Vijaya Karnataka 15 May 2018, 5:00 am
ವಾಹನ ನಿಲುಗಡೆಗೆ ಅಗತ್ಯ ಕ್ರಮ | ಎಣಿಕೆ ಕೇಂದ್ರಕ್ಕೆ ಮೊಬೈಲ್‌ ನಿಷಿದ್ಧ
Vijaya Karnataka Web thousands more staff to secure security sp radhika
ಭದ್ರತೆಗೆ ಸಾವಿರಕ್ಕೂ ಹೆಚ್ಚು ಸಿಬ್ಬಂದಿ: ಎಸ್ಪಿ ರಾಧಿಕಾ


ಮಂಡ್ಯ : ವಿಧಾನಸಭೆ ಕ್ಷೇತ್ರದ ಚುನಾವಣೆ ಸಂಬಂಧ ಮೇ 15ರಂದು ನಡೆಯುವ ಮತ ಎಣಿಕೆ ಪ್ರಕ್ರಿಯೆ ಸುಗಮವಾಗಿ ನಡೆಯಲು ಅನುಕೂಲವಾಗುವಂತೆ ಪೊಲೀಸ್‌ ಬಿಗಿ ಬಂದೋಬಸ್ತ್‌ ಏರ್ಪಡಿಸಲಾಗಿದೆ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ತಿಳಿಸಿದರು.

ಒಬ್ಬರು ಎಎಸ್‌ಪಿ, 6 ಡಿವೈಎಸ್‌, 10 ಸಿಪಿಐ, 24 ಪಿಎಸ್‌ಐ, 55 ಎಎಸ್‌ಐ, 350 ಮುಖ್ಯ ಪೇದೆ/ಪೇದೆಗಳು, 33 ಮಹಿಳಾ ಪೇದೆಗಳು/ಮಹಿಳಾ ಮುಖ್ಯ ಪೇದೆಗಳು ಸೇರಿದಂತೆ 466 ಮಂದಿಯನ್ನು ಎಣಿಕೆ ಕೇಂದ್ರವಾದ ಮಂಡ್ಯದ ಸರಕಾರಿ ಮಹಾವಿದ್ಯಾಲಯದಲ್ಲಿ(ಸ್ವಾಯತ್ತ) ಭದ್ರತೆಗಾಗಿ ನಿಯೋಜಿಸಲಾಗಿದೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.

400 ಮಂದಿ ಗೃಹರಕ್ಷಕ ಸಿಬ್ಬಂದಿ, ತಲಾ 5 ಡಿಎಆರ್‌ ತುಕಡಿಗಳು, 4 ಕೆಎಸ್‌ಆರ್‌ಪಿ, 3 ಸಿಆರ್‌ಪಿಎಫ್‌ ಹಾಗೂ 1 ರಾರ‍ಯಪಿಡ್‌ ಆ್ಯಕ್ಷನ್‌ ಪೋರ್ಸ್‌ ನಿಯೋಜಿಸಲಾಗಿದೆ. ಇದರೊಂದಿಗೆ ಒಂದು ಸಾವಿರಕ್ಕೂ ಹೆಚ್ಚು ಸಿಬ್ಬಂದಿ ಭದ್ರತಾ ಕಾರ‍್ಯ ನಿರ್ವಹಿಸುವರು. ಎರಡು ಹಂತದ ಬಂದೋಬಸ್ತ್‌ನ್ನು ಹಾಕಲು ಯೋಚಿಸಲಾಗಿದೆ ಎಂದು ತಿಳಿಸಿದರು.

ಪಾರ್ಕಿಂಗ್‌ ವ್ಯವಸ್ಥೆ: ಎಣಿಕೆ ಕೇಂದ್ರದ ಎದುರಿನ ಬೆಂಗಳೂರು-ಮೈಸೂರು ಹೆದ್ದಾರಿ, ಜನವಸತಿ ಪ್ರದೇಶದ ರಸ್ತೆಗಳು ಹಾಗೂ ಪಿಇಎಸ್‌ ತಾಂತ್ರಿ ಕಾಲೇಜಿನ ರಸ್ತೆ ಬದಿಯಲ್ಲಿ ವಾಹನಗಳ ಪಾರ್ಕಿಂಗ್‌ಗೆ ಕ್ರಮ ವಹಿಸಲಾಗಿದೆ. ಪಾರ್ಕಿಂಗ್‌ ಸಂಬಂಧ ಅಲ್ಲಲ್ಲಿ ಸೈನ್‌ಬೋರ್ಡ್‌ ಅಳವಡಿಸಲಾಗುವುದು. ಈ ಮೂಲಕ ಟ್ರಾಫಿಕ್‌ ಮ್ಯಾನೇಜ್‌ಮೆಂಟ್‌ಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ ಎಂದು ರಾಧಿಕಾ ತಿಳಿಸಿದರು.

ಮೊಬೈಲ್‌ ತರುವುದು ನಿಷೇಧ: ಎಣಿಕೆ ಕೇಂದ್ರದೊಳಗೆ ಎಣಿಕೆ ಸಿಬ್ಬಂದಿ, ಏಜೆಂಟರು ಮೊಬೈಲ್‌ ಫೋನ್‌ ಇತ್ಯಾದಿ ಯಾವುದೇ ಎಲೆಕ್ಟ್ರಾನಿಕ್‌ ಉಪಕರಣಗಳನ್ನು ಕೊಂಡೊಯ್ಯುವಂತಿಲ್ಲ. ಅದೇ ರೀತಿ ಟೇಬಲ್‌ಗಳಿಗೆ ನೇಮಕ ಮಾಡಿರುವ ಎಣಿಕೆ ಮೇಲ್ವಿಚಾರಕರು, ಸಹಾಯಕರು ಮತ್ತು ಮೈಕ್ರೋ ಅಬ್ಸರ್‌ವರ್‌ಗಳಿಗೂ ಮೊಬೈಲ್‌ ತರಲು ಅವಕಾಶವಿಲ್ಲ. ಮೂರು ಹಂತದಲ್ಲಿ ತಪಾಸಣೆ ಮಾಡಿ ಎಣಿಕೆ ಸಿಬ್ಬಂದಿ, ಏಜೆಂಟರನ್ನು ಎಣಿಕೆ ಕೇಂದ್ರದೊಳಗೆ ಕಳುಹಿಸಲಾಗುತ್ತದೆ ಎಂದರು.

ಜಿಲ್ಲಾದ್ಯಂತ ಕಟ್ಟೆಚ್ಚರ: ಜಿಲ್ಲಾದ್ಯಂತ ಕಟ್ಟೆಚ್ಚರ ವಹಿಸಲಾಗಿದೆ. ಈ ಹಿಂದೆ ಗಲಾಟೆ ನಡೆದಿದ್ದಂತಹ ಪ್ರದೇಶಗಳಲ್ಲಿ ಪಿಕೆಟಿಂಗ್‌, ಪೆಟ್ರೋಲಿಂಗ್‌ ನಡೆಸಲಾಗುತ್ತದೆ. ಪೆಟ್ರೋಲಿಂಗ್‌ ಕಾರ‍್ಯಕ್ಕಾಗಿ 50 ಖಾಸಗಿ ವಾಹನ ಬಳಸಿಕೊಳ್ಳಲಾಗುತ್ತಿದೆ. ಆಯಾಯ ಠಾಣೆ ವ್ಯಾಪ್ತಿಯಲ್ಲಿ ಸೂಕ್ಷ್ಮ ಪ್ರದೇಶಗಳು, ಮುಖ್ಯ ಸ್ಥಳಗಳು ಹಾಗೂ ಹಳ್ಳಿಗಳನ್ನು ಗುರುತಿಸಿ ಬಂದೋಬಸ್ತ್‌ ಕಲ್ಪಿಸಲಾಗಿದೆ ಎಂದು ವಿವರಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ