ಆ್ಯಪ್ನಗರ

ಗಣಿ ಮಾಲೀಕರಿಂದ ವರದಿಗಾರನಿಗೆ ಬೆದರಿಕೆ: ದೂರು ದಾಖಲು

ನಿಷೇದಾಜ್ಞೆ ಜಾರಿಯಲ್ಲಿದ್ದರೂ, ತಾಲೂಕಿನ ಬೇಬಿಬೆಟ್ಟದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ನಡೆಯತ್ತಿದ್ದ ಗಣಿಗಾರಿಕೆ ವರದಿಮಾಡಲು ಹೋದ ವರದಿಗಾರರಿಗೆ ಗಣಿ ಮಾಲೀಕರು ಬೆದರಿಕೆ ಹಾಕಿರುವ ಘಟನೆ ಶನಿವಾರ ನಡೆದಿದೆ.

Vijaya Karnataka 3 Feb 2019, 5:00 am
ಪಾಂಡವಪುರ: ನಿಷೇದಾಜ್ಞೆ ಜಾರಿಯಲ್ಲಿದ್ದರೂ, ತಾಲೂಕಿನ ಬೇಬಿಬೆಟ್ಟದ ಕಲ್ಲು ಗಣಿಗಾರಿಕೆ ಪ್ರದೇಶದಲ್ಲಿ ನಡೆಯತ್ತಿದ್ದ ಗಣಿಗಾರಿಕೆ ವರದಿಮಾಡಲು ಹೋದ ವರದಿಗಾರರಿಗೆ ಗಣಿ ಮಾಲೀಕರು ಬೆದರಿಕೆ ಹಾಕಿರುವ ಘಟನೆ ಶನಿವಾರ ನಡೆದಿದೆ.
Vijaya Karnataka Web threatens to report from the mines owner complaint filed
ಗಣಿ ಮಾಲೀಕರಿಂದ ವರದಿಗಾರನಿಗೆ ಬೆದರಿಕೆ: ದೂರು ದಾಖಲು


ವರದಿಗಾರ ಎಸ್‌. ರಾಜು ಅವರಿಗೆಯೇ ಗಣಿಮಾಲೀಕರು ಬೆದರಿಕೆ ಹಾಕಿದ್ದಾರೆ. ಬೇಬಿಬೆಟ್ಟದ ಕಲ್ಲು ಗಣಿಗಾರಿಕೆಯಿಂದ ಕೆಆರ್‌ಎಸ್‌ ಡ್ಯಾಂಗೆ ಅಪಾಯವಿದೆ ಎಂದು ಪ್ರಾಕೃತಿಕ ವಿಕೋಪ ತಂಡದ ತಜ್ಞರು ವರದಿ ನೀಡಿದ ಹಿನ್ನೆಲೆಯಲ್ಲಿ. ಕಳೆದ ಎರಡು ತಿಂಗಳ ಹಿಂದೆ ಜಿಲ್ಲಾಧಿಕಾರಿಗಳು ಬೇಬಿಬೆಟ್ಟದ ಗಣಿಗಾರಿಕೆ ಪ್ರದೇಶಕ್ಕೆ 144 ಸೆಕ್ಷ ನ್‌ ಜಾರಿಗೊಳಿಸಿದ್ದರು.

ನಿಷೇಧಾಜ್ಞೆಯನ್ನು ಉಲ್ಲಂಘಿಸಿ ಗಣಿಗಾರಿಗೆ ನಡೆಸುತ್ತದ್ದ ಸಂದರ್ಭದಲ್ಲಿ ಶನಿವಾರ ಗಣಿಗಾರಿಕೆ ಪ್ರದೇಶಕ್ಕೆ ತೆರಳಿದ ವರದಿಗಾರ ಎಸ್‌.ರಾಜು ಗಣಿಗಾಕೆ ನಡೆಯುತ್ತಿರುವುದನ್ನು ಪ್ರಶ್ನಿಸಿ ಪೋಟೋ ತೆಗೆಯಲು ಮುಂದಾದಾಗ ಗಣಿ ಮಾಲೀಕರು ತಡೆದು ವರದಿಗಾರನಿಗೆ ಬೆದರಿಕೆ ಹಾಕಿದ್ದಾರೆ. ಜತೆಗೆ ವರದಿಗಾರನ ಬೈಕ್‌ನ ಕೀ ಕಿತ್ತುಕೊಂಡು ಸುಮಾರು 15 ನಿಮಿಷಕ್ಕೂ ನಿಮಿಷ ಕಾಲ ಕೀ ಕೊಡದೆ ಸತಾಹಿಸಿ ಅವಾಚ್ಯ ಶಬ್ಧಗಳಿಂದ ನಿಂಧಿಸಿ ಬೆದರಿಕೆ ಹಾಕಿದ್ದಾರೆ. ಈ ಸಂಬಂಧ ವರದಿಗಾರ ರಾಜು ಪಾಂಡವಪುರ ಪಟ್ಟಣದ ಪೊಲೀಸ್‌ ಠಾಣೆಗೆ ದೂರು ನೀಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ