ಆ್ಯಪ್ನಗರ

​ ಟಿಪ್ಪು, ಕನಕ ಜಯಂತಿ ಆಚರಣೆಗೆ ನಿರ್ಧಾರ

ತಾಲೂಕು ಆಡಳಿತದ ವತಿಯಿಂದ ನ.6ರಂದು ಕನಕಜಯಂತಿ ಹಾಗೂ ನ.10ಕ್ಕೆ ಟಿಪ್ಪು ಜಯಂತಿಯನ್ನು ವಿಜಂಭಣೆಯಾಗಿ ಆಚರಣೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.

Vijaya Karnataka 28 Oct 2017, 5:15 am
ಪಾಂಡವಪುರ: ತಾಲೂಕು ಆಡಳಿತದ ವತಿಯಿಂದ ನ.6ರಂದು ಕನಕಜಯಂತಿ ಹಾಗೂ ನ.10ಕ್ಕೆ ಟಿಪ್ಪು ಜಯಂತಿಯನ್ನು ವಿಜಂಭಣೆಯಾಗಿ ಆಚರಣೆ ಮಾಡಲು ಸಭೆಯಲ್ಲಿ ತೀರ್ಮಾನಿಸಲಾಯಿತು.
Vijaya Karnataka Web tippu kanaka jayanti decided to celebrate
​ ಟಿಪ್ಪು, ಕನಕ ಜಯಂತಿ ಆಚರಣೆಗೆ ನಿರ್ಧಾರ


ಪಟ್ಟಣದ ಮಿನಿ ವಿಧಾನಸೌಧದ ತಹಸೀಲ್ದಾರ್ ಸಭಾಂಗಣದಲ್ಲಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಅಧ್ಯಕ್ಷತೆಯಲ್ಲಿ ನಡೆದ ಕನಕ ಹಾಗೂ ಟಿಪ್ಪು ಜಯಂತಿಯ ಪೂರ್ವಭಾವಿ ಸಭೆಯಲ್ಲಿ ಈ ಕ್ರಮಕೈಗೊಳ್ಳಲಾಯಿತು.

ಮೊದಲು ಕನಕ ಜಯಂತಿಯ ಚರ್ಚೆಯಲ್ಲಿ ಸಭೆ ಪ್ರಾರಂಭವಾಗು ತ್ತಿದ್ದಂತೆ ಕುರುಬ ಸಮುದಾಯದ ಮುಖಂಡ ನವೀನಕುಮಾರ್ ತಾಲೂಕು ಕಚೇರಿಯಲ್ಲಿ ಟಿಪ್ಪು ಸೇರಿದಂತೆ ಎಲ್ಲಾ ನಾಯಕ ಭಾವಚಿತ್ರವಿದೆ ಆದರೆ, ಕನಕದಾಸರ ಫೋಟೋ ಮಾತ್ರವಿಲ್ಲ ಏಕೆ ಎಂದು ಪ್ರಶ್ನಿಸಿದರು. ಇದಕ್ಕೆ ಪ್ರತಿ ಕ್ರಿಯಿಸಿದ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಇನ್ನು ಮುಂದೆ ಸರಕಾರ ಆಚರಣೆ ಮಾಡುತ್ತಿರುವ ಎಲ್ಲಾ ನಾಯಕ ಭಾವಚಿತ್ರವನ್ನು ತಾಲೂಕು ಕಚೇರಿಯಲ್ಲಿ ಹಾಕುವಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಕನಕ ಜಯಂತಿ ಆಚರಣೆ ಮಾಡುವ ಕುರಿತು ನ.1ರಂದು ಮತ್ತೊಂದು ಸಭೆ ಕರೆದು ಚರ್ಚಿಸಲಾಗುವುದು ಎಂದರು.

ಟಿಪ್ಪು ಜಯಂತಿ ಆಚರಣೆ ಮಾಡುವ ಕುರಿತು ನಡೆಸ ಚರ್ಚೆಯಲ್ಲಿ ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಟಿಪ್ಪು ಜಯಂತಿ ಆಚರಣೆ ಮಾಡುವ ಬಗ್ಗೆ ಸಾರ್ವಜನಿಕರಲ್ಲಿ ಅಭಿಪ್ರಾಯ ಕೇಳಿ ದರು. ಈ ವೇಳೆ ಬಿಜೆಪಿ ಅಧ್ಯಕ್ಷ ಪ.ಮಾ.ರಮೇಶ್ ಹಾಗೂ ನವೀನ್‌ಕುಮಾರ್ ಟಿಪ್ಪು ಜಯಂತಿ ಆಚರಣೆ ಮಾಡಲು ನಮ್ಮ ವಿರೋಧವಿದೆ ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಶಾಸಕರು ಟಿಪ್ಪು ಜಯಂತಿ ಆಚರಣೆಗೆ ವಿರೋಧಿಸುವುದು ನಿಮ್ಮ ವೈಯುಕ್ತಿಕ ವಿಚಾರ. ಟಿಪ್ಪು ಜಯಂತಿಯನ್ನು ಸರಕಾರ ಕಾರ‌್ಯಕ್ರಮ ವಾಗಿ ಆಚರಣೆ ಮಾಡುತ್ತಿದೆ. ಹಾಗಾಗಿ ನ.10ರಂದು ನಾವು ಟಿಪ್ಪು ಜಯಂತಿ ಯನ್ನು ತಾಲೂಕು ಆಡಳಿತದ ಪರವಾಗಿ ಆಚರಣೆ ಮಾಡುತ್ತೇವೆ ಎಂದು ಹೇಳಿದರು.

ಸಭೆಯಲ್ಲಿ ತಾಪಂ ಅಧ್ಯಕ್ಷೆ ರಾಧಮ್ಮಕೆಂಪೇಗೌಡ, ಸದಸ್ಯರಾದ ವಿ.ಎಸ್.ನಿಂಗೇಗೌಡ, ಮಂಗಳನವೀನ್‌ಕುಮಾರ್, ಶಿವಣ್ಣ, ನವೀನ್, ತಹಸೀಲ್ದಾರ್ ಡಿ.ಹನುಮಂತರಾಯಪ್ಪ ಮತ್ತಿತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ