ಆ್ಯಪ್ನಗರ

ಸರಣಿ ಅಪಘಾತದಲ್ಲಿ ಇಬ್ಬರು ಸಾವು

ಮುರುಕನಹಳ್ಳಿ ಸಮೀಪದ ಮೈಸೂರು-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿಘಟನೆ ವಿಕ ಸುದ್ದಿಲೋಕ ಕೆಆರ್‌...

Vijaya Karnataka Web 20 Oct 2019, 5:00 am
ಕೆ.ಆರ್‌. ಪೇಟೆ: ಎರಡು ಬೈಕ್‌ ಮತ್ತು ಟಿಪ್ಪರ್‌ ನಡುವೆ ಸರಣಿ ಅಪಘಾತ ಸಂಭವಿಸಿ ಇಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಮುರುಕನಹಳ್ಳಿ ಗ್ರಾಮದ ಸಮೀಪದ ಮೈಸೂರು-ಶಿವಮೊಗ್ಗ ರಾಜ್ಯ ಹೆದ್ದಾರಿಯಲ್ಲಿಘಟನೆ ನಡೆದಿದೆ.
Vijaya Karnataka Web two killed in serial accident near kr pete taluk
ಸರಣಿ ಅಪಘಾತದಲ್ಲಿ ಇಬ್ಬರು ಸಾವು


ಕಸಬಾ ಹೋಬಳಿಯ ಪುರ ಗ್ರಾಮದ ಕೃಷ್ಣೇಗೌಡ ಎಂಬುವವರ ಪತ್ನಿ ಸುಲೋಚನಮ್ಮ(26), ಮಂಡ್ಯದ ದುದ್ದ ಹೋಬಳಿ ಹೊನ್ನೇನಹಳ್ಳಿಯ ಕುಮಾರ್‌ (26) ಮೃತರು.

ಕೃಷ್ಣೇಗೌಡ- ಸುಲೋಚನಮ್ಮ ದಂಪತಿ ತಮ್ಮ ತವರೂರು ಮರಡಹಳ್ಳಿ ಗ್ರಾಮದಿಂದ ಪುರ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಎದುರುಗಡೆಯಿಂದ ಬರುತ್ತಿದ್ದ ಮತ್ತೊಂದು ಬೈಕ್‌ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಈ ವೇಳೆ ಕೃಷ್ಣೇಗೌಡರ ಹಿಂದೆ ಕುಳಿತಿದ್ದ ಪತ್ನಿ ಸುಲೋಚನ ರಸ್ತೆಗೆ ಬಿದ್ದಾಗ ಹಿಂದೆ ಬರುತ್ತಿದ್ದ ಟಿಪ್ಪರ್‌ ಹರಿದು ಅವರು ಸ್ಥಳದಲ್ಲಿಯೇ ಮೃತಪಟ್ಟರು.

ಡಿಕ್ಕಿ ಹೊಡೆದ ಮತ್ತೊಂದು ಬೈಕಿನಲ್ಲಿದ್ದ ಕುಮಾರ್‌ಗೂ ಗಂಭೀರ ಗಾಯವಗಿದ್ದು, ಚಿಕಿತ್ಸೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾರೆ. ಕೃಷ್ಣೇಗೌಡ ಅವರಿಗೂ ಗಂಭೀರ ಸ್ವರೂಪದ ಗಾಯಗಳಾಗಿದ್ದು, ಮೈಸೂರಿನ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ಕೆ.ಆರ್‌.ಪೇಟೆ ಸರ್ಕಲ್‌ ಇನ್ಸ್‌ ಪೆಕ್ಟರ್‌ ಕೆ.ಎನ್‌. ಸುಧಾಕರ್‌, ಗ್ರಾಮಾಂತರ ಪೊಲೀಸ್‌ ಠಾಣೆ ಸಬ್‌ ಇನ್ಸ್‌ಪೆಕ್ಟರ್‌ ಲಕ್ಷ ್ಮಣ್‌ ಭೇಟಿ ನೀಡಿ ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಸಂಬಂಧ ಕೆ.ಆರ್‌.ಪೇಟೆ ಗ್ರಾಮಾಂತರ ಪೋಲಿಸ್‌ ಠಾಣೆಯಲ್ಲಿಪ್ರಕರಣ ದಾಖಲಾಗಿದೆ.

ಮೈಸೂರು- ಕೆ.ಆರ್‌.ಪೇಟೆ ಮುಖ್ಯ ರಸ್ತೆಯಲ್ಲಿಅನೇಕ ಅವೈಜ್ಞಾನಿಕ ರೋಡ್‌ ಹಂಫ್ಸ್‌ಗಳಿವೆ. ಇವುಗಳಿಂದ ಸಾಕಷ್ಟು ಅಪಘಾತಗಳು ಸಂಭವಿಸುತ್ತಿವೆ. ರಸ್ತೆ ಹಂಫ್ಸ್‌ಗಳನ್ನು ತೆರವುಗೊಳಿಸಿ, ಎಚ್ಚರಿಕೆ ಫಲಕಗಳನ್ನು ಹಾಕಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ