ಆ್ಯಪ್ನಗರ

ಮಂಡ್ಯ: ಅಯೋಧ್ಯೆಗೆ ಅಂಚೆ ಮೂಲಕ ಕಲ್ಲು ರವಾನೆ, ಕಲ್ಲಿನ ಮೇಲೆ ‘ಶ್ರೀರಾಮ’ ಎಂದು ಕೆತ್ತನೆ

ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಶತಮಾನಗಳ ಕನಸು ಈಡೇರಿದೆ. ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನ್ಯಾಯಾಲಯ ತೀರ್ಪು ನೀಡಿದೆ. ಹೀಗಾಗಿ ಹಿಂದುಗಳ ಪ್ರತಿಷ್ಠೆಯ ಸಂಕೇತವಾದ ಶ್ರೀರಾಮನ ಮಂದಿರವು ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿದೆ.

Vijaya Karnataka Web 5 Aug 2020, 4:59 pm
ಮಂಡ್ಯ: ಅಯೋಧ್ಯೆಯಲ್ಲಿ ಬುಧವಾರ ಅತ್ತ ರಾಮಮಂದಿರ ನಿರ್ಮಾಣಕ್ಕಾಗಿ ಭೂಮಿಪೂಜೆ ನಡೆಯುತ್ತಿದ್ದರೆ ಇತ್ತ ಮಂಡ್ಯದಲ್ಲಿ ರಾಮಭಕ್ತರಿಬ್ಬರು ಪೂಜೆ ಮಾಡಿಸಿದ ಸೈಜುಗಲ್ಲನ್ನು (ದಿಂಡು) ತ್ವರಿತ ಅಂಚೆ ಮೂಲಕ ಅಯೋಧ್ಯೆಗೆ ರವಾನಿಸಿ ಗಮನ ಸೆಳೆದರು.
Vijaya Karnataka Web ಶ್ರೀರಾಮ
ಶ್ರೀರಾಮ



ಬಿಜೆಪಿ ಮಂಡ್ಯ ತಾಲೂಕು ಉಪಾಧ್ಯಕ್ಷ ಶಿವಕುಮಾರ್ ಆರಾಧ್ಯ ಹಾಗೂ ಮಂಡ್ಯ ನಗರ ಬಿಜೆಪಿ ರೈತ ಮೋರ್ಚಾ ಅಧ್ಯಕ್ಷ ಹೊಸಹಳ್ಳಿ ಶಿವು ಎಂಬುವರೇ ಅಯೋಧ್ಯೆಗೆ ಕಲ್ಲು ರವಾನಿಸುವ ಮೂಲಕ ತಮ್ಮ ಅಳಿಲು ಸೇವೆ ಸಲ್ಲಿಸಿದರು.
ಸೈಜುಗಳನ್ನು ಖರೀದಿಸಿ ಅದನ್ನು ನುಣುಪಾಗಿಸಿ, ಅದರ ಮೇಲೆ ‘ಶ್ರೀರಾಮ’ ಎಂದು ಹೆಸರನ್ನು ಕೆತ್ತನೆ ಮಾಡಿಸಿದ್ದರು. ನಂತರ ಅದನ್ನು ನಗರದ ರೈಲು ನಿಲ್ದಾಣದ ಬಳಿಯ ಶ್ರೀಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ನೆರವೇರಿಸಿದರು.

ಬಳಿಕ ಅದನ್ನು ಸುರಕ್ಷಿತವಾಗಿ ಪ್ಯಾಕ್ ಮಾಡಿ, ಅಂಚೆ ಕಚೇರಿಗೆ ಕೊಂಡೊಯ್ದು ಸ್ಪೀಡ್ ಪೋಸ್ಟ್ ಮೂಲಕ ಅಯೋಧ್ಯೆಗೆ ಕಳುಹಿಸಿಕೊಟ್ಟರು. ಸೈಜುಗಲ್ಲು 24 ಕೆಜಿ ತೂಕವಿದ್ದ ಹಿನ್ನಲೆಯಲ್ಲಿ ಅಂಚೆ ಕಚೇರಿ ಸಿಬ್ಬಂದಿಯು 2400 ರೂ. ಅಂಚೆ ಶುಲ್ಕ ವಿಧಿಸಿದರು. ಅದನ್ನು ಶಿವಕುಮಾರ್ ಆರಾಧ್ಯ ಮತ್ತು ಹೊಸಹಳ್ಳಿ ಶಿವು ಇಬ್ಬರೂ ಸೇರಿ ಪಾವತಿಸಿದರು.

ಈ ವೇಳೆ ಮಾತನಾಡಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸುವ ಶತಮಾನಗಳ ಕನಸು ಈಡೇರಿದೆ. ರಾಮಮಂದಿರ ನಿರ್ಮಾಣಕ್ಕೆ ಅನುಮತಿ ನ್ಯಾಯಾಲಯ ತೀರ್ಪು ನೀಡಿದೆ. ಹೀಗಾಗಿ ಹಿಂದುಗಳ ಪ್ರತಿಷ್ಠೆಯ ಸಂಕೇತವಾದ ಶ್ರೀರಾಮನ ಮಂದಿರವು ಅಯೋಧ್ಯೆಯಲ್ಲಿ ನಿರ್ಮಾಣಗೊಳ್ಳುತ್ತಿದೆ. ನಾವು ಅಲ್ಲಿಗೆ ಹೋಗಲಾಗದ ಕಾರಣ ಸೈಜುಗಲ್ಲನ್ನು ಅಯೋಧ್ಯೆಗೆ ಅಂಚೆ ಮೂಲಕ ಕಳುಹಿಸಿಕೊಡುತ್ತಿದ್ದೇವೆ. ಇದು ರಾಮಮಂದಿರ ನಿರ್ಮಾಣಕ್ಕಾಗಿ ನಮ್ಮ ಅತಿ ಸಣ್ಣ ಕಾಣಿಕೆ ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ