ಆ್ಯಪ್ನಗರ

ಸರಕು ವಾಹನ ಪಲ್ಟಿ: 22 ಮಂದಿಗೆ ಗಾಯ

ವಿಕ ಸುದ್ದಿಲೋಕ ಭಾರತೀನಗರ ಸಾವಿನ ಮನೆಗೆ ಜನರನ್ನು ಕರೆದೊಯ್ಯುತ್ತಿದ್ದ ಸರಕು ವಾಹನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 22 ಮಂದಿ ಗಾಯಗೊಂಡಿರುವ ಘಟನೆ ...

Vijaya Karnataka 22 Feb 2019, 5:00 am
ಭಾರತೀನಗರ: ಸಾವಿನ ಮನೆಗೆ ಜನರನ್ನು ಕರೆದೊಯ್ಯುತ್ತಿದ್ದ ಸರಕು ವಾಹನ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಪರಿಣಾಮ 22 ಮಂದಿ ಗಾಯಗೊಂಡಿರುವ ಘಟನೆ ಗರುದೇವರಹಳ್ಳಿ ಹಾಗೂ ಬೊಮ್ಮನದೊಡ್ಡಿ ನಡುವೆ ಸಂಭವಿಸಿದೆ.
Vijaya Karnataka Web vehicle accident 22 injured near bharathinagar
ಸರಕು ವಾಹನ ಪಲ್ಟಿ: 22 ಮಂದಿಗೆ ಗಾಯ


ಗ್ರಾಮದ ಅನೂಷ(35), ಜಯಲಕ್ಷ್ಮೀ(40), ಭಾಗ್ಯ(40), ಗೌರಮ್ಮ(45), ಮಂಚೇಗೌಡ(55), ಕೆಂಪಮ್ಮ(56), ನಾಗಶೆಟ್ಟಿ(50), ಮಹದೇವಮ್ಮ(48), ಚೌಡಮ್ಮ(60), ನೇತ್ರಾ(32), ಬಂದಿಗೇಗೌಡ(58), ಕೆಂಪಾಜಮ್ಮ (55), ಬಸವರಾಜು(50), ಸಾವಿತ್ರಮ್ಮ(52), ಚೌಡಮ್ಮ(57), ಮಹದೇವಮ್ಮ(40), ವಸಂತ(48), ಸರೋಜಮ್ಮ(50), ಮೀನಾಕ್ಷಿ(48), ಕರಿಯಪ್ಪ(60), ಚಿಕ್ಕಮರೀಗೌಡ(60), ಪುಟ್ಟಸ್ವಾಮಿ(50), ಗೌರಮ್ಮ(45) ಗಾಯಗೊಂಡವರು.

ಚಾಲಕ ಸಂತೋಷ್‌ ತಮ್ಮ ಸರಕು ವಾಹನವನ್ನು ಮಳವಳ್ಳಿ ತಾಲೂಕು ಹಿಟ್ಟನಹಳ್ಳಿ ಕೊಪ್ಪಲಿಂದ ಅಜ್ಜಹಳ್ಳಿಯ ಸಾವಿನ ಮನೆಗೆ ಜನರನ್ನು ಕರೆತರುತ್ತಿದ್ದಾಗ ಬೊಮ್ಮನದೊಡ್ಡಿ ಸಮೀಪದ ಸಣ್ಣ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿ ಹೊಡೆದಿದೆ. ಈ ವೇಳೆ ವಾಹನದಲ್ಲಿದ್ದ ಎಲ್ಲರೂ ಗಾಯಗೊಂಡಿದ್ದಾರೆ.

ಕೆ.ಎಂ.ದೊಡ್ಡಿ ಠಾಣಾ ಎಎಸ್‌ಐ ಗೋವಿಂದಪ್ಪ ಹಾಗೂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಗಾಯಾಳುಗಳಿಗೆ ಕೆ.ಎಂ.ದೊಡ್ಡಿ ಸರಕಾರಿ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ಹೆಚ್ಚಿನ ಚಿಕಿತ್ಸೆಗಾಗಿ ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕೆ.ಎಂ.ದೊಡ್ಡಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ