ಆ್ಯಪ್ನಗರ

ನಾಗೇಂದ್ರ ಮನೆಗೆ ಚಲುವರಾಯಸ್ವಾಮಿ ಭೇಟಿ: ಸಾಂತ್ವನ

ಶ್ರೀರಂಗಪಟ್ಟಣ: ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ಹಲ್ಲೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ನಾಗೇಂದ್ರ ಅವರ ಮನೆಗೆ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಮಂಗಳವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

Vijaya Karnataka 8 Aug 2018, 5:00 am
ಶಾಸಕ ಬೆಂಬಲಿಗರ ಹಲ್ಲೆ ಪ್ರಕರಣ: 50 ಸಾವಿರ ರೂ. ವೈಯಕ್ತಿಕ ಪರಿಹಾರ
Vijaya Karnataka Web visit nagendras home chaluvarasaswamy comfort
ನಾಗೇಂದ್ರ ಮನೆಗೆ ಚಲುವರಾಯಸ್ವಾಮಿ ಭೇಟಿ: ಸಾಂತ್ವನ


ಸಿದ್ದು, ಗೃಹಮಂತ್ರಿ ಜತೆ ಚರ್ಚೆ: ಭರವಸೆ


ಶ್ರೀರಂಗಪಟ್ಟಣ: ಶಾಸಕ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರ ಹಲ್ಲೆಯಿಂದ ಮನನೊಂದು ಆತ್ಮಹತ್ಯೆ ಮಾಡಿಕೊಂಡ ನಾಗೇಂದ್ರ ಅವರ ಮನೆಗೆ ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಮಂಗಳವಾರ ಭೇಟಿ ನೀಡಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದರು.

ಮಾಜಿ ಶಾಸಕರಾದ ಎ.ಬಿ.ರಮೇಶಬಂಡಿಸಿದ್ದೇಗೌಡ, ಎಚ್‌.ಪಿ.ರಾಮು ಹಾಗೂ ಕೆಪಿಸಿಸಿ ಸದಸ್ಯ ಎಸ್‌.ಸಚ್ಚಿದಾನಂದ ಅವರ ಜತೆ ಭೇಟಿ ನೀಡಿದ್ದ ಅವರು, ಮೃತನ ಕುಟುಂಬಕ್ಕೆ 50 ಸಾವಿರ ರೂ ತಾತ್ಕಾಲಿಕ ಪರಿಹಾರ ವಿತರಿಸಿದರು.

ಮೃತ ನಾಗೇಂದ್ರನ ಸಹೋದರ ನಾಗೇಶ್‌ ಮಾತನಾಡಿ, ''ನನ್ನ ಅಣ್ಣ ಮಾಜಿ ಶಾಸಕ ರಮೇಶಬಂಡಿಸಿದ್ದೇಗೌಡ ಅವರ ಕಟ್ಟಾ ಬೆಂಬಲಿಗನಾಗಿದ್ದ. ಅರಕೆರೆ ಬಾರ್‌ ಒಂದರಲ್ಲಿ ರವೀಂದ್ರ ಶ್ರೀಕಂಠಯ್ಯ ಬೆಂಬಲಿಗರೊಂದಿಗಿನ ಕ್ಷುಲಕ ವಿಚಾರದ ಜಗಳಕ್ಕೆ ಎಂಎಲ್‌ಎ ಬೆಂಬಲಿಗರು ಹಲ್ಲೆ ನಡೆಸಿದ್ದಾರೆ. ಸ್ವಗ್ರಾಮಕ್ಕೆ ಬಂದ ಮೇಲೂ ಬೈಕ್‌ನಲ್ಲಿ ಅಟ್ಟಿಸಿಕೊಂಡು ಬಂದು ಥಳಿಸಿದರು. ನಾನು ಅವರ ಕಾಲಿಗೆ ಬಿದ್ದು ಬಿಟ್ಟು ಬಿಡುವಂತೆ ಕೇಳಿಕೊಂಡರೂ ಬಿಡಲಿಲ್ಲ'' ಎಂದು ಬಿಕ್ಕಳಿಸುತ್ತ ಚಲುವರಾಯಸ್ವಾಮಿ ಎದುರು ನೋವು ತೋಡಿಕೊಂಡರು.

ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ ಮಾತನಾಡಿ, ಕ್ಷೇತ್ರದಲ್ಲಿ ರಮೇಶಬಂಡಿಸಿದ್ದೇಗೌಡ, ಅವರ ತಂದೆ ಬಂಡಿಸಿದ್ದೇಗೌಡ, ತಾಯಿ ವಿಜಯಲಕ್ಷ್ಮಿ ಸೇರಿ 35 ವರ್ಷ ಶಾಸಕರಾಗಿದ್ದಾರೆ. ಇಂತಹ ಘಟನೆಗಳು ನಡೆದಿರಲಿಲ್ಲ. ಜಿಲ್ಲೆಯ ಅಭಿವೃದ್ಧಿ ಬಯಸಿ ಕ್ಷೇತ್ರದ ಜನ ಒಂದೇ ಪಕ್ಷ ಕ್ಕೆ ಬಹುಮತ ನೀಡಿದ್ದಾರೆ. ಚುನಾವಣೆ ಮುಗಿದ ಮೂರು ತಿಂಗಳಿಗೆ ದ್ವೇಷದ ರಾಜಕೀಯ ಆರಂಭವಾಗಿದೆ. ನಮ್ಮ ಪಕ್ಷ ದ ಕಾರ‍್ಯಕರ್ತ ನಾಗೇಂದ್ರ ಸಾವು ಕುರಿತು ಜಿಲ್ಲಾಡಳಿತ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ನಿಕ್ಷ ಪಕ್ಷ ಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಬೇಕು. ತಲೆ ಮರೆಸಿಕೊಂಡಿರುವಆರೋಪಿಗಳನ್ನು ಶೀಘ್ರ ಬಂಧಿಸಬೇಕು ಎಂದು ಒತ್ತಾಯಿಸಿದರು.

''ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ರಾಧಿಕಾ ಒಂದು ಪಕ್ಷ ದ ಏಜೆಂಟ್‌ರಂತೆ ವರ್ತಿಸುತ್ತಿದ್ದಾರೆ. ಇಬ್ಬರೂ ಒಂದೇ ಪಕ್ಷ ದವರು ಎಂದು ಹೇಳಿಕೆ ನೀಡುತ್ತಿದ್ದಾರೆ. ಅವರೇನೂ ವಿಧಾನಸಭೆ ಚುನಾವಣಾ ವೇಳೆ ಪ್ರಚಾರದ ಹೊಣೆಗಾರಿಕೆ ಹೊತ್ತಕೊಂಡಿದ್ದರೆ?'' ಎಂದು ಹರಿಹಾಯ್ದರು. ''ಕ್ಷೇತ್ರದಲ್ಲಿ ಮತ್ತೊಂದು ಇಂತಹ ಘಟನೆ ನಡೆಯದಂತೆ ಮುನ್ನೆಚ್ಚರಿಕೆ ವಹಿಸಬೇಕು. ಸಮ್ಮಿಶ್ರ ಸರಕಾರ ಅಧಿಕಾರದಲ್ಲಿದೆ ಎಂದು ಕೈ ಕಟ್ಟಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಪಕ್ಷ ದ ಕಾರ‍್ಯಕರ್ತರಿಗೆ ಕಿರುಕುಳವಾದರೆ ಬೀದಿಗಿಳಿದು ಹೋರಾಟ ನಡೆಸಬೇಕಾಗುತ್ತದೆ'' ಎಂದು ಎಚ್ಚರಿಸಿದರು.

ಈ ಸಂಬಂಧ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಗೃಹಮಂತ್ರಿ ಡಾ.ಜಿ.ಪರಮೇಶ್ವರ್‌ ಹಾಗೂ ಪಕ್ಷ ದ ಅಧ್ಯಕ್ಷ ದಿನೇಶ್‌ಗುಂಡುರಾವ್‌ ಅವರ ಜತೆಯೂ ಚರ್ಚಿಸಲಾಗುವುದು ಎಂದು ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ