ಆ್ಯಪ್ನಗರ

ನನ್ನನ್ನೂ ಸೇನೆಗೆ ಸೇರಿಸಿಕೊಳ್ಳಿ, ಉಗ್ರರ ಚೆಂಡಾಡುತ್ತೇನೆ: ಹುತಾತ್ಮ ಯೋಧ ಗುರು ಪತ್ನಿ ಕಲಾವತಿ

ಬಹುತೇಕ ಪ್ರತಿದಿನವೂ ತನ್ನ ಪತಿ ಕರೆ ಮಾಡುತ್ತಿದ್ದರು. ಆದರೆ ದಾಳಿ ನಡೆದ ದಿನ ಸ್ವಲ್ಪ ಬ್ಯುಸಿಯಾಗಿದ್ದರು. ಹಾಗಾಗಿ ನಂತರ ಕರೆ ಮಾಡುವುದಾಗಿ ಹೇಳಿದ್ದರು. ಆದರೆ ಈ ಕರೆ ಬರಲೇ ಇಲ್ಲ. ನಾನು ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ

Vijaya Karnataka Web 17 Feb 2019, 9:26 am
ಮಂಡ್ಯ: ನನ್ನನ್ನೂ ಸೇನೆಗೆ ಸೇರಿಸಿಕೊಳ್ಳಿ. ಉಗ್ರರ ಚೆಂಡಾಡುತ್ತೇನೆ. ನನ್ನ ಪತಿ ಅರ್ಧಕ್ಕೆ ಬಿಟ್ಟು ಹೋಗಿರುವ ಕೆಲಸವನ್ನು ಪೂರೈಸುತ್ತೇನೆ. ನನ್ನ ಪತಿಯ ಆಸೆಗಳನ್ನು ಈಡೇರಿಸುತ್ತೇನೆ...
Vijaya Karnataka Web ಕಲಾವತಿ
ಕಲಾವತಿ


ಇದು ಮಂಡ್ಯದ ಹುತಾತ್ಮ ಯೋಧ ಎಚ್‌ ಗುರು ಪತ್ನಿ ಮನದಾಳದ ಮಾತುಗಳು.

ಮಂಡ್ಯದಲ್ಲಿ ಖಾಸಗಿ ವಾಹಿನಿಗಳ ಜತೆ ಮಾತನಾಡಿದ ಕಲಾವತಿ, ತಮ್ಮ ಪತಿಯ ಬಗ್ಗೆ ಹಲವು ವಿಷಯಗಳನ್ನುಹಂಚಿಕೊಂಡರು.

ಅವರ ಪತ್ನಿ ಅನ್ನೋದಕ್ಕೆ ನಿಜಕ್ಕೂ ಹೆಮ್ಮೆ ಎನಿಸಿದೆ. ದೇಶದ ಸೇವೆ ಮಾಡುವಾಗ ತನ್ನ ಪತಿ ದೇವರನ್ನು ಆ ದೇವರು ಕರೆದುಕೊಂಡು ಹೋಗಿ ಬಿಟ್ಟಿದ್ದಾರೆ. ಅವರ ಈಗ ಅರ್ಧ ಕೆಲಸ ಮಾಡಿದ್ದಾರೆ. ನಾನು ಉಳಿದ ಕೆಲಸವನ್ನು ಮಾಡಲು ಸಜ್ಜಾಗಿದ್ದೇನೆ. ಸೇನೆಗೆ ನಾನೂ ಸೇರಬೇಕು ಎನಿಸಿದೆ ಎಂದರು.

ಬಹುತೇಕ ಪ್ರತಿದಿನವೂ ತನ್ನ ಪತಿ ಕರೆ ಮಾಡುತ್ತಿದ್ದರು. ಆದರೆ ದಾಳಿ ನಡೆದ ದಿನ ಸ್ವಲ್ಪ ಬ್ಯುಸಿಯಾಗಿದ್ದರು. ಹಾಗಾಗಿ ನಂತರ ಕರೆ ಮಾಡುವುದಾಗಿ ಹೇಳಿದ್ದರು. ಆದರೆ ಈ ಕರೆ ಬರಲೇ ಇಲ್ಲ. ನಾನು ಅವರೊಂದಿಗೆ ಮಾತನಾಡಲು ಸಾಧ್ಯವಾಗಲಿಲ್ಲ ಎಂದರು.

ಇನ್ನೂ 10 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಬೇಕೆಂದು ಗುರು ಸದಾ ನನ್ನೊಂದಿಗೆ ಚರ್ಚಿಸುತ್ತಿದ್ದರು ಎಂದು ಕಲಾವತಿ ತಿಳಿಸಿದರು.

ಚಿಕ್ಕಂದಿನಿಂದಲೇ ಗುರು ಅವರಿಗೆ ಪೊಲೀಸ್‌ ಆಗಬೇಕು ಎಂಬ ಆಸೆ ಇತ್ತು. ಅದಕ್ಕಾಗಿಯೇ ಚಿಕ್ಕಂದಿನಿಂದಲೇ ಪೊಲೀಸ್ ಸಮವಸ್ತ್ರ ಧರಿಸಿ ಫೋಟೋಗಳನ್ನು ತೆಗೆಸಿಕೊಳ್ಳುತ್ತಿದ್ದರು. ಅಲ್ಲದೇ ಎಲ್ಲರೂ ಧೈರ್ಯದಿಂದ ಇರಬೇಕು ಎಂದು ಸದಾ ಹುರಿದುಂಬಿಸುತ್ತಿದ್ದರು ಎಂದು ಹೇಳಿದರು.

ಹಲವಾರು ಸೈನಿಕರನ್ನು ಬಲಿ ತೆಗೆದುಕೊಂಡಿರುವ ಉಗ್ರರನ್ನು ಸಾಯಿಸಬೇಕು. ಪ್ರಧಾನಿ ನರೇಂದ್ರ ಮೋದಿ ಅವರೇ ಪಾಕಿಸ್ತಾನವನ್ನು ಬಿಡಬೇಡಿ. ಎಲ್ಲರನ್ನೂ ಸಾಯಿಸಿಬಿಡಿ. ಇನ್ನಾದರೂ ಸೈನಿಕ ಕುಟುಂಬಗಳಿಗೆ ನೆಮ್ಮದಿ ಕೊಡಿಸಿಬಿಡಿ ಎಂದು ಕಲಾವತಿ ತಮ್ಮ ದುಃಖದ ನಡುವೆಯೂ ಮನವಿ ಮಾಡಿಕೊಂಡರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ