ಆ್ಯಪ್ನಗರ

ದರ್ಶನ್‌ ಮನೆ ಮೇಲಿನ ದಾಳಿಗೆ ಸಂಬಂಧವಿಲ್ಲ: ಸಚಿವ ಸಿಎಸ್ಪಿ

ವಿಕ ಸುದ್ದಿಲೋಕ ಪಾಂಡವಪುರ ಬೇರೆಯವರ ಹೆಸರು ಹೇಳಿಕೊಂಡು ಮಂಡ್ಯದಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿಎಸ್‌...

Vijaya Karnataka 24 Mar 2019, 5:00 am
ಪಾಂಡವಪುರ: ಬೇರೆಯವರ ಹೆಸರು ಹೇಳಿಕೊಂಡು ಮಂಡ್ಯದಲ್ಲಿ ರಾಜಕಾರಣ ಮಾಡಲು ಸಾಧ್ಯವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್‌. ಪುಟ್ಟರಾಜು ಅವರು ಸುಮಲತಾ ಅವರಿಗೆ ಟಾಂಗ್‌ ನೀಡಿದರು.
Vijaya Karnataka Web we are not in attack on actor darshan home says minister cs puttaraju
ದರ್ಶನ್‌ ಮನೆ ಮೇಲಿನ ದಾಳಿಗೆ ಸಂಬಂಧವಿಲ್ಲ: ಸಚಿವ ಸಿಎಸ್ಪಿ


ಕತ್ತಲೆಯಲ್ಲಿ ನಿಂತು ಅವಿವೇಕಿಗಳ ಕೈಯಿಂದ ಕಲ್ಲು ಹೊಡೆಸಿದರೆ ನಾವು ಹೆದರೋದಿಲ್ಲ ಎಂದು ಸೋಮನಹಳ್ಳಿ ಕಲ್ಲು ತೂರಾಟ ಪ್ರಕರಣ ಸಂಬಂಧ ಆಕ್ರೋಶ ವ್ಯಕ್ತಪಡಿಸಿದ ಅವರು, ಇನ್ನೂ ಅದೆಷ್ಟು ಕಲ್ಲು ಹೊಡೆಸುತ್ತಾರೋ ಹೊಡೆಸಲಿ ಎಂದು ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.

ದರ್ಶನ್‌ ಮನೆ ಮೇಲೆ ದಾಳಿ ನಡೆಸಿರುವ ವಿಷಯ ಕುರಿತು ಸುಮಲತಾ ಅವರು, ಯಾವ ದೂರದೃಷ್ಟಿಯಲ್ಲಿ ಹೇಳಿಕೆ ಕೊಟ್ಟಿದ್ದಾರೋ ನನಗೆ ಗೊತ್ತಿಲ್ಲ. ದರ್ಶನ್‌ ಮನೆ ಮೇಲಿನ ದಾಳಿಗೂ ನಮಗೂ ಸಂಬಂಧವಿಲ್ಲ, ದಾಳಿಯನ್ನು ನಾನೂ ಖಂಡಿಸುತ್ತೇನೆ. ಯಾರ ಅಭಿಮಾನಿಗಳು ದಾಳಿ ನಡೆಸಿದರೂ ಅದು ತಪ್ಪೇ ಎಂದು ಸ್ಪಷ್ಟ ಪಡಿಸಿದರು.

ಅಭ್ಯರ್ಥಿ ನಿಖಿಲ್‌ ಕುಮಾರಸ್ವಾಮಿ ಮಾತನಾಡಿ, ದರ್ಶನ್‌ ಮನೆಯ ಮೇಲೆ ಕಲ್ಲು ತೂರಾಟ ಬಗ್ಗೆ ನನಗೆ ಮಾಹಿತಿ ಇಲ್ಲ. ಅಷ್ಟಕ್ಕೂ ದರ್ಶನ್‌ ಮನೆಯ ಮೇಲೆ ನಾವೇಕೆ ಕಲ್ಲು ತೂರಾಟ ನಡೆಸಲಿ? ಜಿಲ್ಲೆಯಲ್ಲಿ ನಾನು ಹೋದ ಕಡೆಯಲ್ಲೆಲ್ಲ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ. ಚುನಾವಣೆಯಲ್ಲಿ ಗೆಲುವು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ