ಆ್ಯಪ್ನಗರ

ಪತಿ ಕೊಲೆಗೆ ಸುಪಾರಿ ನೀಡಿದ ಪತ್ನಿ: ಮೂವರ ಬಂಧನ

ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿ ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಮೂವರನ್ನು ಮಂಡ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.

Vijaya Karnataka 29 Jun 2018, 5:00 am
ಮಂಡ್ಯ: ಅನೈತಿಕ ಸಂಬಂಧದ ಹಿನ್ನೆಲೆಯಲ್ಲಿ ವ್ಯಕ್ತಿ ಕೊಲೆಗೆ ಯತ್ನಿಸಿದ ಆರೋಪದ ಮೇರೆಗೆ ಮೂವರನ್ನು ಮಂಡ್ಯ ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web wife give to supari kill her husband three arrested
ಪತಿ ಕೊಲೆಗೆ ಸುಪಾರಿ ನೀಡಿದ ಪತ್ನಿ: ಮೂವರ ಬಂಧನ


ಪಾಂಡವಪುರ ತಾಲೂಕು ಅಗಟಹಳ್ಳಿ ನಿವಾಸಿ ಅನಿಲ್‌ಕುಮಾರ್‌(30), ಮಂಡ್ಯ ತಾಲೂಕು ಚಂದಗಾಲು(ದುದ್ದ) ಚನ್ನೇಗೌಡ(35), ಕೋಣನಹಳ್ಳಿ ಕುಪ್ಪುಸ್ವಾಮಿ(35) ಬಂಧಿತರು. ಇವರು ಜೂ.9ರಂದು ರಾತ್ರಿ ಮಂಡ್ಯ ತಾಲೂಕು ಯಡಿಯೂರು ಕೋಡಿ ಬಳಿ ರಮೇಶ್‌ ಎಂಬುವರ ಕೊಲೆಗೆ ಯತ್ನಿಸಿದ್ದರು. ಶಿವಮೊಗ್ಗದಿಂದ ರೈಲಿನಲ್ಲಿ ಆಗಮಿಸಿದ ರಮೇಶ್‌ ಯಲಿಯೂರು ನಿಲ್ದಾಣದಲ್ಲಿ ಇಳಿದು ಪತ್ನಿಯ ಊರು ಯಲಿಯೂರಿಗೆ ಹೋಗುತ್ತಿದ್ದಾಗ ಆರೋಪಿಗಳು ಡ್ರಾಪ್‌ ಕೊಡುವ ನೆಪದಲ್ಲಿ ಅವರನ್ನು ಬೈಕ್‌ನಲ್ಲಿ ಕೂರಿಸಿಕೊಂಡು ಕಬ್ಬಿಣದ ರಾಡ್‌ನಿಂದ ಹಲ್ಲೆ ನಡೆಸಿದ್ದರು.

ಅದೇ ಮಾರ್ಗದಲ್ಲಿ ವಾಹನವೊಂದು ಬಂದಾಗ ಆರೋಪಿಗಳು ಅಲ್ಲಿಂದ ಪರಾರಿಯಾಗಿದ್ದರು. ಈ ಸಂಬಂಧ ರಮೇಶ್‌ನ ಭಾವ ಮೈದುನ ಯಲಿಯೂರು ನಿತಿನ್‌ಗೌಡ ಎಂಬುವರು ನೀಡಿದ ದೂರಿನ ಮೇರೆಗೆ ಮಂಡ್ಯ ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆರೋಪಿಗಳ ಪತ್ತೆ ಸಂಬಂಧ ಮಂಡ್ಯ ಗ್ರಾಮಾಂತರ ಸಿಪಿಐ ಬಿ.ಕೆ.ಸುರೇಶ್‌ಕುಮಾರ್‌ ರಚಿಸಿದ್ದ ಪ್ರತ್ಯೇಕ ತನಿಖಾ ತಂಡವು ಶಂಕೆ ಮೇರೆಗೆ ಅನಿಲ್‌ಕುಮಾರ್‌ ಮತ್ತು ಚೆನ್ನೇಗೌಡ ಅವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ರಮೇಶನ ಕೊಲೆಗೆ ಪತ್ನಿಯೇ 1 ಲಕ್ಷ ರೂ.ಗೆ ಸುಪಾರಿ ನೀಡಿದ್ದ ಮಾಹಿತಿ ಬಹಿರಂಗವಾಗಿದೆ ಎಂದು ಪೊಲೀಸರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ರಮೇಶನ ಪತ್ನಿ ಹಾಗೂ ತನಗೂ ಸಂಬಂಧವಿದ್ದು, ತಾವಿಬ್ಬರು ಮದುವೆಯಾಗಲು ಈ ಕೃತ್ಯಕ್ಕೆ ಮುಂದಾಗಿದ್ದಾಗಿ ಅನಿಲ್‌ಕುಮಾರ್‌ ವಿಚಾರಣೆ ವೇಳೆ ತಪ್ಪೊಪ್ಪಿಕೊಂಡಿದ್ದಾನೆ. ಸುಪಾರಿ ನೀಡಿದ್ದ ಗಾಯಾಳು ರಮೇಶನ ಪತ್ನಿ ತಲೆಮರೆಸಿಕೊಂಡಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ