ಆ್ಯಪ್ನಗರ

ನಾಡಿಗೆ ನುಗ್ಗಿದ ಕಾಡಾನೆ ಹಿಂಡು: 4 ಎಕರೆ ಭತ್ತದ ಬೆಳೆ ನಾಶ

ಇನ್ನು ಕಾಡಾನೆಗಳ ಹಿಂಡು ನಾಡಿಗೆ ಎಂಟ್ರಿ ಕೊಟ್ಟರೂ ಅರಣ್ಯ ಇಲಾಖಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

Vijaya Karnataka Web 7 Nov 2018, 12:08 pm
ಮಂಡ್ಯ: ನಾಡಿಗೆ ಬಂದ ಕಾಡಾನೆ ಹಿಂಡು 4 ಎಕರೆ ಭತ್ತದ ಬೆಳೆ ನಾಶ ಮಾಡಿದ ಘಟನೆ ಮದ್ದೂರು ತಾಲೂಕಿನ ಕೆ. ಕೋಡಿಹಳ್ಳಿ ಗ್ರಾಮದಲ್ಲಿ ನಡೆದಿದೆ.
Vijaya Karnataka Web Elephant


ಆನೆ ಹಿಂಡಿನಲ್ಲಿ 4 ದೊಡ್ಡ ಆನೆ ಹಾಗೂ 1 ಮರಿ ಇದೆ ಎನ್ನಲಾಗಿದೆ. ಕಾಡಾನೆ ಹಾವಳಿಯನ್ನು ತಪ್ಪಿಸುವಂತೆ ಸ್ಥಳೀಯರು ಆಗ್ರಹಿಸಿದ್ದು, ದಾಳಿಯಿಂದ ಉಂಟಾಗಿರೋ ಬೆಳೆ ನಷ್ಟಕ್ಕೆ ಪರಿಹಾರ ನೀಡುವಂತೆ ಒತ್ತಾಯ ಮಾಡಿದ್ದಾರೆ.

ಇನ್ನು ಕಾಡಾನೆಗಳ ಹಿಂಡು ನಾಡಿಗೆ ಎಂಟ್ರಿ ಕೊಟ್ಟರೂ ಅರಣ್ಯ ಇಲಾಖಾ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದ್ದಾರೆ‌.

ಆನೆ ನೋಡಲು ಜನಜಂಗುಳಿ

ಕಾಡಾನೆಗಳ ಹಿಂಡು ಮದ್ದೂರು ಸಮೀಪ ಬಂದಿವೆ ಎಂಬ ವಿಚಾರ ತಿಳಿಯುತ್ತಿದ್ದಂತೆ ಸ್ಥಳೀಯ ಜನತೆ ಆನೆಗಳನ್ನು ನೋಡಲು ಸೇರಿಕೊಂಡಿದ್ದಾರೆ. ಮದ್ದೂರು ಸೇರಿದಂತೆ ಸುತ್ತಮುತ್ತಲಿನ ಹಳ್ಳಿಯ ರೈತರು ಸ್ಥಳಕ್ಕೆ ಆಗಮಿಸಿದ್ದು, ಕುತೂಹದಿಂದ ವೀಕ್ಷಣೆ ಮಾಡುತ್ತಿದ್ದ ದೃಶ್ಯ ಕಂಡು ಬಂದಿತು. ಜೊತೆಗೆ ಆನೆಗಳನ್ನು ಕಾಡಿಗಟ್ಟುವ ಪ್ರಯತ್ನವೂ ನಡೆಯುತ್ತಿದೆ‌.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ