ಆ್ಯಪ್ನಗರ

ಗುರು ಹುತಾತ್ಮ: ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲ, ಕುಟುಂಬದ ಸಾಲ, ಸಮಸ್ಯೆ ತೀರಿಸುತ್ತೇನೆ ಎಂದ ಪ್ರಕಾಶ್‌ ರೈ

ನಮ್ಮ ಯೋಧರನ್ನು ಬಲಿ ತೆಗೆದುಕೊಂಡಿರುವ ಉಗ್ರರಿಗೆ ತಕ್ಕ ಶಾಸ್ತಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಪ್ರಕಾಶ್‌ ರೈ ತಿಳಿಸಿದರು.

Vijaya Karnataka Web 16 Feb 2019, 5:25 pm
ಮಂಡ್ಯ: ಉಗ್ರರ ಪೈಶಾಚಿಕ ಕೃತ್ಯದಲ್ಲಿ ಯೋಧರು ಹತ್ಯೆಗೀಡಾಗಿರುವುದು ನಿಜಕ್ಕೂ ಆಘಾತಕಾರಿ. ಮಗನ ಅಗಲಿಕೆ ನೋವು ಸಹಿಸಿಕೊಳ್ಳಲು ಸಾಧ್ಯವಿಲ್ಲ. ಸ್ವಾರ್ಥಕ್ಕಲ್ಲ ದೇಶ ಸೇವೆಗಾಗಿ ಮಗನನ್ನ ಮೀಸಲಿಟ್ಟಿದ್ದರು. ಇಂಥ ಕುಟುಂಬದ ಸಮಸ್ಯೆಗಳನ್ನು ತೀರಿಸುತ್ತೇನೆ ಎಂದು ನಟ, ರಾಜಕಾರಣಿ ಪ್ರಕಾಶ್‌ ರೈ ತಿಳಿಸಿದ್ದಾರೆ.
Vijaya Karnataka Web ಪ್ರಕಾಶ್‌ ರೈ
ಪ್ರಕಾಶ್‌ ರೈ


ಹುತಾತ್ಮ ಯೋಧ ಗುರು ಅವರ ನಿವಾಸಕ್ಕೆ ಆಗಮಿಸಿ ಕುಟುಂಬ ಸದಸ್ಯರಿಗೆ ಸಾಂತ್ವನ ಹೇಳಿದ ನಂತರ ಪ್ರಕಾಶ್‌ ರೈ ಮಾತನಾಡಿದರು.

ಗುರು ಅವರ ಅಗಲಿಕೆಯಿಂದ ಕುಟುಂಬ ಈಗ ಸಂಕಷ್ಟದಲ್ಲಿದೆ. ನಿಮ್ಮ ಕಷ್ಟಗಳಲ್ಲಿ ಭಾಗಿಯಾಗುತ್ತೇನೆ ಎಂದು ಭರವಸೆ ನೀಡಿದ್ದೇನೆ. ಉಗ್ರರ ಇಂಥ ಹೇಯ ಕೃತ್ಯವನ್ನು ಪಕ್ಷಾತೀತವಾಗಿ ಎಲ್ಲರೂ ಖಂಡಿಸಬೇಕು ಎಂದರು.

ನಮ್ಮ ಯೋಧರನ್ನು ಬಲಿ ತೆಗೆದುಕೊಂಡಿರುವ ಉಗ್ರರಿಗೆ ತಕ್ಕ ಶಾಸ್ತಿಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ತೆಗೆದುಕೊಳ್ಳುವ ನಿರ್ಧಾರಕ್ಕೆ ನಮ್ಮ ಬೆಂಬಲ ಇದೆ ಎಂದು ಪ್ರಕಾಶ್‌ ರೈ ತಿಳಿಸಿದರು.

ದೇಶದ ಸೈನ್ಯದ ಜತೆ ನಾವೆಲ್ಲ ನಿಲ್ಲಬೇಕು. ಈ ಘಟನೆಯಿಂದ ನಾವೆಲ್ಲಾ ಪಾಠ ಕಲಿಯಬೇಕು. ಘಟನೆ ನಡೆದಾಗ ಕೇವಲ ಎಮೋಶನಲ್ ಮಾತುಗಳಿಗೆ ಸೀಮಿತವಾಗಬಾರದು. ಮಾನವೀಯತೆಯನ್ನ ಎಲ್ಲರೂ ಬಳಸಿಕೊಳ್ಳಬೇಕು. ವಾರದೊಳಗೆ ಮತ್ತೆ ಬರ್ತೀನಿ. ಆ ಕುಟುಂಬದ ಸಾಲ, ಸಹೋದರರ ಸಮಸ್ಯೆಗೆ ಸ್ಪಂದಿಸುತ್ತೇನೆ ಎಂದು ಪ್ರಕಾಶ್‌ ರೈ ತಿಳಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ