ಆ್ಯಪ್ನಗರ

ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಚಿಂತಿಸಿ

ಜೆಎಂಎಫ್‌ಸಿ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿಕೆ...

Vijaya Karnataka 28 Aug 2018, 5:00 am
ಜೆಎಂಎಫ್‌ಸಿ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಕೆ.ರವಿಕಾಂತ್‌ ಸಲಹೆ
Vijaya Karnataka Web worry about solving social problems world youth day celebration in pandavapura
ಸಾಮಾಜಿಕ ಸಮಸ್ಯೆಗಳ ಪರಿಹಾರಕ್ಕೆ ಚಿಂತಿಸಿ


ಪಾಂಡವಪುರ: ಯುವಜನತೆ ಶೈಕ್ಷ ಣಿಕ ಅಭಿವೃದ್ಧಿ ಹೊಂದುವ ಮೂಲಕ ದೇಶದ ಸಾಮಾಜಿಕ ಸಮಸ್ಯೆಗಳ ಚಿಂತನೆ ಮಾಡಬೇಕು ಎಂದು ಪಟ್ಟಣದ ಜೆಎಂಎಫ್‌ಸಿ ಹಿರಿಯ ಸಿವಿಲ್‌ ನ್ಯಾಯಾಧೀಶ ಬಿ.ಕೆ.ರವಿಕಾಂತ್‌ ಹೇಳಿದರು.

ಪಟ್ಟಣದ ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ ಹಾಗೂ ಸರಕಾರಿ ಪದವಿ ಪೂರ್ವ ಕಾಲೇಜಿನ ಸಂಯುಕ್ತಾಶ್ರಯದಲ್ಲಿ ಸೋಮವಾರ ಮಧ್ಯಾಹ್ನ ಆಯೋಜಿಸಿದ್ದ 'ಅಂತಾರಾಷ್ಟ್ರೀಯ ಯುವ ದಿನ' ಕಾರ‍್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಯುವ ಜನತೆ ಪಾತ್ರ ಬಹಳ ಮುಖ್ಯವಾದದ್ದು. ಯುವ ಜನತೆ ಮನಸ್ಸು ಮಾಡಿದರೆ ಪ್ರಪಂಚದಲ್ಲಿ ಅಸಾಧ್ಯವಾದದ್ದು ಯಾವುದು ಇಲ್ಲ, ಅಷ್ಟೊಂದು ಶಕ್ತಿ ಯುವಜನಾಂಗಕ್ಕಿದೆ. ಅದಕ್ಕಾಗಿಯೇ ಸ್ವಾಮಿ ವಿವೇಕಾನಂದರು ಯುವಜನಾಂಗವೇ ದೇಶದ ಶಕ್ತಿ ಎಂಬುದಾಗಿ ಹೇಳಿದ್ದರು. ಸ್ವಾಮಿವಿವೇಕಾನಂದರ ಆದರ್ಶ, ತತ್ವ, ಹೋರಾಟದ ಗುಣಗಳು ಹಾಗೂ ಜೀವನದ ಶೈಲಿಯನ್ನು ಮೈಗೂಡಿಸಿಕೊಂಡು ದೇಶದ ಅಭಿವೃದ್ಧಿಗೆ ಯುವ ಸಮುದಾಯ ಕೊಡುಗೆ ನೀಡಬೇಕು ಎಂದು ಕಿವಿಮಾತು ಹೇಳಿದರು.

ದೇಶದ ಭವಿಷ್ಯ ಇಂದಿನ ಯುವಕರ ಮೇಲಿರುವುದರಿಂದ ಯುವಜನತೆ ಶೈಕ್ಷ ಣಿಕವಾಗಿ ಪ್ರಗತಿ ಹೊಂದಬೇಕು. ದೇಶದ ಸಂವಿಧಾನ, ಕಾನೂನುಗಳನ್ನು ಬಗ್ಗೆ ಅರಿವು ಮೂಡಿಸಿಕೊಂಡು ದೇಶದಲ್ಲಿ ಎದುರಾಗಿರುವ ಸಾಮಾಜಿಕ ಸಮಸ್ಯೆಗಳ ಬಗ್ಗೆ ಚಿಂತಿಸಿ, ಅವುಗಳನ್ನು ನಿವಾರಣೆ ಮಾಡಬೇಕಾಗಿದೆ. ಅತ್ಯಾಚಾರ, ಬಾಲ್ಯ ವಿವಾಹ, ಹೆಣ್ಣು ಭ್ರೂಣಹತ್ಯೆಯಂತಹ ಕಾನೂನುಬಾಹಿತರ ಚಟುವಟಿಕೆಗಳು ದೇಶದ ಅಭಿವೃದ್ಧಿ ಹಿನ್ನೆಡೆಯನ್ನುಂಟು ಮಾಡುತ್ತಿವೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ, ಹೆಣ್ಣು ಭ್ರೂಣಹತ್ಯೆಗಳು ಹೆಚ್ಚಾಗಿರುವುದು ದುರದೃಷ್ಟಕರ ಸಂಗತಿಯಾಗಿದೆ ಎಂದು ಹೇಳಿದರು.

ಕಿರಿಯ ಸಿವಿಲ್‌ ನ್ಯಾಯಾಧೀಶ ಜಗದೀಶ್‌ ಬಿಸೇರೊಟ್ಟಿ ಮಾತನಾಡಿ, ದೇಶದ ಯುವಜನಾಂಗಣದಲ್ಲಿ ಅಪಾರ ಶಕ್ತಿ ಇದೆ. ಅದನ್ನು ದೇಶದ ವಿನಾಶಕ್ಕೆ ಬಳಕೆಮಾಡದೆ ಸದೃಢ ರಾಷ್ಟ್ರ ನಿರ್ಮಾಣಕ್ಕೆ ಬಳಕೆ ಮಾಡಬೇಕು. ಯುವ ಜನಾಂಗ ಜೀವನದಲ್ಲಿ ಪ್ರಾಮಾಣಿಕತೆ. ಪರಿಶ್ರಮ ಹಾಗೂ ಮಾನವೀಯತೆಯ ಮೌಲ್ಯಗಳನ್ನು ಮೈಗೂಡಿಸಿಕೊಂಡು ಗುರು-ಹಿರಿಯರನ್ನು ಗೌರವಿಸುವ ಗುಣಗಳನ್ನು ಬೆಳೆಸಿಕೊಂಡು ಮುನ್ನಡೆದರೆ ದೇಶದಲ್ಲಿ ಉತ್ತಮ ಪ್ರಜೆಯಾಗಿ ಹೊರಹೊಮ್ಮಬಹುದಾಗಿದೆ ಎಂದರು.

ಜನ ಕಾನೂನಿನ ಬಗ್ಗೆ ಸಮರ್ಪಕ ಅರಿವು ಇರದ ಪರಿಣಾಮ ಸಣ್ಣಪುಟ್ಟ ವಿಷಯಗಳಿಗೂ ಕೋರ್ಟ್‌ ಮೆಟ್ಟಿಲೇರುತ್ತಿದ್ದಾರೆ. ಇದರಿಂದ ಅಪರಾಧ ಕೃತ್ಯಗಳು ಹೆಚ್ಚಾಗಿ ಸಮಾಜದಲ್ಲಿ ಶಾಂತಿ, ನೆಮ್ಮದಿ ಕಳೆದುಕೊಳ್ಳುತ್ತಿದ್ದೇವೆ. ಪ್ರತಿಯೊಬ್ಬರೂ ಮೊದಲು ಕಾನೂನಿನ ಬಗ್ಗೆ ಅರಿವು ಮೂಡಿಸಿಕೊಳ್ಳಬೇಕು. ಸಣ್ಣಪುಟ್ಟ ವಿಷಯಗಳಿಗೂ ಕೋರ್ಟ್‌ ಮೆಟ್ಟಿಲೇರುವುದನ್ನು ನಿಲ್ಲಿಸಬೇಕು ಎಂದು ತಿಳಿಸಿದರು.

ಸರಕಾರಿ ಸಹಾಯಕ ಅಭಿಯೋಜಕ ಎಸ್‌.ಶಿವಕುಮಾರ್‌ ಮಾತನಾಡಿ, ಯುವಕರಲ್ಲಿರುವ ಬುದ್ಧಿವಂತಿಕೆ, ಪ್ರಕರತೆ, ಉತ್ಸಾಹ ಹಾಗೂ ಹೋರಾಟದ ಗುಣಗಳು ದೇಶಕಟ್ಟಲು ಸಹಕಾರಿಯಾಗುತ್ತವೆ. ಆ ಕಾರಣಕ್ಕಾಗಿ ಯುವಕರೇ ಭವಿಷ್ಯ ಭಾರತದ ಮುಂದಿನ ನಾಯಕರು ಎಂಬುದಾಗಿ ಹೇಳತ್ತಾರೆ. ಪ್ರಪಂಚದಲ್ಲಿ ಇದುವರೆಗೂ ಮುಂದುವರೆದಿರುವ ಪ್ರತಿಯೊಂದು ರಾಷ್ಟ್ರಗಳಲ್ಲೂ ಶೇ.50ರಷ್ಟು ಯುವಕರಿದ್ದಾರೆ. ಹಾಗಾಗಿ ಯುವಶಕ್ತಿಯನ್ನು ಬಳಕೆ ಮಾಡಿಕೊಂಡು ದೇಶಕಟ್ಟಲು ಮುಂದಾಗಬೇಕು. ಆದರೆ, ಇತ್ತೀಚಿನ ದಿನಗಳಲ್ಲಿ ಯುವಜನಾಂಗ ಮೊಬೈಲ್‌ ಬಳಕೆ, ತಂಬಾಕು ಸೇವನೆಯಂತಹ ದುಶ್ಚಟಕ್ಕೆ ಒಳಗಾಗುತ್ತಿದ್ದಾರೆ ಎಂದು ವಿಷಾದಿಸಿದರು.

ಪ್ರಾಂಶುಪಾಲ ಎಸ್‌.ಚಿದಂಬರ ಅಧ್ಯಕ್ಷ ತೆವಹಿಸಿ ಮಾತನಾಡಿದರು. ವಕೀಲರ ಸಂಘದ ಅಧ್ಯಕ್ಷ ಕೆ.ಎಚ್‌.ರಾಮೇಗೌಡ, ವಕೀಲರಾದ ಶಂಕರ್‌, ಎನ್‌.ಸುಬ್ರಮಣ್ಯ, ಕಾಳೇಗೌಡ, ಉಪಾನ್ಯಾಸಕರಾದ ಪುರಂದರ್‌, ಶಿವಪ್ರಕಾಶ್‌, ಮಹೇಶ್‌ ಇತರರು ಹಾಜರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ