ಆ್ಯಪ್ನಗರ

ದ.ಕ: ಮೂರನೇ ದಿನ ಜುವೆಲ್ಲರಿ ಬಂದ್

ಕೇಂದ್ರ ಬಜೆಟ್‌ನಲ್ಲಿ ಚಿನ್ನದ ವ್ಯಾಪಾರಿಗಳಿಗೆ ಶೇ.1 ಟಿಸಿಎಸ್ ಮತ್ತು ಶೇ.1 ಅಬಕಾರಿ ಶುಲ್ಕ ಹೇರಿಕೆ ಅಲ್ಲದೇ, ಪ್ಯಾನ್ ಕಾರ್ಡ್ ಬಳಕೆ ಖಂಡಿಸಿ ಬುಧವಾರ ಆರಂಭಿಸಿರುವ ಚಿನ್ನದ ವ್ಯಾಪಾರ ಬಂದ್ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದೆ.

ವಿಕ ಸುದ್ದಿಲೋಕ 5 Mar 2016, 3:59 pm
ಮಂಗಳೂರು: ಕೇಂದ್ರ ಬಜೆಟ್‌ನಲ್ಲಿ ಚಿನ್ನದ ವ್ಯಾಪಾರಿಗಳಿಗೆ ಶೇ.1 ಟಿಸಿಎಸ್ ಮತ್ತು ಶೇ.1 ಅಬಕಾರಿ ಶುಲ್ಕ ಹೇರಿಕೆ ಅಲ್ಲದೇ, ಪ್ಯಾನ್ ಕಾರ್ಡ್ ಬಳಕೆ ಖಂಡಿಸಿ ಬುಧವಾರ ಆರಂಭಿಸಿರುವ ಚಿನ್ನದ ವ್ಯಾಪಾರ ಬಂದ್ ಪ್ರತಿಭಟನೆ ಶುಕ್ರವಾರವೂ ಮುಂದುವರಿದಿದೆ.
Vijaya Karnataka Web
ದ.ಕ: ಮೂರನೇ ದಿನ ಜುವೆಲ್ಲರಿ ಬಂದ್


ಗೋಲ್ಡ್ ಜ್ಯುವೆಲ್ಲರಿ ಫೆಡರೇಶನ್ ಹಾಗೂ ಇಂಡಿಯನ್ ಬುಲ್ಲಿಯನ್ ಆ್ಯಂಡ್ ಜ್ಯುವೆಲ್ಲರ್ಸ್‌ ಸಂಘಟನೆಗಳ ಕರೆಯ ಮೇರೆಗೆ ದೇಶಾದ್ಯಂತ ಚಿನ್ನಾಭರಣಗಳ ವ್ಯಾಪಾರ ಸ್ಥಗಿತಗೊಂಡಿದ್ದು, ಪ್ರತಿಭಟನೆಯು ಮಾ.5ರಂದು ಕೂಡಾ ಮುಂದುವರಿಯಲಿದೆ ಎಂದು ದ.ಕ. ಜಿಲ್ಲಾ ಸ್ವರ್ಣ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ನಾಗರಾಜ ಪಾಲ್ಕೆ ತಿಳಿಸಿದ್ದಾರೆ.

ದೇಶದಲ್ಲಿ ಪ್ರಸ್ತುತ ಚಿನ್ನಾಭರಣ ವ್ಯವಹಾರದಲ್ಲಿ ಸುಮಾರು ಮೂರು ಮಿಲಿಯ ಕೆಲಸಗಾರರಿದ್ದು, ಅವರಲ್ಲಿ ಅಧಿಕಾಂಶ ಮಂದಿ ಅನಕ್ಷರಸ್ಥರಾಗಿದ್ದಾರೆ ಮತ್ತು 2000ರಿಂದ 2500 ವರ್ಷಗಳಷ್ಟು ಪುರಾತನವಾದ ಸ್ವರ್ಣ ಕುಸುರಿ ಕಲೆಯನ್ನು ತಮ್ಮ ಜೀವನೋಪಾಯಕ್ಕಾಗಿ ಉಳಿಸಿಕೊಂಡಿದ್ದು, ಕೇಂದ್ರ ಸರಕಾರದ ಕಠಿಣ ಕಾನೂನಿನ ನಿಲುವಿನಿಂದಾಗಿ ಈ ಬಡಪಾಯಿಗಳ ಜೀವನ ಮಟ್ಟ ಅಸ್ತವ್ಯಸ್ತವಾಗುವುದು ಖಚಿತ.

ಕೇಂದ್ರ ಸರಕಾರದ ಪ್ರಸಕ್ತ ಆರ್ಥಿಕ ನೀತಿಯು ಕಪ್ಪು ಹಣ ನಿಗ್ರಹ ಮತ್ತು ಆರ್ಥಿಕ ಪಾರದರ್ಶಕತೆಗಾಗಿ ತಂದಿದ್ದರೂ ಚಿನ್ನಾಭರಣಗಳ ವ್ಯವಹಾರ ಮತ್ತು ಅವಲಂಬಿತ ಉದ್ಯಮ- ಕೆಲಸಗಾರರ ಮೇಲೆ ದುಷ್ಪರಿಣಾಮ ಬೀರಬಹುದು ಎಂದು ಅವರು ಹೇಳಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ