ಆ್ಯಪ್ನಗರ

ಶಬರಿಮಲೆಗೆ ತೆರಳುವ ಬಿಜೆಪಿ ರಾಷ್ಟ್ರೀಯ ತಂಡಕ್ಕೆ ಸಂಸದ ನಳಿನ್‌

ಕೇರಳದಲ್ಲಿ ಬಿಜೆಪಿ ನಾಯಕರ ಬಂಧನ ಹಾಗೂ ಶಬರಿಮಲೆ ಹಾಗೂ ಸುತ್ತಮುತ್ತಲಿನ ಪರಿಸರದ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿ ವರದಿ ಸಲ್ಲಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೂಚನೆ ಮೇರೆಗೆ ರಚಿಸಲಾದ ರಾಷ್ಟ್ರೀಯ ತಂಡದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಡಿ.1ರಿಂದ ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ.

Vijaya Karnataka 29 Nov 2018, 4:58 pm
ಮಂಗಳೂರು : ಕೇರಳದಲ್ಲಿ ಬಿಜೆಪಿ ನಾಯಕರ ಬಂಧನ ಹಾಗೂ ಶಬರಿಮಲೆ ಹಾಗೂ ಸುತ್ತಮುತ್ತಲಿನ ಪರಿಸರದ ಪ್ರಸಕ್ತ ಪರಿಸ್ಥಿತಿಯನ್ನು ಅವಲೋಕಿಸಿ ವರದಿ ಸಲ್ಲಿಸಲು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್‌ ಶಾ ಸೂಚನೆ ಮೇರೆಗೆ ರಚಿಸಲಾದ ರಾಷ್ಟ್ರೀಯ ತಂಡದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಡಿ.1ರಿಂದ ಕೇರಳ ಪ್ರವಾಸ ಕೈಗೊಳ್ಳಲಿದ್ದಾರೆ.
Vijaya Karnataka Web
ಶಬರಿಮಲೆಗೆ ತೆರಳುವ ಬಿಜೆಪಿ ರಾಷ್ಟ್ರೀಯ ತಂಡಕ್ಕೆ ಸಂಸದ ನಳಿನ್‌


ನಾಲ್ವರು ಸದಸ್ಯರಿರುವ ರಾಷ್ಟ್ರೀಯ ತಂಡದಲ್ಲಿ ರಾಜ್ಯವನ್ನು ಸಂಸದರಾದ ಪ್ರಹ್ಲಾದ ಜೋಶಿ ಹಾಗೂ ನಳಿನ್‌ ಕುಮಾರ್‌ ಕಟೀಲ್‌ ಪ್ರತಿನಿಧಿಸಲಿದ್ದಾರೆ. ತಂಡವು ಡಿ.1ರಂದು ಕೇರಳಕ್ಕೆ ಭೇಟಿ ನೀಡಲಿದೆ ಎಂದು ಸಂಸದ ನಳಿನ್‌ ಕುಮಾರ್‌ ಕಟೀಲ್‌ ಬುಧವಾರ ಸುದ್ದಿಗಾರರಿಗೆ ತಿಳಿಸಿದರು.

ಶಬರಿಮಲೆ ವಿವಾದಕ್ಕೆ ಸಂಬಂಧಿಸಿ ಕೇರಳ ಬಿಜೆಪಿ ಮುಖಂಡ ಸುರೇಂದ್ರನ್‌ ಮತ್ತು ಶಶಿಕಲಾ ಟೀಚರ್‌ ಅವರನ್ನು ಬಂಧನದಲ್ಲಿ ಇರಿಸಲಾಗಿದೆ. ಶಬರಿಮಲೆಗೆ ಮಹಿಳೆಯರ ಪ್ರವೇಶವನ್ನು ವಿರೋಧಿಸಿದ ಕಾರಣಕ್ಕೆ ಅನೇಕ ಮಂದಿ ಅಯ್ಯಪ್ಪ ಭಕ್ತರ ವಿರುದ್ಧ ಕೇಸು ಹಾಕಲಾಗಿದೆ. ಇದಲ್ಲದೆ ಪ್ರಸ್ತುತ ಶಬರಿಮಲೆ ವಿದ್ಯಮಾನದ ಕುರಿತು ಈ ತಂಡ ಎರಡು ದಿನಗಳ ಕಾಲ ಅಧ್ಯಯನ ನಡೆಸಿ ಬಿಜೆಪಿ ವರಿಷ್ಠರಿಗೆ ವರದಿ ಸಲ್ಲಿಸಲಿದೆ.

ಅಯ್ಯಪ್ಪ ದೇವಸ್ಥಾನ ಬಾಗಿಲು ತೆರೆದ ದಿನಗಳಲ್ಲಿ ಅಯ್ಯಪ್ಪ ಭಕ್ತರಿಗೆ ದರ್ಶನ ಭಾಗ್ಯವನ್ನು ಕೇರಳ ಸರಕಾರ ವಂಚಿಸಿದ ಎನ್ನುವ ಆರೋಪದ ಕುರಿತು ಸತ್ಯಾಸತ್ಯತೆಯನ್ನು ಪರಿಶೀಲಿಸಲು ನವೆಂಬರ್‌ ಎರಡನೇ ವಾರದಲ್ಲಿ ಸಂಸದ ನಳಿನ್‌ ಕುಮಾರ್‌ ಹಾಗೂ ಕೇರಳ ಸಂಸದ ಮುರಳೀಧರ್‌ ನೇತೃತ್ವದ ತಂಡ ಶಬರಿಮಲೆಗೆ ಭೇಟಿ ನೀಡಿತ್ತು. ಅಲ್ಲಿನ ಸ್ಥಿತಿಗತಿ ಬಗ್ಗೆ ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಅವರಿಗೆ ಪ್ರಥಮ ವರದಿಯನ್ನು ಸಲ್ಲಿಸಿತ್ತು. ಇದೀಗ ಎರಡನೇ ಬಾರಿ ತಂಡವು ಶಬರಿಮಲೆ ವಿಚಾರದಲ್ಲಿ ಭೇಟಿ ನೀಡಿ ಸಮಗ್ರ

ವರದಿ ಸಲ್ಲಿಸಲಿದೆ ಎಂದು ನಳಿನ್‌ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ