Please enable javascript.ಬಾದಾಮಿಯಲ್ಲಿ ಲಲಿತ ಕಲಾ ವಿವಿ ಸ್ಥಾಪನೆಗೆ ಅನುಮತಿ - ಬಾದಾಮಿಯಲ್ಲಿ ಲಲಿತ ಕಲಾ ವಿವಿ ಸ್ಥಾಪನೆಗೆ ಅನುಮತಿ - Vijay Karnataka

ಬಾದಾಮಿಯಲ್ಲಿ ಲಲಿತ ಕಲಾ ವಿವಿ ಸ್ಥಾಪನೆಗೆ ಅನುಮತಿ

ವಿಕ ಸುದ್ದಿಲೋಕ 3 Oct 2013, 10:02 pm
Subscribe

ಬಾದಾಮಿಯಲ್ಲಿ ಲಲಿತ ಕಲಾ ವಿಶ್ವವಿದ್ಯಾಲಯ ಸ್ಥಾಪನೆ ಬಹುತೇಕ ಖಚಿತವಾಗಿದ್ದು, ಸರಕಾರದಿಂದ ತಾತ್ವಿಕ ಒಪ್ಪಿಗೆ ಲಭಿಸಿದೆ ಎಂದು ಹಂಪಿ ಕನ್ನಡ ವಿವಿ ಡೀನ್, ಲಲಿತ ಕಲಾ ವಿವಿ ವಿಶೇಷಾಕಾರಿ ಎಸ್.ಸಿ.ಪಾಟೀಲ್ ಹೇಳಿದ್ದಾರೆ. ನಗರದ ಮಹಾಲಸಾ ಚಿತ್ರಕಲಾ ಶಾಲೆಯಲ್ಲಿ ಗುರುವಾರ ನಡೆದ ಲಲಿತ ಕಲಾ ವಿವಿ ಸ್ಥಾಪನೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾದಾಮಿಯಲ್ಲಿ ಲಲಿತ ಕಲಾ ವಿವಿ ಸ್ಥಾಪನೆಗೆ ಅನುಮತಿ
ಮಂಗಳೂರು: ಬಾದಾಮಿಯಲ್ಲಿ ಲಲಿತ ಕಲಾ ವಿಶ್ವವಿದ್ಯಾಲಯ ಸ್ಥಾಪನೆ ಬಹುತೇಕ ಖಚಿತವಾಗಿದ್ದು, ಸರಕಾರದಿಂದ ತಾತ್ವಿಕ ಒಪ್ಪಿಗೆ ಲಭಿಸಿದೆ ಎಂದು ಹಂಪಿ ಕನ್ನಡ ವಿವಿ ಡೀನ್, ಲಲಿತ ಕಲಾ ವಿವಿ ವಿಶೇಷಾಕಾರಿ ಎಸ್.ಸಿ.ಪಾಟೀಲ್ ಹೇಳಿದ್ದಾರೆ. ನಗರದ ಮಹಾಲಸಾ ಚಿತ್ರಕಲಾ ಶಾಲೆಯಲ್ಲಿ ಗುರುವಾರ ನಡೆದ ಲಲಿತ ಕಲಾ ವಿವಿ ಸ್ಥಾಪನೆ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಬಾದಾಮಿಯಲ್ಲಿ ಸ್ಥಳ ನೀಡುವ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅನುಮತಿ ಸೂಚಿಸಿದ್ದು, ರಾಜ್ಯಾದ್ಯಂತ ಸಮಾಲೋಚನೆ ಸಭೆ ನಡೆಸಿ ಸರಕಾರಕ್ಕೆ ಸಂಪೂರ್ಣ ವರದಿ ಸಲ್ಲಿಸಲಾಗುವುದು ಎಂದು ಅವರು ಹೇಳಿದರು. ಪ್ರಸ್ತುತ ಹಂಪಿ ಕನ್ನಡ ವಿವಿ ಅಧೀನದಲ್ಲಿರುವ ರಾಜ್ಯದ 71 ಚಿಕತ್ರಕಲಾ ಶಾಲೆಗಳು ಮುಂದೆ ಲಲಿತ ಕಲಾ ವಿವಿ ವ್ಯಾಪ್ತಿಗೆ ಬರಲಿದೆ ಎಂದು ಹೇಳಿದ ಅವರು, ಸರ್ವ ಕಲೆಗಳ ಅಧ್ಯಯನಕ್ಕೆ ಅವಕಾಶ ನೀಡುವ ಉದ್ದೇಶವಿದೆ ಎಂದರು.

ಲಲತಕಲಾ ವಿವಿ ಸ್ಥಾಪನೆಯಿಂದ ಏಕರೂಪದ ಪಠ್ಯ ವಿಷಯ ರಾಜ್ಯಾದ್ಯಂತ ಜಾರಿಯಾಗಲಿದೆ ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚಿತ್ರಕಲೆಗೆ ಶೈಕ್ಷಣಿಕ ರೂಪ ನೀಡಲಾಗುವುದು ಎಂದು ಅವರು ಹೇಳಿದರು. ಹಿರಿಯ ಕಲಾವಿದ ಪಿ.ಎಸ್.ಪುಣಿಂಚಿತ್ತಾಯ ಮಾತನಾಡಿ, ಶಿರೂರಿನಿಂದ ಕಾಸರಗೋಡು ವರೆಗಿನ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿರುವ ಪ್ರಾದೇಶಿಕ ಜಾನಪದ ಕಲೆಗಳ ಅಧ್ಯಯನ, ಸಂಶೋಧನೆಗೆ ವಿವಿಯಲ್ಲಿ ಅವಕಾಶ ನೀಡಬೇಕು ಎಂದರು.

ಚಿತ್ರಕಲಾ ಶಾಲೆಯ ಪ್ರಿನ್ಸಿಪಾಲ್ ಕೆ.ಪುರುಷೋತ್ತಮ ನಾಯಕ್, ಹಿರಿಯ ಕಲಾವಿದ ಗಣೇಶ್ ಸೋಮಯಾಜಿ ಉಪಸ್ಥಿತರಿದ್ದರು.
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ