Please enable javascript.ಸಿಟಿ ಮಧ್ಯದಲ್ಲೇ ಕುಲಗೆಟ್ಟ ಪಾರ್ಕಿಂಗ್ ಏರಿಯಾ! - ಸಿಟಿ ಮಧ್ಯದಲ್ಲೇ ಕುಲಗೆಟ್ಟ ಪಾರ್ಕಿಂಗ್ ಏರಿಯಾ! - Vijay Karnataka

ಸಿಟಿ ಮಧ್ಯದಲ್ಲೇ ಕುಲಗೆಟ್ಟ ಪಾರ್ಕಿಂಗ್ ಏರಿಯಾ!

ವಿಕ ಸುದ್ದಿಲೋಕ 25 Feb 2014, 5:46 am
Subscribe

ಮಂಗಳೂರಿನಿಂದ ಮಣಿಪಾಲಕ್ಕೆ ಸ್ಕೈಬಸ್, ನಗರ ಸುಂದರೀಕರಣ ಸೇರಿದಂತೆ ಜನಪ್ರತಿನಿಧಿಗಳು ಕೋಟ್ಯಂತರ ರೂ. ಮೊತ್ತದ ಯೋಜನೆ ರೂಪಿಸುತ್ತಿದ್ದರೂ, ಹಂಪನಕಟ್ಟೆ ಮುಖ್ಯ ರಸ್ತೆ ಪಕ್ಕದಲ್ಲೇ ಇರುವ ಪಾರ್ಕಿಂಗ್ ಸ್ಥಳ ಕನಿಷ್ಠ ಡಾಮರು ಕಾಣದೆ ಕುಲಗೆಟ್ಟು ಹೋಗಿದೆ.

ಸಿಟಿ ಮಧ್ಯದಲ್ಲೇ ಕುಲಗೆಟ್ಟ ಪಾರ್ಕಿಂಗ್ ಏರಿಯಾ!
ಮಂಗಳೂರು: ಮಂಗಳೂರಿನಿಂದ ಮಣಿಪಾಲಕ್ಕೆ ಸ್ಕೈಬಸ್, ನಗರ ಸುಂದರೀಕರಣ ಸೇರಿದಂತೆ ಜನಪ್ರತಿನಿಧಿಗಳು ಕೋಟ್ಯಂತರ ರೂ. ಮೊತ್ತದ ಯೋಜನೆ ರೂಪಿಸುತ್ತಿದ್ದರೂ, ಹಂಪನಕಟ್ಟೆ ಮುಖ್ಯ ರಸ್ತೆ ಪಕ್ಕದಲ್ಲೇ ಇರುವ ಪಾರ್ಕಿಂಗ್ ಸ್ಥಳ ಕನಿಷ್ಠ ಡಾಮರು ಕಾಣದೆ ಕುಲಗೆಟ್ಟು ಹೋಗಿದೆ.

ಮಂಗಳೂರು ವಿಶ್ವವಿದ್ಯಾಲಯ ಕಾಲೇಜು ಮುಂಭಾಗದ ಕಾಂಗ್ರೆಸ್ ಕಚೇರಿ ಹಾಗೂ ಹಲವಾರು ವಾಣಿಜ್ಯ, ವ್ಯಾಪಾರ ಮಳಿಗೆಗಳ ಎದುರಿನಲ್ಲಿ ಕಾಂಕ್ರಿಟ್ ರಸ್ತೆಗೆ ತಾಗಿಕೊಂಡು, ಫುಟ್‌ಪಾತ್ ನಡುವಿನ ಖಾಲಿ ಜಾಗದಲ್ಲಿ ದ್ವಿಚಕ್ರ, ಚತುಷ್ಚಕ್ರ ವಾಹನ ನಿಲ್ಲಿಸಲಾಗುತ್ತಿದೆ. ಇದು ರಸ್ತೆಗಿಂತ ತಗ್ಗು ಪ್ರದೇಶದಲ್ಲಿದ್ದು, ನಿಲ್ಲಿಸಿದ ವಾಹನ ಮೇಲೆತ್ತಲು ಮಹಿಳೆಯರು, ಹಿರಿಯರು ಕಷ್ಟಪಡುತ್ತಿದ್ದಾರೆ.

ಹಿಂದೆ ಡಾಮರಿನ ಮುಖ್ಯ ರಸ್ತೆ ಇದ್ದಾಗ, ಪಕ್ಕದ ಫುಟ್‌ಪಾತ್ ಕೂಡಾ ಒಂದೇ ಮಟ್ಟದಲ್ಲಿತ್ತು. ನಾಲ್ಕು ವರ್ಷದ ಹಿಂದೆ ಕಾಂಕ್ರಿಟ್ ರಸ್ತೆ ನಿರ್ಮಾಣಗೊಂಡಾಗ, ಮುಖ್ಯ ರಸ್ತೆ ನಿರ್ಮಿಸಲಾಯಿತೇ ವಿನಃ, ರಸ್ತೆ ಅಂಚು ದುರಸ್ತಿ ಅಥವಾ ಫುಟ್‌ಪಾತ್ ನಿರ್ವಹಣೆ ಮಾಡಿಲ್ಲ. ಜನರು ಇಂದು, ನಾಳೆ ಎಂದು ಕಾದರೂ ದುರಸ್ತಿ ಭಾಗ್ಯ ಕಂಡಿಲ್ಲ.

ಮಂಗಳೂರಿನ ಕೆಲವು ಒಳ ರಸ್ತೆಗಳಿಗೂ ಇಂಟರ್‌ಲಾಕ್ ಅಳವಡಿಸಿದ್ದು, ಮುಖ್ಯ ಭಾಗವನ್ನು ನಿರ್ಲಕ್ಷಿಸಿರುವ ಬಗ್ಗೆ ಸ್ಥಳೀಯ ಅಂಗಡಿ ವ್ಯಾಪಾರಸ್ಥರು ಆಕ್ರೋಶ ವ್ಯಕ್ತಪಡಿಸುತ್ತಾರೆ. ಮಾರುಕಟ್ಟೆ ಮತ್ತಿತರ ಕಡೆಗೆ ಹೋಗುವವರು ಇಲ್ಲೇ ವಾಹನ ನಿಲ್ಲಿಸಿ ಹೋಗುತ್ತಾರೆ. ಹಿಂದೆ ಬಂದು ವಾಹನ ತೆಗೆಯಲಾಗದೆ, ಕಷ್ಟಪಡುವಾಗ ನಾವು ಹೋಗಿ ಸಹಾಯ ಮಾಡಬೇಕಾಗುತ್ತದೆ. ಕೆಲವರು ಬೀಳುವ ಪರಿಸ್ಥಿತಿಯೂ ಇರುತ್ತದೆ ಎಂದು ವ್ಯಾಪಾರಿ ಸುಂದರ ಪೂಜಾರಿ ದೂರುತ್ತಾರೆ.

*ಮಂಗಳೂರು ಮಹಾನಗರ ಪಾಲಿಕೆ ಅಧಿಕಾರಿಗಳು ಕಾಳಜಿ ವಹಿಸಿಕೊಂಡು, ಹಂಪನಕಟ್ಟೆ ಭಾಗಕ್ಕೆ ಇಂಟರ್‌ಲಾಕ್ ಅಳವಡಿಸಿ, ಚರಂಡಿ ಮಾಡಿ, ಫುಟ್‌ಪಾತ್ ನಿರ್ಮಿಸಿಕೊಟ್ಟರೆ ರಸ್ತೆ ಸಂಚಾರ, ವಾಹನ ಪಾರ್ಕಿಂಕ್, ನಡೆದಾಟ ಹಾಗೂ ಮಳೆ ನೀರು ಹರಿಯಲು ಅನುಕೂಲವಾಗುತ್ತದೆ. ಈ ನಿಟ್ಟಿನಲ್ಲಿ ತುರ್ತು ಗಮನಹರಿಸಬೇಕು. -ಮುಸ್ನಿಫ್, ಉದ್ಯಮಿ, ಮಂಗಳೂರು
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ