ಆ್ಯಪ್ನಗರ

ಪರೀಕ್ಷೆ ಹತ್ತಿರವಾಗುತ್ತಿದೆ, ಓದು ಎಂದಿದ್ದಕ್ಕೆ ಕೆರೆಗೆ ಹಾರಿದ ವಿದ್ಯಾರ್ಥಿನಿ

ಮಕ್ಕಳು, ಹದಿ ವಯಸ್ಸಿನವರಲ್ಲಿ ಆತ್ಮಹತ್ಯೆ ಪ್ರವೃತ್ತಿ ಬೆಳೆಯುತ್ತಿದ್ದು, ಬದುಕನ್ನು ಎದುರಿಸಲು ತಂದೆ-ತಾಯಿಗಳು ಸಂಸ್ಕಾರ ಕೊಡದಿರುವುದೇ ಇದಕ್ಕೆ ಕಾರಣವೇ?

Vijaya Karnataka Web 21 Oct 2019, 2:37 pm
ಕುಂಬ್ರ (ಪುತ್ತೂರು): ತಾಲೂಕನ ಒಳಮೊಗ್ರು ಗ್ರಾಮದ ಕೇರಿ ನಿವಾಸಿ ವಿಠಲ ರೈ ರವರ ಪುತ್ರಿ ವೀಣಾ (18) ಎಂಬ ವಿದ್ಯಾರ್ಥಿನಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.
Vijaya Karnataka Web Suicide


ಅ.21 ರಂದು ಮುಂಜಾನೆ ವೇಳೆ ಈ ಘಟನೆ ನಡೆದಿದೆ.

ಪುತ್ತೂರು ಕೊಂಬೆಟ್ಟು ಸರಕಾರಿ ಕಾಲೇಜಿನಲ್ಲಿ ಪಿಯುಸಿ ವ್ಯಾಸಂಗ ಮಾಡುತ್ತಿದ್ದ ವೀಣಾ ಕಲಿಕೆಯಲ್ಲಿ ಹಿಂದೆ ಇದ್ದಳು. ಪರೀಕ್ಷೆ ಹತ್ತಿರ ಬಂದಿರುವ ಕಾರಣ ಪೋಷಕರು ಕಲಿಕೆಯ ಕಡೆ‌ಗೆ ಗಮನ ಹರಿಸುವಂತೆ ಬುದ್ದಿವಾದ ಹೇಳಿದ್ದರು.

ಅ.21 ರಂದು ಬೆಳಿಗ್ಗೆ 5 ಗಂಟೆಗೆ ಎದ್ದು ಶಾಲಾ ಪಠ್ಯ ಓದುತ್ತಿದ್ದ ಆಕೆ ಮನೆಯವರು ಏಳುವ ಮುನ್ನವೇ ಮನೆ ಸಮೀಪ ಇದ್ದ ತೋಟದ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದರು.

ಮನೆಯವರು ಬೆಳಿಗ್ಗೆ ಎದ್ದು ಹುಡಕಾಡಿದಾಗ ವೀಣಾ ಪತ್ತೆಯಾಗಿರಲಿಲ್ಲ. ಬಳಿಕ ತೋಟದ ಕೆರೆಯಲ್ಲಿ ಮೃತದೇಹ ಪತ್ತೆಯಾಗಿದೆ. ಸಂಪ್ಯ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ