ಆ್ಯಪ್ನಗರ

ನೂರು ಕೋಟಿ ರೂ. ಸಮೀಪಿಸಿದ ಕುಕ್ಕೆ ಸುಬ್ರಹ್ಮಣ್ಯ ದೇಗುಲದ ವಾರ್ಷಿಕ ಆದಾಯ

ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ 98.92 ಕೋಟಿ ಆದಾಯ ಗಳಿಸಿದೆ. ಕಳೆದ ವರ್ಷಕ್ಕಿಂತ ಈ ಬಾರಿ 6,83,10,368.40 ರೂ. ಅಧಿಕ ಆದಾಯ ಗಳಿಸಿದೆ.

Vijaya Karnataka Web 22 May 2020, 7:55 am
ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಾಲಯವು 2019-20ನೇ ಸಾಲಿನ ಆರ್ಥಿಕ ವರ್ಷದಲ್ಲಿ 98,92,24,193.34 ರೂ. ಆದಾಯ ಗಳಿಸಿದೆ.
Vijaya Karnataka Web ಕುಕ್ಕೆ ಸುಬ್ರಹ್ಮಣ್ಯ ದೇವಳದ ವಾರ್ಷಿಕ ಆದಾಯ 98.92 ಕೋಟಿ


2019ರ ಏಪ್ರಿಲ್‌ನಿಂದ 2020ರ ಮಾ.31ರ ತನಕದ ಆರ್ಥಿಕ ವರ್ಷದಲ್ಲಿ ದೇವಳಕ್ಕೆ 98.92 ಕೋಟಿ ರೂ. ಆದಾಯ ಲಭಿಸಿದೆ. ಮುಖ್ಯವಾಗಿ ಹರಕೆ ಸೇವೆ, ಕಾಣಿಕೆ ಡಬ್ಬಿ, ಬಡ್ಡಿ, ಛತ್ರಗಳ ಬಾಡಿಗೆ, ಕಟ್ಟಡಗಳ ಬಾಡಿಗೆ ಮತ್ತು ಕೃಷಿ ತೋಟದಿಂದ ಆದಾಯ ಬರುತ್ತದೆ.

ಗುತ್ತಿಗೆಗಳಿಂದ 1,60,40,094 ರೂ., ಕೃಷ್ಯುತ್ಪನ್ನದಿಂದ 9,33,715 ರೂ., ಕಟ್ಟಡ ಬಾಡಿಗೆಯಿಂದ 60,13,565 ರೂ., ಕಾಣಿಕೆಯಿಂದ 3,45,14,804.39 ರೂ., ಕಾಣಿಕೆ ಹುಂಡಿಯಿಂದ 18,26,50,156 ರೂ., ಹರಕೆ ಸೇವೆಗಳಿಂದ 42,52,92,881.77 ರೂ., ಅನುದಾನದಿಂದ 87 ಸಾವಿರ ರೂ., ಹೂಡಿಕೆಯಿಂದ ಬಂದ ಬಡ್ಡಿ 21,38,03,033 ರೂ., ಉಳಿತಾಯ ಖಾತೆ ಮತ್ತು ಇತರ ಖಾತೆಗಳಿಂದ ಬಂದ ಬಡ್ಡಿ 82,48,317.66 ರೂ., ಸಂಕೀರ್ಣ ಜಮೆಗಳಿಂದ 4,81,71,851.60 ರೂ., ಅನ್ನಸಂತರ್ಪಣೆ ನಿಧಿಯಿಂದ 4,69,09,782.04 ರೂ., ಅಭಿವೃದ್ಧಿ ನಿಧಿಯಿಂದ 10,40,890.88 ರೂ., ಶಾಶ್ವತ ಸೇವಾ ಮೂಲಧನ 54,78,101 ರೂ., ಚಿನ್ನದ ರಥ ನಿರ್ಮಾಣದ ದೇಣಿಗೆಯಿಂದ 40,001 ರೂ. ಸೇರಿ ಒಟ್ಟು 98.92 ಕೋಟಿ ರೂ. ಆದಾಯ ಬಂದಿದೆ.

2017-18ನೇ ಆರ್ಥಿಕ ವರ್ಷದಲ್ಲಿ ಶ್ರೀ ದೇವಳವು 92,09,13,824.98 ರೂ. ಆದಾಯ ಗಳಿಸಿತ್ತು. ಶ್ರೀ ದೇವಳವು ಕಳೆದ ವರ್ಷಕ್ಕಿಂತ ಈ ಬಾರಿ 6,83,10,368.40 ರೂ. ಅಧಿಕ ಆದಾಯ ಗಳಿಸಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ