ಆ್ಯಪ್ನಗರ

ಹೆಬ್ಬಾವಿನ 25 ಮೊಟ್ಟೆ ಪಿಲಿಕುಳಕ್ಕೆ ಹಸ್ತಾಂತರ

ಕುಳಾಯಿಯ ಕೋಡಿಕೆರೆಯ ಯುವಕನೊಬ್ಬ 25 ಹೆಬ್ಬಾವಿನ ಮೊಟ್ಟೆಗಳನ್ನು ರಕ್ಷಿಸಿ, ಅರಣ್ಯ ಇಲಾಖೆಯ ಮುಖೇನ ಪಿಲಿಕುಳಕ್ಕೆ ಹಸ್ತಾಂತರಿಸಿದ್ದಾರೆ.

Vijaya Karnataka 29 Apr 2019, 9:37 pm
ಮಂಗಳೂರು: ಕುಳಾಯಿಯ ಕೋಡಿಕೆರೆಯ ಯುವಕನೊಬ್ಬ 25 ಹೆಬ್ಬಾವಿನ ಮೊಟ್ಟೆಗಳನ್ನು ರಕ್ಷಿಸಿ, ಅರಣ್ಯ ಇಲಾಖೆಯ ಮುಖೇನ ಪಿಲಿಕುಳಕ್ಕೆ ಹಸ್ತಾಂತರಿಸಿದ್ದಾರೆ.
Vijaya Karnataka Web 28m-hebbavu mote1


ಕೋಡಿಕೆರೆಯ ರೈಲ್ವೆ ಹಳಿ ಪಕ್ಕದಲ್ಲಿ ಶನಿವಾರ ರೈಲ್ವೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ಜೆಸಿಬಿಯಿಂದ ಕಲ್ಲನ್ನು ಸರಿಸುವಾಗ ಹೆಬ್ಬಾವು ಸಹಿತ 25 ಮೊಟ್ಟೆ ಪತ್ತೆಯಾಗಿತ್ತು. ಭಯದಿಂದ ಹೆಬ್ಬಾವು ಓಡಿ ಹೋಗಿದೆ. ಇದನ್ನು ನೋಡಿದ ಕಾರ್ಮಿಕರು ದಿಗ್ಬ್ರಮೆಗೊಂಡು, ಮೊಟ್ಟೆಗಳನ್ನು ಎಸೆದು ಪ್ರಮಾದ ಎಸಗಿದ್ದಾರೆ.

ಮಾಹಿತಿ ನೀಡಿದ ಮಹಿಳೆಯರು: ಹೆಬ್ಬಾವಿನ ಮೊಟ್ಟೆ ಎಸೆದ ಬಗ್ಗೆ ಮಹಿಳೆಯರು ಯುವಕ ತೌಸಿಫ್‌ ಅಹ್ಮದ್‌ ಅವರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕಾಗಮಿಸಿದಾಗ, 25 ಮೊಟ್ಟೆಗಳ ಪೈಕಿ ಒಂದು ಮೊಟ್ಟೆ ಸಂಪೂರ್ಣ ಹಾನಿಯಾಗಿದ್ದರೆ, ಮತ್ತೊಂದು ಮೊಟ್ಟೆ ಭಾಗಶಃ ಹಾನಿಯಾಗಿತ್ತು. ಉಳಿದ 23 ಮೊಟ್ಟೆಗಳು ಸಹಜ ಸ್ಥಿತಿಯಲ್ಲಿದ್ದವು. ಅವುಗಳನ್ನು ಪ್ಲಾಸ್ಟಿಕ್‌ ಬುಟ್ಟಿಯಲ್ಲಿ ಸಂಗ್ರಹಿಸಿ ಅರಣ್ಯ ಇಲಾಖೆಗೆ ಹಸ್ತಾಂತರಿಸಿದ್ದಾರೆ.

ಹೆಬ್ಬಾವಿನ ಮೊಟ್ಟೆಗಳನ್ನು ತೌಸಿಫ್‌ ಅಹ್ಮದ್‌ ಎಂಬವರು ರಕ್ಷಿಸಿದ್ದು, ಅವುಗಳನ್ನು ಪಿಲುಕುಳ ನಿಸರ್ಗಧಾಮಕ್ಕೆ ಹಸ್ತಾಂತರಿಸಲಾಗಿದೆ. ವಾರದಲ್ಲೇ ಮೊಟ್ಟೆಗಳು ಒಡೆದು ಮರಿಗಳಾಗುವ ಸಾಧ್ಯತೆಯಿದೆ.

-ಶ್ರೀಧರ್‌, ಮಂಗಳೂರು ವಲಯ ಅರಣ್ಯಾಧಿಕಾರಿ


ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ