ಆ್ಯಪ್ನಗರ

ದಕ್ಷಿಣ ಕನ್ನಡ: 49 ಮಂದಿಗೆ ಕೊರೊನಾ ಪಾಸಿಟಿವ್‌, ಸ್ಥಳೀಯ ಸಂಪರ್ಕದಿಂದ ಹೆಚ್ಚಾದ ಸೋಂಕು

ಶನಿವಾರ ಪತ್ತೆಯಾದ 49 ಪ್ರಕರಣಗಳಲ್ಲಿ 22 ಮಂದಿಗೆ ಸ್ಥಳೀಯ ಸಂಪರ್ಕದಿಂದ ಸೋಂಕು ತಗುಲಿದೆ. ಕೊರೊನಾ ವೈರಾಣು ಜಿಲ್ಲೆಯಲ್ಲಿ ಹರಡಲು ಆರಂಭವಾದಲ್ಲಿಂದ ಸ್ಥಳೀಯ ಸಂಪರ್ಕದಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೋಂಕು ಹರಡಿರುವುದು ಇದೇ ಮೊದಲು.

Vijaya Karnataka Web 27 Jun 2020, 10:01 pm
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಶನಿವಾರ 49 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಜಿಲ್ಲೆಯ ಜನತೆಯಲ್ಲಿ ಮತ್ತೆ ಆತಂಕ ಮೂಡಲು ಕಾರಣವಾಗಿದೆ.
Vijaya Karnataka Web ಕೊರೊನಾ
ಕೊರೊನಾ


ಇದುವರೆಗೆ ವಿದೇಶದಿಂದ ಮತ್ತು ಮಹಾರಾಷ್ಟ್ರದಿಂದ ಬಂದ ಹೆಚ್ಚಿನ ಮಂದಿಯಲ್ಲಿ ಸೋಂಕು ಪತ್ತೆಯಾಗುತ್ತಿತ್ತು. ಇವರೆಲ್ಲ ಕ್ವಾರಂಟೈನ್‌ನಲ್ಲೇ ಇರುತ್ತಿದ್ದುದರಿಂದ ಸ್ಥಳೀಯವಾಗಿ ಸೋಂಕು ಹರಡುವ ಅಪಾಯ ಕಡಿಮೆ ಇತ್ತು. ಆದರೆ ಕಳೆದ ಮೂರು ದಿನಗಳಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸ್ಥಳೀಯವಾಗಿ ಸೋಂಕು ಹರಡುವ ಪ್ರಮಾಣ ದಿಢೀರ್‌ ಹೆಚ್ಚಳವಾಗಿದ್ದು, ಆತಂಕಕ್ಕೆ ಕಾರಣವಾಗಿದೆ.

ಸ್ಥಳೀಯ ಸಂಪರ್ಕದ ಜತೆಯಲ್ಲಿ ಉಸಿರಾಟದ ತೊಂದರೆಯಿಂದ ಆಸ್ಪತ್ರೆಗೆ ದಾಖಲಾಗಿ, ಅವರಿಗೆ ಕೊರೊನಾ ಸೋಂಕು ಪತ್ತೆಯಾಗುವ ಪ್ರಕರಣಗಳು ಕೂಡಾ ಹೆಚ್ಚಾಗುತ್ತಿವೆ. ಇವರ ಮೂಲ ಪತ್ತೆಹಚ್ಚಲೂ ಕೂಡಾ ಆರೋಗ್ಯ ಇಲಾಖೆ ಹರಸಾಹಸ ಪಡುತ್ತಿದೆ.

ಶನಿವಾರ ಪತ್ತೆಯಾದ 49 ಪ್ರಕರಣಗಳಲ್ಲಿ 22 ಮಂದಿಗೆ ಸ್ಥಳೀಯ ಸಂಪರ್ಕದಿಂದ ಸೋಂಕು ತಗುಲಿದೆ. ಕೊರೊನಾ ವೈರಾಣು ಜಿಲ್ಲೆಯಲ್ಲಿ ಹರಡಲು ಆರಂಭವಾದಲ್ಲಿಂದ ಸ್ಥಳೀಯ ಸಂಪರ್ಕದಿಂದ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸೋಂಕು ಹರಡಿರುವುದು ಇದೇ ಮೊದಲು. ಉಳಿದ 14 ಮಂದಿ ಸೌದಿ, ಕತಾರ್‌, ದಮಾಮ್‌, ದುಬೈ ಹಾಗೂ ಶಾರ್ಜಾದಿಂದ ಆಗಮಿಸಿದವರು. 7 ಮಂದಿಗೆ ಉಸಿರಾಟದ ಸಮಸ್ಯೆ ಕಂಡು ಬಂದಿದ್ದು, ಅವರಿಗೆ ಪರೀಕ್ಷೆ ನಡೆಸಿದಾಗ ಸೋಂಕು ಇರುವುದು ದೃಢಪಟ್ಟಿದೆ. ಆರು ಮಂದಿಯ ಸೋಂಕು ತಗುಲಿರುವ ಬಗ್ಗೆ ಮೂಲ ಪತ್ತೆ ಹಚ್ಚಲಾಗುತ್ತಿದೆ.

38 ಮಂದಿ ಡಿಸ್‌ಚಾರ್ಜ್‌

ಕೊರೊನಾ ಸೋಂಕು ದೃಢಪಟ್ಟು ಆಸ್ಪತ್ರೆಯಲ್ಲಿಚಿಕಿತ್ಸೆ ಪಡೆಯುತ್ತಿದ್ದ 38 ಮಂದಿ ಶನಿವಾರ ಆಸ್ಪತ್ರೆಯಿಂದ ಡಿಸ್‌ಚಾರ್ಜ್‌ ಆಗಿ ಮನೆ ನಿಗಾಕ್ಕೆ ಕಳುಹಿಸಲಾಗಿದೆ. ಈ ಮೂಲಕ ಇದುವರೆಗೆ ಒಟ್ಟು 416 ಮಂದಿ ಆಸ್ಪತ್ರೆಯಿಂದ ಬಿಡುಗಡೆಗೊಂಡಿದ್ದಾರೆ. ಇನ್ನು 150 ಮಂದಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಇವರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದ್ದು, ಅವರನ್ನು ವೆಂಟಿಲೇಟರ್‌ ಅಳವಡಿಸಿ ಐಸಿಯುನಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ