ಆ್ಯಪ್ನಗರ

ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ; ಕಾನ್‌ಸ್ಟೇಬಲ್‌ ವಿರುದ್ಧ ದೂರು

ಯುವತಿಗೆ ಫೇಸ್ಬುಕ್‌ ಮೂಲಕ ಪರಿಚಯವಾದ ಸಾಯಬಣ್ಣ ಮದುವೆ ಮಾತುಕತೆಗೆ ಮೇ 20ರಂದು ಬೆಂಗಳೂರಿಗೆ ಬಂದಿದ್ದು, ಆ ದಿನ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

Vijaya Karnataka Web 3 Sep 2020, 4:13 pm
ಮಂಗಳೂರು: ಮದುವೆಯಾಗುವುದಾಗಿ ನಂಬಿಸಿ ಅತ್ಯಾಚಾರ ನಡೆಸಿ ಬಳಿಕ ವಂಚಿಸಿದ ಆರೋಪದ ಮೇಲೆ ಕಾನ್‌ಸ್ಟೇಬಲ್‌ ಮೇಲೆ ಪ್ರಕರಣ ದಾಖಲಾಗಿದೆ.
Vijaya Karnataka Web Crime


ಜಿಲ್ಲಾ ಸಶಸ್ತ್ರ ಮೀಸಲು ಪೊಲೀಸ್‌ ಕಾನ್‌ ಸ್ಟೇಬಲ್‌ ವಿರುದ್ಧ ಬೆಂಗಳೂರಿನ ಯುವತಿಯೊಬ್ಬಳು ಮಹಿಳಾ ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಈತ ಯುವತಿಯನ್ನು ಮದುವೆಯಾಗುವುದಾಗಿ ನಂಬಿಸಿ ನಂತರ ಅತ್ಯಾಚಾರವೆಸಗಿ ವಂಚಿಸಿದ್ದಾನೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಕೇಂದ್ರದಿಂದ ಸಿಗಬೇಕಾದ ಜಿಎಸ್‌ಟಿ ಹಕ್ಕನ್ನು ಪಡೆಯಲು ರಾಜ್ಯ ಸರ್ಕಾರದ ಜೊತೆ ನಾವಿದ್ದೇವೆ : ಖಾದರ್

ವಿಜಾಪುರ ಜಿಲ್ಲೆಯ ಬಸವನ ಬಾಗೆವಾಡಿ ನಿವಾಸಿ ಸಾಯಬಣ್ಣ (30) ಅತ್ಯಾಚಾರ ಆರೋಪಿ. ಈತನೊಂದಿಗೆ ಬೆಂಗಳೂರಿಗ ರಮೇಶ್‌ ಗೌಡ ಎಂಬಾತನು ಯುವತಿಗೆ ಬೆದರಿಕೆ ಹಾಕಿದ್ದಾನೆಂದು ದೂರಿನಲ್ಲಿ ತಿಳಿಸಲಾಗಿದೆ. ಯುವತಿಗೆ ಫೇಸ್ಬುಕ್‌ ಮೂಲಕ ಪರಿಚಯವಾದ ಸಾಯಬಣ್ಣ ಮದುವೆ ಮಾತುಕತೆಗೆ ಮೇ 20ರಂದು ಬೆಂಗಳೂರಿಗೆ ಬಂದಿದ್ದು, ಆ ದಿನ ಅತ್ಯಾಚಾರ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಯುನಿಕೋಡ್‌ ಅಂಗಳಕ್ಕೆ ಹೆಜ್ಜೆಯಿಡಲು ಸಜ್ಜಾದ ತುಳು ಲಿಪಿ..!

ನಂತರ ಜೂ.12ರಂದು ಮಂಗಳೂರಿನ ಕ್ವಾಟ್ರಸ್‌ಗೂ ಕರೆಸಿ ಅತ್ಯಾಚಾರವೆಸಗಿದ್ದಾನೆ. ಆ ಬಳಿಕ ಮದುವೆಯಾಗಲು ನಿರಾಕರಿಸಿದ್ದಾನೆಂದು ಯುವತಿ ದೂರಿನಲ್ಲಿ ಆರೋಪಿಸಿದ್ದಾರೆ. ಇನ್ನು ಕಾನ್‌ಸ್ಟೇಬಲ್‌ ಸಾಯಬಣ್ಣ ವಿರುದ್ಧ ಪೊಲೀಸ್‌ ಕೇಸು ದಾಖಲಿಸಿದರೆ ನಿನ್ನ ವಿರುದ್ಧವೂ ಕೇಸ್‌ ದಾಖಲಿಸುವುದಾಗಿ ಬೆಂಗಳೂರಿನ ರಮೇಶ್‌ ಗೌಡ ಬೆದರಿಕೆ ಹಾಕಿರುವುದಾಗಿ ಯುವತಿ ಆರೋಪಿಸಿದ್ದಾರೆ. ಮಹಿಳಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ