ಆ್ಯಪ್ನಗರ

ಮೋದಿ ಮಂಗಳೂರು ರ‍್ಯಾಲಿಗೆ ಬಾಂಬ್ ಹಾಕ್ಬೇಕಿತ್ತು ಎಂದ FB ಪೋಸ್ಟ್ ವಿರುದ್ಧ ಆಕ್ರೋಶ

ಮಂಗಳೂರಿನಲ್ಲಿ ಶನಿವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ರಾಲಿಯನ್ನು ದೂಷಿಸುವ ಭರದಲ್ಲಿ ಯಾರೋ ಕಿಡಿಗೇಡಿಗಳು ಫೇಸ್‌ಬುನಲ್ಲಿ ಪಾಕ್‌ ಪರ ಸಂದೇಶ ಹಾಕಿದ್ದಾರೆ.

Vijaya Karnataka Web 15 Apr 2019, 11:28 am
ಮಂಗಳೂರು: ಮಂಗಳೂರು ನಗರದಲ್ಲಿ ಶನಿವಾರ ನಡೆದ ಬಿಜೆಪಿ ವಿಜಯ ಸಂಕಲ್ಪ ರಾಲಿಯನ್ನು ದೂಷಿಸುವ ಭರದಲ್ಲಿ ಯಾರೋ ಕಿಡಿಗೇಡಿಗಳು ಫೇಸ್‌ಬುನಲ್ಲಿ ಪಾಕ್‌ ಪರ ಸಂದೇಶ ಹಾಕಿ ದೇಶದ್ರೋಹಿ ಪೋಸ್ಟ್‌ ಹಾಕಿರುವುದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
Vijaya Karnataka Web Facebook post


ಭಾನುವಾರ ಮಧ್ಯಾಹ್ನ ವೇಳೆ ಯುವತಿಯೊಬ್ಬಳ ಹೆಸರಿರುವ ಫೇಸ್‌ಬುಕ್‌ ಪೇಜ್‌ನಲ್ಲಿ ಮಂಗಳೂರಿನಲ್ಲಿ ಶನಿವಾರ ನಡೆದ ಬಿಜೆಪಿ ರಾಲಿಯ ಬಗ್ಗೆ ಭಯೋತ್ಪಾದನೆ ನಡೆಸದ ಪಾಕಿಸ್ತಾನದ ಗುಡ್ಡದ ಮೇಲೆ ಇರುವ ಮರಗಳ ಮೇಲೆ 1 ಸಾವಿರ ಕೆಜಿ ಬಾಂಬ್‌ ನಮ್ಮ ಸೇನೆ ಹಾಕುವ ಬದಲು, ಮಂಗಳೂರಿನಲ್ಲಿ ನಡೆದ ಮೋದಿ ಸಮಾವೇಶದಲ್ಲಿ 2 ಕೆಜಿ ಬಾಂಬ್‌ ಹಾಕಿದ್ರೂ ಸಾಕಿತ್ತು. ದಕ್ಷಿಣ ಕನ್ನಡ 50 ವರ್ಷ ನೆಮ್ಮದಿ ಆಗಿರುತ್ತಿತ್ತು ಎಂದು ಕಮೆಂಟ್‌ ಹಾಕಲಾಗಿದೆ.

ಭಾನುವಾರ ಸಂಜೆ 3.30ರ ಸುಮಾರಿಗೆ ಕಮೆಂಟ್‌ ಹಾಕಲಾಗಿದ್ದು, ಕಮೆಂಟ್‌ ಹಾಕಿದವಳು ಪ್ರೊಫೈಲ್‌ನಲ್ಲಿ ಉಡುಪಿಯವಳು ಎಂದು ಹೇಳಿಕೊಂಡಿದ್ದಾಳೆ. ಫೇಸ್‌ಬುಕ್‌ನಲ್ಲಿ ಸಂದೇಶ ಬೀಳುತ್ತಿದ್ದಂತೆ ಸಾರ್ವಜನಿಕರಿಂದ ಆಕ್ರೋಶದ ಸಂದೇಶಗಳು ವ್ಯಕ್ತವಾಗಿದೆ.

ಡಿಲೀಟ್‌ ಮಾಡಲೇ ಇಲ್ಲ: ಯುವತಿಯ ಸಂದೇಶದ ಬಗ್ಗೆ ಆಕ್ರೋಶ ಕೇಳಿ ಬರುತ್ತಿದ್ದಂತೆ ಎಲ್ಲರೂ ಸಂದೇಶ ಡಿಲೀಟ್‌ ಮಾಡಲು ಆಗ್ರಹಿಸಿದರೂ ಸೋಮವಾರ ಮಧ್ಯಾಹ್ನವರೆಗೂ ಪೋಸ್ಟ್‌ ಡಿಲೀಟ್‌ ಆಗಲೇ ಇಲ್ಲ.

ನಕಲಿ ಅಕೌಂಟ್‌ ಸಾಧ್ಯತೆ: ಯುವತಿ ಹೆಸರಲ್ಲಿ ರುವ ಈ ಫೇಸ್‌ಬುಕ್‌ ಪೇಜ್‌ ನಕಲಿ ಆಗಿರುವ ಸಾಧ್ಯತೆಯಿದೆ. ಈ ಬಗ್ಗೆ ಪೊಲೀಸ್‌ ತನಿಖೆಯಿಂದ ಸತ್ಯ ವಿಚಾರ ಬರಬೇಕಿದೆ.

ಫೇಸ್‌ಬುಕ್‌ ದುರ್ಬಳಕೆ: ಸುಮಾರು 2 ವರ್ಷದ ಹಿಂದೆ ಇದೇ ರೀತಿ ಕಟೀಲು ದೇವಿಯನ್ನು ಫೇಸ್‌ಬುಕ್‌ ಪೇಜ್‌ನಲ್ಲಿ ಅವಹೇಳನ ಮಾಡಲಾಗಿದ್ದು, ಮಂಗಳೂರಿನ ಬಂದರು ಠಾಣೆಯಲ್ಲಿ ದೂರು ದಾಖಲಾಗಿತ್ತು. ಈ ಪ್ರಕರಣವನ್ನು ಸಂಪೂರ್ಣ ಬಯಲಿಗೆಳೆಯುವಲ್ಲಿ ಪೊಲೀಸರು ವಿಫಲರಾಗಿದ್ದು, ಇದೀಗ ಈ ರೀತಿ ಸಂದೇಶ ಮತ್ತೆ ಮುಂದುವರಿದಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ