ಆ್ಯಪ್ನಗರ

ಸುಬ್ರಹ್ಮಣ್ಯ: ದೇವರಗುಂಡಿಯಲ್ಲಿ ಮೀನು ಹಿಡಿದ ನಾಲ್ವರ ಬಂಧನ

ದೇವರಗುಂಡಿಯಲ್ಲಿ ಮೀನು ಹಿಡಿಯುತ್ತಿದ್ದ ನಾಲ್ವರನ್ನು ಪೊಲೀಸರು ಬಂಧಿಸಿದ ಘಟನೆ ನಡೆದಿದೆ. ಮೀನು ಹಿಡಿಯಲು ಬಂದಿದ್ದ ನಾಲ್ವರು ಪುತ್ತೂರು ತಾಲೂಕಿನ ಸವಣೂರು ಗ್ರಾಮದ ನಿವಾಸಿಗಳೆಂದು ತಿಳಿದು ಬಂದಿದೆ.

Vijaya Karnataka Web 23 Jul 2020, 8:29 am
ಸುಬ್ರಹ್ಮಣ್ಯ: ಕಡಬ ತಾಲೂಕು ಏನೆಕಲ್ಲು ಗ್ರಾಮದ ಚೋಳುಗುಳು ಮಾಟೆ ಎಂಬಲ್ಲಿನ ದೇವರಗುಂಡಿಯಲ್ಲಿ ಮೀನು ಹಿಡಿಯುತ್ತಿದ್ದ ನಾಲ್ವರನ್ನು ಮಂಗಳವಾರ ರಾತ್ರಿ ಪೊಲೀಸರು ಬಂಧಿಸಿದ್ದಾರೆ.
Vijaya Karnataka Web ಸಾಂದರ್ಭಿಕ ಚಿತ್ರ


ಬಸಿರು ನರಿಮೊಗರು (40), ಅಬ್ದುಲ್‌ ರಜಾಕ್‌(42), ಬಸೀರ ಚಡಾವು(42) ಹಾಗೂ ಅಬ್ದುಲ್‌ ಸಮ್ಮದ್‌(45) ಬಂಧಿತರು.

ಮಂಗಳವಾರ ತಡರಾತ್ರಿ ಏನೆಕಲ್ಲು ಗ್ರಾಮದ ಏನೆಕಲ್ಲು ಚೋಳುಗುಳು ಮಾಟ ಎಂಬಲ್ಲಿ ಸಾರ್ವಜನಿಕ ಹೊಳೆಯಲ್ಲಿ ನಾಲ್ವರು ಅಪರಿಚಿತ ವ್ಯಕ್ತಿಗಳು ಹೊಳೆಯಲ್ಲಿ ಗಾಳ ಹಾಕಿ ಮೀನು ಹಿಡಿಯುತ್ತಿರುವುದು ಸ್ಥಳೀಯರ ಗಮನಕ್ಕೆ ಬಂದಿದೆ. ಬಳಿಕ ಹೊಳೆಯ ಬಳಿ ಹೋಗಿ ನೋಡುವ ವೇಳೆ ನಾಲ್ವರು ಮೀನನ್ನು ಹಿಡಿದು ಹೊಳೆ ಬದಿ ಗುಂಪಾಗಿ ಕುಳಿತಿದ್ದರು. ಅವರನ್ನು ವಿಚಾರಿಸಿದಾಗ ಮೀನು ಹಿಡಿಯಲು ಬಂದಿದ್ದ ನಾಲ್ವರು ಪುತ್ತೂರು ತಾಲೂಕಿನ ಸವಣೂರು ಗ್ರಾಮದ ನಿವಾಸಿಗಳೆಂದು ಹೇಳಿದ್ದಾರೆ.

ಕೂಡಲೇ ಸ್ಥಳೀಯರು ಸುಬ್ರಹ್ಮಣ್ಯ ಪೊಲೀಸರಿಗೆ ಮಾಹಿತಿ ನೀಡಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ನಾಲ್ವರನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ