Please enable javascript.ಸುರತ್ಕಲ್: 33 ವರ್ಷದ ಬಳಿಕ ಸಹಪಾಠಿಗಳ ಸಮ್ಮಿಲನ - ಸುರತ್ಕಲ್: 33 ವರ್ಷದ ಬಳಿಕ ಸಹಪಾಠಿಗಳ ಸಮ್ಮಿಲನ - Vijay Karnataka

ಸುರತ್ಕಲ್: 33 ವರ್ಷದ ಬಳಿಕ ಸಹಪಾಠಿಗಳ ಸಮ್ಮಿಲನ

ವಿಕ ಸುದ್ದಿಲೋಕ 3 Jan 2015, 5:52 am
Subscribe

ಸುರತ್ಕಲ್‌ನ ವಿದ್ಯಾದಾಯಿನೀ ಪ್ರೌಢ ಶಾಲೆಯಲ್ಲಿ ಭಾನುವಾರ ಅಪೂರ್ವ ಸಮಾರಂಭ. ಈ ಶಾಲೆಯಲ್ಲಿ ಕಲಿತ 1981-84 ರ ಸಾಲಿನ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಅದಾಗಿತ್ತು.

 33
ಸುರತ್ಕಲ್: 33 ವರ್ಷದ ಬಳಿಕ ಸಹಪಾಠಿಗಳ ಸಮ್ಮಿಲನ
ಸುರತ್ಕಲ್: ಸುರತ್ಕಲ್‌ನ ವಿದ್ಯಾದಾಯಿನೀ ಪ್ರೌಢ ಶಾಲೆಯಲ್ಲಿ ಭಾನುವಾರ ಅಪೂರ್ವ ಸಮಾರಂಭ. ಈ ಶಾಲೆಯಲ್ಲಿ ಕಲಿತ 1981-84 ರ ಸಾಲಿನ ಬ್ಯಾಚ್‌ನ ಹಳೆ ವಿದ್ಯಾರ್ಥಿಗಳ ಪುನರ್ಮಿಲನ ಅದಾಗಿತ್ತು.

ಅಂದಿನ ವಿದ್ಯಾರ್ಥಿಗಳ ಪೈಕಿ ಸುಮಾರು 25 ಮಂದಿ ವಿದ್ಯಾರ್ಥಿಗಳು ಅಂದು ಆಂಗ್ಲ ಮಾಧ್ಯಮವಾಗಿದ್ದ 10ನೇ ಎ ತರಗತಿ ಕೋಣೆಯಲ್ಲಿ ಅಂದಿನ ಶಿಕ್ಷಕಿಯರಲ್ಲಿ ಒಬ್ಬರಾಗಿದ್ದ ಐ. ಉಮಾದೇವಿ ಅವರ ಎದುರು ಕುಳಿತು ಅವರ ‘ಮಾತು’ ಕೇಳಿಸಿಕೊಂಡರು. ಅಷ್ಟಲ್ಲದೆ ವಿದ್ಯೆ ಕಲಿಸಿದ್ದ ಗುರುಗಳಾದ ನರಸಿಂಹ ಭಂಡಿ, ಶ್ರೀನಿವಾಸ ಹೆಬ್ಬಾರ್, ವಾದಿರಾಜ್ ಭಟ್, ಮುರಾರಿ ಹೆಬ್ಬಾರ್ ಅವರ ನಿವಾಸಕ್ಕೆ ತೆರಳಿ ಗುರು ನಮನ ಸಲ್ಲಿಸಿದರು. ಹಿಂದೂ ವಿದ್ಯಾದಾಯಿನೀ ಸಂಘದ ಕಾರ್ಯದರ್ಶಿ ಐ. ಉಮಾದೇವಿ, ವಿದ್ಯಾದಾಯಿನೀ ಗೋವಿಂದ ದಾಸ ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಶ್ರೀಧರ್ ಎಚ್. ಅಭಿನಂದಿಸಿದರು.

ಹಳೆ ವಿದ್ಯಾರ್ಥಿಗಳ ಪೈಕಿ ಹುಬ್ಬಳ್ಳಿಯ ಪ್ರಸಿದ್ದ ದಂತ ವೈದ್ಯ ಮೋಹನ್ ಬಾವಿಕಟ್ಟಿ, ಮಂಗಳೂರಿನ ಪ್ರಸಿದ್ದ ವೈದ್ಯೆ ಡಾ. ಬಾಲ ಸರಸ್ವತಿ, ಕೆಎಂಸಿಯ ಶಿವಾನಂದ ಪ್ರಭು, ಮಿಸ್ಕಿತ್ ಅಸ್ಪತ್ರೆಯ ಕ್ಲಿಫರ್ಡ್, ಬೆಂಗಳೂರಿನ ಕಿರ್ಲೊಸ್ಕರ್ ಕಂಪನಿಯ ಎಚ್‌ಆರ್‌ಡಿ ವಿಭಾಗ ಉಪಾಧ್ಯಕ್ಷ ಮುರಳೀಧರ್ ಮೈರ್ಪಾಡಿ, ಎಂಆರ್‌ಪಿಎಲ್ ಅಧಿಕಾರಿ ಸುರೇಶ್ ಕೆ. ಆರ್, ಅಲ್ಲದೆ ದೇಶ ವಿದೇಶದಲ್ಲಿ ಸೇವೆ ಸಲ್ಲಿಸುತ್ತಿರುವ ಸುಮಾರು 25 ಮಂದಿತಮ್ಮ ಮನೆಯವರೊಂದಿಗೆ ಭಾಗವಹಿಸಿದ್ದರು.

ಹಳೆ ವಿದ್ಯಾರ್ಥಿ ಸಂಘದ ಕಾರ್ಯದರ್ಶಿ ಶ್ರೀನಿವಾಸ ಕುಳಾಯಿ ಕಾರ್ಯಕ್ರಮ ನಿರೂಪಿಸಿದರು. ಅಗಲಿದ ಸಹಪಾಠಿಗಳ ಪೈಕಿ ಕಿಯೊನಿಕ್ಸ್‌ನ ರಮೇಶ್ ರಾವ್, ನಿವೃತ್ತ ಗುರುಗಳಾದ ವಿಠಲ ತಂತ್ರಿ ,ಸಿ. ಎಂ. ಶ್ರೀನಿವಾಸ ರಾವ್, ಪದ್ಮನಾಭ ಅವರಿಗೆ ಶ್ರದ್ಧಾಂಜಲಿ ಸಲ್ಲಿಸಲಾಯಿತು. ಹಿಂದೂ ವಿದ್ಯಾದಾಯಿನೀ ಸಂಘದ ಶಿಕ್ಷಕ ಕಲ್ಯಾಣ ನಿಧಿಗೆ ವಿಶೇಷ ನೆರವು ನೀಡಲಾಯಿತು.

ಶಾಲೆಗೆ ನೆರವಾಗುವುದೇ ಉದ್ದೇಶ: ನಮ್ಮ ಪ್ರಗತಿಗೆ ವಿದ್ಯೆ ಕಲಿಸಿದ ಈ ಶಾಲೆ, ಇಲ್ಲಿನ ಅಧ್ಯಾಪಕರು, ಮತ್ತು ಸಹಪಾಠಿಗಳೇ ಕಾರಣ. ಶಾಲೆಗೆ ಭೌತಿಕ ನೆರವು ನೀಡುವುದು ನಾವೆಲ್ಲರೂ ಒಟ್ಟು ಸೇರಿರುವ ಮುಖ್ಯ ಉದ್ದೇಶ. ಅಂದು ತರಗತಿಯಲ್ಲಿ 59 ಮಂದಿಯಿದ್ದು 28 ಮಂದಿ ಬರಬೇಕಿತ್ತು . 25 ಮಂದಿ ಬಂದಿರುವುದೂ ಸಂತೋಷವೇ, ಅಂದಿಗೂ ಇಂದಿಗೂ ಪರಿಸರದಲ್ಲಿ ತುಂಬಾ ಬದಲಾವಣೆಯಾಗಿದೆ. ಮುಂದಿನ ಆ.15ರಂದು ಮತ್ತೆ ಎಲ್ಲರೂ ಜತೆ ಸೇರಿ ಶಾಲೆಗೆ ದೊಡ್ಡ ಪ್ರಮಾಣದ ಕೊಡುಗೆ ನೀಡುವ ಬಗ್ಗೆ ಚಿಂತನೆ ನಡೆಸುತ್ತೇವೆ. -ಮುರಳೀಧರ್ ಮೈರ್ಪಾಡಿ, ಭಾಗವಹಿಸಿದ್ದ ಹಳೆ ವಿದ್ಯಾರ್ಥಿ
ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ