ಆ್ಯಪ್ನಗರ

ಮುಂದಿನ ವರ್ಷದಿಂದ ಮಂಗಳೂರು ವಿಶ್ವವಿದ್ಯಾಲಯದಲ್ಲಿ ಬ್ಯಾರಿ ಭಾಷಾ ಕೋರ್ಸ್‌ ಆರಂಭಿಸುವಂತೆ ಕುಲಪತಿಗೆ ಮನವಿ

ಸರ್ಟಿಫಿಕೆಟ್ ಅಥವಾ ಡಿಪ್ಲೊಮಾ ಕೋರ್ಸ್‌ ಮೂಲಕ ಪ್ರಾರಂಭ ಮಾಡುದರಿಂದಾಗಿ ಬ್ಯಾರಿ ಕಲೆಗೆ ಉತ್ತೇಜನ ನೀಡಿ, ಬ್ಯಾರಿ ಸಂಸ್ಕೃತಿಯ ಉಳಿವು ಸಾಧ್ಯವಾಗುತ್ತದೆ ಹಾಗೂ ಕಲೆಯ ಬಗ್ಗೆ ಕೀಳರಿಮೆ ಕಡಿಮೆಯಾಗಿ ಮೂಲ ಜನಪದ ಕಲೆಗಳಿಗೆ ಜೀವ ನೀಡಿದಂತಾಗುತ್ತದೆ ಎಂಬುವುದು ಬ್ಯಾರಿ ಸಾಹಿತ್ಯ ಅಕಾಡೆಮಿಯ ಅಭಿಪ್ರಾಯ.

Vijaya Karnataka Web 18 Sep 2020, 9:57 am
ಮಂಗಳೂರು: ಮಂಗಳೂರು ವಿಶ್ವ ವಿದ್ಯಾನಿಲಯದ ಮೂಲಕ ಡಿಪ್ಲೊಮಾ ಅಥವಾ ಸರ್ಟಿಫಿಕೆಟ್‌ ಕೋರ್ಸ್‌ಗಳಾಗಿ ಬ್ಯಾರಿ ಭಾಷೆಯನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭ ಮಾಡಬೇಕು ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪೊಎಸ್‌.ಯಡಪಡಿತ್ತಾಯ ಅವರಿಗೆ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಮ್‌ ಉಚ್ಚಿಲ್‌ ಮನವಿ ಸಲ್ಲಿಸಿದ್ದಾರೆ.
Vijaya Karnataka Web beary


ತನ್ನ ಶಾಸಕತ್ವ ಅವಧಿಯಲ್ಲಿ ಪ್ರತಿ ಗ್ರಾಮಕ್ಕೂ ಅನುದಾನ: ಶಾಸಕ ರಾಜೇಶ್‌ ನಾಯ್ಕ್

ಕೇಂದ್ರ ಸರಕಾರದ ಹೊಸ ಶೈಕ್ಷಣಿಕ ನೀತಿಯ ಪ್ರಕಾರ ಜನಪದ, ಸಂಪ್ರದಾಯಿಕ ಕಲೆಗೆ ಉತ್ತೇಜನ ನೀಡುವ ನಿಟ್ಟಿನಲ್ಲಿ ಆಯಾ ಜನಾಂಗ ಭಾಷೆಗೆ ಸಂಬಂಧಿಸಿದಂತೆ ಇರುವ ಕಲಾ ಪ್ರಕಾರಗಳನ್ನು ವಿಶ್ವವಿದ್ಯಾನಿಲಯಗಳಲ್ಲಿ ಸರ್ಟಿಫಿಕೆಟ್ ಅಥವಾ ಡಿಪ್ಲೊಮಾ ಕೋರ್ಸ್‌ ಮೂಲಕ ಪ್ರಾರಂಭ ಮಾಡಲು ಅವಕಾಶವಿದ್ದು, ಈ ನಿಟ್ಟಿನಲ್ಲಿ ಬ್ಯಾರಿ ಜನಪದ ಕಲೆಗಳಾದ ದಫ್‌, ಬುರ್ದಾ, ಒಪ್ಪನೆ ಮತ್ತು ಕೋಲ್ಕಲಿ ನೃತ್ಯ ಪ್ರಕಾರವನ್ನು ಮಂಗಳೂರು ವಿಶ್ವ ವಿದ್ಯಾನಿಲಯದ ಮೂಲಕ ಡಿಪ್ಲೊಮಾ ಅಥವಾ ಸರ್ಟಿಫಿಕೆಟ್‌ ಕೋರ್ಸ್‌ಗಳಾಗಿ ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭ ಮಾಡಬೇಕು ಎಂದು ವಿನಂತಿ ಮಾಡಿದ್ದಾರೆ.

ರಾಜ್ಯದಲ್ಲಿ ಆಡಳಿತ ನಡೆಸ್ತಿರೋದು ‘ಅಟೆನ್ಶನ್ ಡೈವರ್ಷನ್’ ಸರ್ಕಾರ ; ಯುಟಿ ಖಾದರ್ ಕಿಡಿ

ಸರ್ಟಿಫಿಕೆಟ್ ಅಥವಾ ಡಿಪ್ಲೊಮಾ ಕೋರ್ಸ್‌ ಮೂಲಕ ಪ್ರಾರಂಭ ಮಾಡುದರಿಂದಾಗಿ ಬ್ಯಾರಿ ಕಲೆಗೆ ಉತ್ತೇಜನ ನೀಡಿ, ಬ್ಯಾರಿ ಸಂಸ್ಕೃತಿಯ ಉಳಿವು ಸಾಧ್ಯವಾಗುತ್ತದೆ ಹಾಗೂ ಕಲೆಯ ಬಗ್ಗೆ ಕೀಳರಿಮೆ ಕಡಿಮೆಯಾಗಿ ಮೂಲ ಜನಪದ ಕಲೆಗಳಿಗೆ ಜೀವ ನೀಡಿದಂತಾಗುತ್ತದೆ. ವಿಶ್ವವಿದ್ಯಾನಿಲಯಗಳಿಂದ ಪ್ರಮಾಣ ಪತ್ರ ನೀಡಿದಲ್ಲಿಇದು ವೃತ್ತಿಪರವಾಗಿಯು ಉಪಯೋಗವಾಗುತ್ತದೆ ಎಂದು ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಮ್‌ ಉಚ್ಚಿಲ್‌ ಅಭಿಪ್ರಾಯಪಟ್ಟಿದ್ದಾರೆ.

ಆದಾಯ ತೆರಿಗೆ ಕಚೇರಿಯನ್ನು ಮಂಗಳೂರಲ್ಲೇ ಉಳಿಸಿಕೊಳ್ಳಲು ವಿತ್ತಸಚಿವರ ಒಪ್ಪಿಗೆ: ಡಿವಿಎಸ್

ಅಲ್ಲದೇ ಕೋರ್ಸ್‌ ಆರಂಭಿಸುವುದರಿಂದ ಬ್ಯಾರಿ ಭಾಷೆಯ ಬಗ್ಗೆ ಹೆಚ್ಚು ಹೆಚ್ಚು ಸಂಶೋಧನೆ ಮಾಡಿ ಆಳವಾದ ಅಧ್ಯಯನ ನಡೆಸಲು ಸಹಕಾರಿಯಾಗುತ್ತದೆ. ಈ ಕೋರ್ಸ್‌ಗೆ ಪೂರಕವಾಗಿ ಬೇಕಾಗುವ ಪಠ್ಯ ಕ್ರಮ, ಸಂಪನ್ಮೂಲ ವ್ಯಕ್ತಿಗಳನ್ನು ಬ್ಯಾರಿ ಅಕಾಡೆಮಿ ವತಿಯಿಂದ ನೀಡಲಾಗುವುದು, ಆದುದರಿಂದ ಈ ಬಗ್ಗೆ ಹೆಚ್ಚಿನ ಮುತುವರ್ಜಿ ವಹಿಸಿ ಈ ಪ್ರಸ್ತಾವನೆಯನ್ನು ಅಕಾಡೆಮಿ ಕೌನ್ಸಿಲ್‌ನಲ್ಲಿಒಪ್ಪಿಗೆ ಪಡೆದು ಮುಂದಿನ ಶೈಕ್ಷಣಿಕ ವರ್ಷದಿಂದ ಪ್ರಾರಂಭ ಮಾಡಬೇಕೆಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಪೊಎಸ್‌.ಯಡಪಡಿತ್ತಾಯ ಅವರಿಗೆ ಮನವಿಯಲ್ಲಿ ತಿಳಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ