ಆ್ಯಪ್ನಗರ

ಶಿಕ್ಷಕರ ಕ್ಷೇತ್ರದ ಮತ ವಿಭಜನೆಗೆ ಬಿಜೆಪಿ ಷಡ್ಯಂತ್ರ ಆರೋಪ

ನೈಋುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ ತಾನು ಸ್ಪರ್ಧಿಸುತ್ತಿದ್ದು, ಎದುರಾಳಿ ಬಿಜೆಪಿಯಿಂದ ಶಿಕ್ಷಕರ ಮೂಲಕ ತಪ್ಪು ಮಾಹಿತಿ ಒದಗಿಸಿ ಮತ ವಿಭಜನೆ ಮಾಡಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಕೆ.ಕೆ.ಮಂಜುನಾಥ್‌ ಕುಮಾರ್‌ ಹೇಳಿದರು.

Vijaya Karnataka 3 Apr 2018, 3:54 pm
ಮಂಗಳೂರು: ನೈಋುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್‌ ಚುನಾವಣೆಗೆ ಕಾಂಗ್ರೆಸ್‌ ಪಕ್ಷದಿಂದ ತಾನು ಸ್ಪರ್ಧಿಸುತ್ತಿದ್ದು, ಎದುರಾಳಿ ಬಿಜೆಪಿಯಿಂದ ಶಿಕ್ಷಕರ ಮೂಲಕ ತಪ್ಪು ಮಾಹಿತಿ ಒದಗಿಸಿ ಮತ ವಿಭಜನೆ ಮಾಡಿಸುವ ಷಡ್ಯಂತ್ರ ನಡೆಯುತ್ತಿದೆ ಎಂದು ಕೆ.ಕೆ.ಮಂಜುನಾಥ್‌ ಕುಮಾರ್‌ ಹೇಳಿದರು.
Vijaya Karnataka Web bjp spilt the voters in mlc election k k manjunath
ಶಿಕ್ಷಕರ ಕ್ಷೇತ್ರದ ಮತ ವಿಭಜನೆಗೆ ಬಿಜೆಪಿ ಷಡ್ಯಂತ್ರ ಆರೋಪ


ಬಿಜೆಪಿ ಅಭ್ಯರ್ಥಿ ಕ್ಯಾಪ್ಟನ್‌ ಗಣೇಶ್‌ ಕಾರ್ಣಿಕ್‌ ಅವರೇ ಕೆಲವು ಸರಕಾರಿ ನೌಕರರ ಮೂಲಕ ಅಭ್ಯರ್ಥಿ ಎಂದು ಕರಪತ್ರ ಮುದ್ರಿಸಿ ಹಂಚುವಂಥ ಕೆಲಸ ಮಾಡುತ್ತಿದ್ದಾರೆ. ಬಿಜೆಪಿಯವರು ಇಂಥ ಕೆಲಸ ಮಾಡಿಸುವುದರಲ್ಲಿ ನಿಸ್ಸೀಮರು ಎಂದು ಸುದ್ದಿಗೋಷ್ಠಿಯಲ್ಲಿ ಸೋಮವಾರ ಅವರು ಆರೋಪಿಸಿದರು.

ಜೂನ್‌ ತಿಂಗಳಲ್ಲಿ ಚುನಾವಣೆ ನಡೆಯಲಿದ್ದು, ಅದನ್ನು ಎದುರಿಸಲು ಕಾಂಗ್ರೆಸ್‌ ಸರ್ವ ಸಿದ್ಧತೆ ಮಾಡಿಕೊಂಡಿದೆ. ಈ ಹಿನ್ನೆಲೆಯಲ್ಲಿ ತಾನು ವಿವಿಧ ಶಿಕ್ಷಣ ಸಂಸ್ಥೆಗಳಿಗೆ ಭೇಟಿ ನೀಡಿದ್ದು, ಹಲವು ಸಮಸ್ಯೆಗಳನ್ನು ಶಿಕ್ಷಕರು ಗಮನಕ್ಕೆ ತಂದಿದ್ದು, ವಿಧಾನ ಪರಿಷತ್‌ ಸದಸ್ಯನಾಗಿ ಆಯ್ಕೆಯಾದಲ್ಲಿ ಅವುಗಳನ್ನು ಪರಿಹರಿಸಲು ಪ್ರಾಮಾಣಿಕ ಪ್ರಯತ್ನ ನಡೆಸುತ್ತೇನೆ ಎಂದು ಅವರು ಹೇಳಿದರು.

ರಾಜ್ಯದ ಇತಿಹಾಸದಲ್ಲೇ ಶಿಕ್ಷಕರ ಮತ್ತು ಶಿಕ್ಷಣ ಸಂಸ್ಥೆಗಳ ಸಮಸ್ಯೆಗಳನ್ನು ಪರಿಹರಿಸುವ, ಶಿಕ್ಷಣ ತಾರತಮ್ಯ ನಿವಾರಿಸುವ, ಶಿಕ್ಷಣ ಸಂಸ್ಥೆಗಳಿಗೆ ಅನುದಾನ ಸಹಿತ ಸೌಲಭ್ಯ ಒದಗಿಸುವ ಕೆಲಸವನ್ನು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರಕಾರ ಮಾಡಿದೆ. ಹಿಂದಿನ ಬಿಜೆಪಿ ಮತ್ತು ಅದಕ್ಕಿಂತ ಮೊದಲಿನ ಜೆಡಿಎಸ್‌- ಬಿಜೆಪಿ ಸರಕಾರಗಳು ಕೆಲವು ಸಮಸ್ಯೆಗಳನ್ನು ಸೃಷ್ಟಿಸಿದ್ದವು. ಅವುಗಳಿಗೆ ಸಚಿವ ತನ್ವೀರ್‌ ಸೇಠ್‌ ಪರಿಹಾರ ಒದಗಿಸಿದ್ದು, ಕೆಲವು ಪರಿಹಾರದ ಹಂತದಲ್ಲಿವೆ ಎಂದರು.

ಪ್ರೌಢಶಾಲೆ ಶಿಕ್ಷಕರ 500 ರೂ. ಭತ್ಯೆ, ಪದವಿ ಪೂರ್ವ ಶಿಕ್ಷಕರ ವೇತನ ಶ್ರೇಣಿ ನಿಗದಿ, ಅನುದಾನಿತ ಕನ್ನಡ ಮಾಧ್ಯಮ ಪೌಢಶಾಲೆಗಳಲ್ಲಿ ಶಿಕ್ಷಕರ ಕೊರತೆಯಿಂದ ಒಂದೊಂದು ವಿಭಾಗ ಮುಚ್ಚುವ ಸ್ಥಿತಿ, ಶಿಕ್ಷಕರು- ವಿದ್ಯಾರ್ಥಿಗಳ ಅನುಪಾತ 1:70 ಬದಲಿಗೆ ಎನ್‌ಸಿಆರ್‌ಟಿಯ 1:40 ಅನುಪಾತ ಅನುಷ್ಠಾನ, ಸರಕಾರಿ ಮತ್ತು ಅನುದಾನಿತ ಶಿಕ್ಷಕರಿಗೆ ಹಳೆ ಪಿಂಚಣಿ ಪದ್ಧತಿ ಜಾರಿ, ಅತಿಥಿ ಶಿಕ್ಷಕರಿಗೆ ಸೇವಾ ಭದ್ರತೆ, ಅನುದಾನ ರಹಿತ ಶಾಲೆ ಶಿಕ್ಷಕರಿಗೆ ಕನಿಷ್ಠ ವೇತನ ಸಹಿತ ಆರೋಗ್ಯ ಕಾರ್ಡ್‌ ಒದಗಿಸಲು ಹೋರಾಟ ನಡೆಸುತ್ತೇನೆ ಎಂದು ಭರವಸೆ ನೀಡಿದರು.

ಜಿಲ್ಲಾ ಕಾಂಗ್ರೆಸ್‌ ಅಧ್ಯಕ್ಷ ಹರೀಶ್‌ ಕುಮಾರ್‌, ಸದಾಶಿವ ಉಳ್ಳಾಲ್‌, ಆರಿಫ್‌ ಬಾವ, ರಘುರಾಜ್‌, ಲಾರೆನ್ಸ್‌, ಪ್ರೇಮ್‌ ಬಲ್ಲಾಳ್‌ಗಾಗ್‌, ನೀರಜ್‌ ಚಂದ್ರಪಾಲ್‌, ನಝೀರ್‌ ಬಜಾಲ್‌ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ