ಆ್ಯಪ್ನಗರ

ಉಪ್ಪಿನಂಗಡಿ: ಟ್ಯಾಂಕರ್ ಮಗುಚಿ ಬಿದ್ದು ಚಾಲಕ ಗಂಭೀರ

ಸ್ಥಳೀಯರು ಟ್ಯಾಂಕರನ್ನು ತೆರವುಗೊಳಿಸಲು ಯತ್ನಿಸಿದಾಗ ಚಾಲಕ ಕಾಣಿಸಿಕೊಳ್ಳಲಿಲ್ಲ. ಬಳಿಕ ಪರಿಶೀಲನೆ ನಡೆಸಿದಾಗ ಚರಂಡಿಯ ಕೆಸರಿನಲ್ಲಿ ಕಾಲುಗಳು ಕಾಣಿಸಿಕೊಂಡು ಶೋಧ ಕಾರ್ಯಾಚರಣೆ ನಡೆಸಿ ಮಣ್ಣಲ್ಲಿ ಹೂತು ಹೋಗಿದ್ದ ಚಾಲಕನನ್ನು ಮೇಲಕ್ಕೆತ್ತಲಾಯಿತು.

Vijaya Karnataka Web 3 Aug 2020, 7:18 pm
ಉಪ್ಪಿನಂಗಡಿ: ಸಿಮೆಂಟ್‌ ಮಿಕ್ಸಿಂಗ್‌ ಸಾಗಾಟದ ಟ್ಯಾಂಕರೊಂದು ಮಗುಚಿ ಬಿದ್ದ ಪರಿಣಾಮ ಟ್ಯಾಂಕರ್‌ ಚಾಲಕ ಗಣೇಶ್‌ (42) ಗಂಭೀರವಾಗಿ ಗಾಯಗೊಂಡ ಘಟನೆ ಸೋಮವಾರ ನಡೆದಿದೆ.
Vijaya Karnataka Web Accident


ಕೊರೊನಾ ಭೀತಿ; ಮಾಜಿ ಸಚಿವ ರಮಾನಾಥ ರೈ ಹೋಂ ಕ್ವಾರೆಂಟೈನ್..!

ಪುತ್ತೂರು ತಾಲೂಕಿನ ಉಪ್ಪಿನಂಗಡಿ ಸಮೀಪದ ಬಜತ್ತೂರು ಗ್ರಾಮದ ನೀರಕಟ್ಟೆ ಎಂಬಲ್ಲಿ ರಾಹೆ 75ರ ತಿರುವಿನಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಅಪಘಾತಕ್ಕೀಡಾದ ಟ್ಯಾಂಕರ್‌ ಹೆದ್ದಾರಿ ಬದಿಯ ಚರಂಡಿಗೆ ಬಿದ್ದು ಹೂತು ಹೋಗಿದೆ. ಸ್ಥಳೀಯರು ಟ್ಯಾಂಕರನ್ನು ತೆರವುಗೊಳಿಸಲು ಯತ್ನಿಸಿದಾಗ ಚಾಲಕ ಕಾಣಿಸಿಕೊಳ್ಳಲಿಲ್ಲ. ಬಳಿಕ ಪರಿಶೀಲನೆ ನಡೆಸಿದಾಗ ಚರಂಡಿಯ ಕೆಸರಿನಲ್ಲಿ ಕಾಲುಗಳು ಕಾಣಿಸಿಕೊಂಡು ಶೋಧ ಕಾರ್ಯಾಚರಣೆ ನಡೆಸಿ ಮಣ್ಣಲ್ಲಿ ಹೂತು ಹೋಗಿದ್ದ ಚಾಲಕನನ್ನು ಮೇಲಕ್ಕೆತ್ತಲಾಯಿತು.

ಪಚ್ಚನಾಡಿಯಲ್ಲಿ ಪೌರ ಕಾರ್ಮಿಕರಿಗೆ ಮೀಸಲಿಟ್ಟ ಜಾಗದಲ್ಲಿರುವ ಅಕ್ರಮ

ಕೂಡಲೇ ಆತನನ್ನು ನೆಲ್ಯಾಡಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ನಂತರ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಚಾಲಕನ ರಕ್ಷಣಾ ಕಾರ್ಯಾಚರಣೆಯಲ್ಲಿ ಸ್ಥಳೀಯರಾದ ಮನ್ಸೂರ್‌, ಮುಸ್ತಾಫ್‌ ಮತ್ತಿತರರು ಪೊಲೀಸರೊಂದಿಗೆ ಸಹಕರಿಸಿದರು.

ಅಂಗಾರರಿಗೆ ಮಂತ್ರಿ ಸ್ಥಾನ ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು - ನಳಿನ್ ‌ಕುಮಾರ್

ಘಟನೆ ಸಂಬಂಧ ಉಪ್ಪಿನಂಗಡಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ