ಆ್ಯಪ್ನಗರ

ಸಂಕ್ರಾಂತಿ: ಮಂಗಳೂರಿಗೆ ಆಗಮಿಸಿದ ಸಿಜೆಐ ಬೋಬ್ಡೆ, ಇಂದು ಶೃಂಗೇರಿ ಮಠಕ್ಕೆ ಭೇಟಿ!

​ಸಿಜೆಐ ಭೇಟಿ ಹಿನ್ನೆಲೆಯಲ್ಲಿ ಅವರು ವಾಸ್ತವ್ಯ ಮಾಡುವ ಹೋಟೆಲ್‌ ಸಹಿತ ಮಂಗಳೂರು ನಗರದಾದ್ಯಂತ ಭಾರಿ ಬಂದೋ ಬಸ್ತ್‌ ಏರ್ಪಡಿಸಲಾಗಿದೆ. ಅವರು ಸಂಚರಿಸುವ ರಸ್ತೆ ಮಾರ್ಗವನ್ನು ಸಂಪೂರ್ಣ ಬಂದ್‌ ಮಾಡಿ ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರಿಗೆ ಹೋಟೆಲ್‌ ಪ್ರವೇಶ ನಿರ್ಬಂಧಿಸಲಾಗಿತ್ತು.

Vijaya Karnataka Web 14 Jan 2021, 7:59 am
ಮಂಗಳೂರು: ಭಾರತದ ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿ ಶರದ್‌ ಅರವಿಂದ್‌ ಬೋಬ್ಡೆ ಬುಧವಾರ ರಾತ್ರಿ ಮಂಗಳೂರಿಗೆ ಆಗಮಿಸಿದ್ದಾರೆ. ಗುರುವಾರ ಬೆಳಗ್ಗೆ ಶೃಂಗೇರಿ ಮಠಕ್ಕೆ ಭೇಟಿ ನೀಡುವ ಉದ್ದೇಶದಿಂದ ಮಂಗಳೂರಿಗೆ ಆಗಮಿಸಿದ ಅವರು, ರಾತ್ರಿ ನಗರದ ಬಿಜೈ ಕಾಪಿಕಾಡ್‌ನ ಹೋಟೆಲ್‌ ಓಶಿಯನ್‌ ಪರ್ಲ್‌ನಲ್ಲಿ ವಾಸ್ತವ್ಯ ಮಾಡಿದ್ದಾರೆ.
Vijaya Karnataka Web CJI SA Bobde. Photo: BCCL


ಬುಧವಾರ ರಾತ್ರಿ 7 ಗಂಟೆಗೆ ದಿಲ್ಲಿಯಿಂದ ಹೊರಟ ವಿಮಾನ ರಾತ್ರಿ 9.30ರ ಸುಮಾರಿಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್‌ ಆಯಿತು. ಅಲ್ಲಿಂದ ಅವರು ರಸ್ತೆ ಮಾರ್ಗವಾಗಿ ಬಿಜೈಗೆ ಆಗಮಿಸಿ ಹೋಟೆಲ್‌ಗೆ ಬಂದು ವಾಸ್ತವ್ಯ ಮಾಡಿದ್ದಾರೆ. ಗುರುವಾರ ಬೆಳಗ್ಗೆ ಮಂಗಳೂರು ವಿಮಾನ ನಿಲ್ದಾಣದಿಂದ ಹೆಲಿಕಾಪ್ಟರ್‌ ಮೂಲಕ ಶೃಂಗೇರಿಗೆ ತೆರಳಲಿರುವ ಅವರು ಅಲ್ಲಿ ವಾಸ್ತವ್ಯ ಮಾಡಲಿದ್ದಾರೆ. ಶುಕ್ರವಾರ ಮರಳಿ ದಿಲ್ಲಿಗೆ ತೆರಳಲಿದ್ದಾರೆ ಎಂದು ತಿಳಿದು ಬಂದಿದೆ.

ಬಿಗಿ ಭದ್ರತೆ!
ಸಿಜೆಐ ಭೇಟಿ ಹಿನ್ನೆಲೆಯಲ್ಲಿ ಅವರು ವಾಸ್ತವ್ಯ ಮಾಡುವ ಹೋಟೆಲ್‌ ಸಹಿತ ಮಂಗಳೂರು ನಗರದಾದ್ಯಂತ ಭಾರಿ ಬಂದೋ ಬಸ್ತ್‌ ಏರ್ಪಡಿಸಲಾಗಿದೆ. ಅವರು ಸಂಚರಿಸುವ ರಸ್ತೆ ಮಾರ್ಗವನ್ನು ಸಂಪೂರ್ಣ ಬಂದ್‌ ಮಾಡಿ ಝೀರೋ ಟ್ರಾಫಿಕ್‌ ವ್ಯವಸ್ಥೆ ಮಾಡಲಾಗಿತ್ತು. ಸಾರ್ವಜನಿಕರಿಗೆ ಹೋಟೆಲ್‌ ಪ್ರವೇಶ ನಿರ್ಬಂಧಿಸಲಾಗಿತ್ತು.ಸಿಜೆಐ ಆಗಿ ಅಧಿಕಾರ ಸ್ವೀಕರಿಸಿದ ಬಳಿಕ ಬೋಬ್ಡೆ ತಿರುಪತಿ ವೆಂಕಣರಮಣನ ದರ್ಶನ ಮಾಡಿದ್ದರು.

ಜ.16ರಂದು ಪುತ್ತೂರಿನಲ್ಲಿ ಕೊರೊನಾ ಲಸಿಕೆ ವಿತರಣೆ, ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್‌!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ