ಆ್ಯಪ್ನಗರ

ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ ಪದಕ ವಿಜೇತರಿಗೆ ಸಂಭ್ರಮದ ಸ್ವಾಗತ

ಕೆನಡಾದ ಸೈಂಟ್‌ ಜೋನ್ಸ್‌ನಲ್ಲಿನಡೆದ ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ ಪದಕ ವಿಜೇತರು ಬುಧವಾರ ಹುಟ್ಟೂರಿಗೆ ಮರಳಿದಾಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಸಂಭ್ರಮದ ಸ್ವಾಗತ ನೀಡಲಾಯಿತು.

Vijaya Karnataka 26 Sep 2019, 5:00 am
ಬಜಪೆ: ಕೆನಡಾದ ಸೈಂಟ್‌ ಜೋನ್ಸ್‌ನಲ್ಲಿನಡೆದ ಕಾಮನ್‌ವೆಲ್ತ್‌ ಪವರ್‌ ಲಿಫ್ಟಿಂಗ್‌ ಚಾಂಪಿಯನ್‌ಷಿಪ್‌ನ ಪದಕ ವಿಜೇತರು ಬುಧವಾರ ಹುಟ್ಟೂರಿಗೆ ಮರಳಿದಾಗ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿಸಂಭ್ರಮದ ಸ್ವಾಗತ ನೀಡಲಾಯಿತು.
Vijaya Karnataka Web 25vm champion


4 ಚಿನ್ನ , 2 ಬೆಳ್ಳಿ ಪದಕ ಹಾಗೂ ಬೆಸ್ಟ್‌ ಲಿಫ್ಟರ್‌, ಸ್ಟ್ರಾಂಗ್‌ಮ್ಯಾನ್‌ ಪ್ರಶಸ್ತಿ ಪಡೆದ ಮಂಗಳೂರಿನ ಪ್ರದೀಪ್‌ ಕುಮಾರ್‌ ಆಚಾರ್ಯ ಹಾಗೂ ಸಬ್‌ಜೂನಿಯರ್‌ ವಿಭಾಗದಲ್ಲಿ2 ಚಿನ್ನದ ಪದಕ ಪಡೆದ ಮಂಗಳೂರಿನವರೇ ಆದ ರಿತ್ವಿಕ್‌ ಅಲೆವೂರಾಯ ಬುಧವಾರ ತಾಯ್ನಾಡಿಗೆ ಮರಳಿದಾಗ ವಿಮಾನ ನಿಲ್ದಾಣದಲ್ಲಿಅವರ ಕುಟುಂಬ ಸದಸ್ಯರು ಹಾಗೂ ಸ್ನೇಹಿತರು ಸಂಭ್ರಮದಿಂದ ಸ್ವಾಗತಿಸಿದರು. ತರಬೇತುದಾರ, ಏಕಲವ್ಯ ಪ್ರಶಸ್ತಿ ಪುರಸ್ಕೃತ ಸತೀಶ್‌ಕುಮಾರ್‌ ಕುದ್ರೋಳಿ ಜತೆಗಿದ್ದರು. ಆದರೆ ಈ ವೇಳೆ ಸರಕಾರ ಹಾಗೂ ಜಿಲ್ಲಾಡಳಿತದ ನಿರ್ಲಕ್ಷ್ಯ ಎದ್ದು ಕಾಣುತ್ತಿತ್ತು. ಕರಾವಳಿಯ ಇನ್ನೊಬ್ಬ ಪದಕ ವಿಜೇತ ಲಿಫ್ಟರ್‌ ವಿಶ್ವನಾಥ ಗಾಣಿಗ ಮಂಗಳವಾರವೇ ಬೆಂಗಳೂರಿಗೆ ಬಂದಿಳಿದಿದ್ದಾರೆ.

ಖುಷಿಯಾಗಿದೆ: ಪ್ರದೀಪ್‌

ಚಿನ್ನದ ಪದಕಗಳ ಜತೆಗೆ ಇದೇ ಮೊದಲ ಬಾರಿಗೆ ಮುಕ್ತ ವಿಭಾಗದಲ್ಲಿಬೆಸ್ಟ್‌ಲಿಫ್ಟರ್‌, ಸ್ಟ್ರಾಂಗ್‌ಮ್ಯಾನ್‌ ಪ್ರಶಸ್ತಿ ಪಡೆದುದು ಮತ್ತಷ್ಟು ಖುಷಿಯಾಗಿದೆ. ತೀವ್ರ ಸ್ಪರ್ಧೆಯ ಮಧ್ಯೆ ನಮ್ಮ ಸಾಧನೆ ತೃಪ್ತಿ ನೀಡಿದೆ. ಇದು ಪ್ರದೀಪ್‌ ಕುಮಾರ್‌ ಆಚಾರ್ಯ ಅವರ ಮೊದಲ ಮಾತು.

ಮಂಗಳೂರು ಮಹಾನಗರ ಪಾಲಿಕೆ ನಮ್ಮ ಸಾಧನೆಯನ್ನು ಗುರುತಿಸಬಹುದೆಂಬ ನಿರೀಕ್ಷೆ ಇದೆ. 2017ರಲ್ಲಿಕಾಮನ್‌ವೆಲ್ತ್‌ ಪದಕ ಗೆದ್ದಾಗ ನಗದು ಪುರಸ್ಕಾರದ ಗೌರವ ನೀಡಿದ್ದರು. ರಾಜ್ಯ ಸರಕಾರದ ಸಹಕಾರದ ಬಗ್ಗೆ ಯಾವುದೇ ಸ್ಪಷ್ಟತೆ ಇಲ್ಲ. ಆದರೆ ಸರಕಾರಗಳು ಈ ನಿಟ್ಟಿನಲ್ಲಿತಮ್ಮ ಧೋರಣೆಯನ್ನು ಬದಲಿಸಬೇಕು ಅನ್ನುತ್ತಾರೆ ಪ್ರದೀಪ್‌.

ವೀಸಾ ರಿಜೆಕ್ಟ್ ಬಗ್ಗೆ ಖೇದ: ನಮ್ಮಲ್ಲಿ15 ಮಂದಿಯ ವೀಸಾ ರಿಜೆಕ್ಟ್ ಆಗಿದ್ದು ಒಮ್ಮೆ ನಮ್ಮ ಧೈರ್ಯಗೆಡಿಸಿ ಒತ್ತಡ ಹೆಚ್ಚಿಸಿತ್ತು. ಕೇಂದ್ರ ಸರಕಾರ ಸಾಕಷ್ಟು ಪೂರ್ವಭಾವಿಯಾಗಿ ಪ್ರಯತ್ನಿಸಿದ್ದರೆ, ಇನ್ನಷ್ಟು ಮಂದಿಗೆ ಅವಕಾಶ ಸಿಗುತ್ತಿತ್ತೇನೋ? 2014ರಲ್ಲಿಅಮೆರಿಕ ಕೂಟಕ್ಕೆ ನನ್ನ ವೀಸಾ ರಿಜೆಕ್ಟ್ ಆಗಿದು,್ದ ಆ ನೋವಿನ ಅರಿವು ನನಗಿದೆ ಎಂದ ಪ್ರದೀಪ್‌ ಆಚಾರ್ಯ, ಸರಕಾರ, ಜಿಲ್ಲಾಡಳಿತದವರ ನಿರ್ಲಕ್ಷ್ಯದ ಬಗ್ಗೆ ಬೇಸರ ವ್ಯಕ್ತ ಪಡಿಸಿದರು.


ಇದು ನನ್ನ ಮೊದಲ ಅಂತಾರಾಷ್ಟ್ರೀಯ ಪವರ್‌ ಲಿಫ್ಟಿಂಗ್‌ ಸ್ಪರ್ಧೆ. ಎರಡು ವಿಭಾಗಗಳಲ್ಲಿಚಿನ್ನ ಗೆದ್ದಿರುವುದು ಬಹಳ ಖುಷಿ ಇದೆ. ಮುಂದೆ ಇನ್ನಷ್ಟು ಸಾಧನೆ ಮಾಡಬೇಕೆಂಬ ಮನಸ್ಸಿದೆ.
- ರಿತ್ವಿಕ್‌ ಅಲೆವೂರಾಯ, ಪದಕ ವಿಜೇತ ಕ್ರೀಡಾಪಟು

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ