ಆ್ಯಪ್ನಗರ

ನಾರಾಯಣ ಗುರುಗಳ ವಿಷಯದಲ್ಲಿ ಹಿಂದೂ ಸಮಾಜವನ್ನು ಒಡೆಯುವ ಹುನ್ನಾರ; ಸುದರ್ಶನ್ ಮೂಡಬಿದ್ರೆ

ದೇವರ ಬಗ್ಗೆ ನಂಬಿಕೆ ಇಲ್ಲದ, ದೇಶ, ಧರ್ಮದ ನಿಷ್ಠೆ ಇಲ್ಲದ ಕೇರಳ ಸರಕಾರಕ್ಕೆ ಈಗ ನಾರಾಯಣ ಗುರುಗಳ ಮೇಲೆ ಭಕ್ತಿ ಹೆಚ್ಚಾಗಿದೆ. ಕೇರಳದ ಅನೇಕ ಭಾಗಗಳಲ್ಲಿ ನಾರಾಯಣ ಗುರುಗಳ ಪ್ರತಿಮೆಯನ್ನು ಧ್ವಂಸ ಮಾಡಿದ ಮತ್ತು ನಾರಾಯಣ ಗುರುಗಳ ಭಾವಚಿತ್ರದ ಮೇಲೆ ಸಾರ್ವಜನಿಕವಾಗಿ ಮೊಳೆ ಹೊಡೆದು ಅಪಮಾನ ಮಾಡಿದ ಕಮ್ಯೂನಿಷ್ಟರಿಗೆ ಈಗ ಏಕಾಏಕಿ ಗುರುಗಳ ಮೇಲೆ ಭಕ್ತಿ ಹೆಚ್ಚಾಗಿದೆ. ಇದು ರಾಜಕೀಯವಲ್ಲದೆ ಮತ್ತೇನು ಎಂದು ಸುದರ್ಶನ ಮೂಡುಬಿದಿರೆ ಪ್ರಶ್ನಿಸಿದರು.

Vijaya Karnataka 21 Jan 2022, 8:18 am
ಮಂಗಳೂರು: ಪಿಣರಾಯಿ ವಿಜಯನ್‌ ನೇತೃತ್ವದ ಕೇರಳ ಸರಕಾರ ಹಾಗೂ ಕಾಂಗ್ರೆಸಿಗರು ಸೇರಿ ಬ್ರಹ್ಮಶ್ರೀ ನಾರಾಯಣ ಗುರುಗಳ ವಿಷಯವನ್ನು ಮುಂದಿಟ್ಟುಕೊಂಡು ಹಿಂದೂ ಸಮಾಜವನ್ನು ಒಡೆಯುವ ಕೆಲಸವನ್ನು ಮಾಡುತ್ತಿದೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಅಧ್ಯಕ್ಷ ಸುದರ್ಶನ ಮೂಡುಬಿದಿರೆ ಆರೋಪಿಸಿದ್ದಾರೆ.
Vijaya Karnataka Web Sudarshan Moodbidre


ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ದೇವರ ಬಗ್ಗೆ ನಂಬಿಕೆ ಇಲ್ಲದ, ದೇಶ, ಧರ್ಮದ ನಿಷ್ಠೆ ಇಲ್ಲದ ಕೇರಳ ಸರಕಾರಕ್ಕೆ ಈಗ ನಾರಾಯಣ ಗುರುಗಳ ಮೇಲೆ ಭಕ್ತಿ ಹೆಚ್ಚಾಗಿದೆ. ಕೇರಳದ ಅನೇಕ ಭಾಗಗಳಲ್ಲಿ ನಾರಾಯಣ ಗುರುಗಳ ಪ್ರತಿಮೆಯನ್ನು ಧ್ವಂಸ ಮಾಡಿದ ಮತ್ತು ನಾರಾಯಣ ಗುರುಗಳ ಭಾವಚಿತ್ರದ ಮೇಲೆ ಸಾರ್ವಜನಿಕವಾಗಿ ಮೊಳೆ ಹೊಡೆದು ಅಪಮಾನ ಮಾಡಿದ ಕಮ್ಯೂನಿಷ್ಟರಿಗೆ ಈಗ ಏಕಾಏಕಿ ಗುರುಗಳ ಮೇಲೆ ಭಕ್ತಿ ಹೆಚ್ಚಾಗಿದೆ. ಇದು ರಾಜಕೀಯವಲ್ಲದೆ ಮತ್ತೇನು ಎಂದು ಅವರು ಪ್ರಶ್ನಿಸಿದರು.
ನಾರಾಯಣ ಗುರು ಸ್ತಬ್ದಚಿತ್ರ ನಿರಾಕರಣೆ: ಕರಾವಳಿಯಲ್ಲಿ ಕೇಂದ್ರ ಸರ್ಕಾರದ ವಿರುದ್ಧ ವ್ಯಾಪಕ ಆಕ್ರೋಶ
ಕೇರಳ ರಾಜ್ಯದಲ್ಲಿ ಹಲವಾರು ವರ್ಷಗಳಿಂದ ನಾರಾಯಣ ಗುರುಗಳ ಶಿಷ್ಯರಿಂದ ಸ್ಥಾಪಿತವಾದ ನಾರಾಯಣ ಗುರು ಧರ್ಮ ಪರಿಪಾಲನಾ ಸಮಿತಿ (ಎಸ್‌ಎನ್‌ಡಿಪಿ) ಸಮಾಜದಲ್ಲಿ ಸುಧಾರಣೆ ತರುವ ಕೆಲಸವನ್ನು ನಿರಂತರವಾಗಿ ಮಾಡುತ್ತಾ ಬಂದಿದೆ. ಇದಕ್ಕೆ ಪೂರಕವಾಗಿ ಎಸ್‌ಎನ್‌ಡಿಪಿಯ ಅನೇಕ ಪ್ರಮುಖರು ಕೇರಳದಲ್ಲಿ ಒಂದು ರಾಜಕೀಯ ಇಚ್ಛಾಶಕ್ತಿ ಬೇಕು ಎನ್ನುವ ಹಿನ್ನೆಲೆಯಲ್ಲಿ ರಾಷ್ಟ್ರೀಯ ವಿಚಾರಧಾರೆಯನ್ನು ಇಟ್ಟುಕೊಂಡು ಭಾರತೀಯ ಧರ್ಮ ಜನಸೇನಾ (ಬಿಡಿಜೆಎಸ್‌) ಎನ್ನುವ ರಾಜಕೀಯ ಪಕ್ಷವನ್ನು ಸ್ಥಾಪನೆ ಮಾಡಿದ್ದಾರೆ. ಇದು ಬಿಜೆಪಿ ಜತೆ ಗುರುತಿಸಿಕೊಂಡಿದೆ. ಈ ಪಕ್ಷ ದಿನೇ ದಿನೇ ಬಲಿಷ್ಠವಾಗುತ್ತಿದ್ದು, ಇದರಿಂದ ಕಮ್ಯೂನಿಷ್ಟರು ಕಂಗಾಲಾಗಿದ್ದಾರೆ. ಬಿಡಿಜೆಎಸ್‌ನಿಂದ ಮುಂದೆ ಕೇರಳದಲ್ಲಿ ಕಮ್ಯೂನಿಷ್ಟರಿಗೆ ದೊಡ್ಡ ಹೊಡೆತ ಬೀಳುವುದರಿಂದ ಗುರುಗಳ ಹೆಸರಿನಲ್ಲಿ ರಾಜಕೀಯ ಮಾಡಲು ಹೊರಟಿದ್ದಾರೆ ಎಂದು ಟೀಕಿಸಿದರು.

ಪ್ರತಿಮೆ ಧ್ವಂಸ ಮಾಡಿದಾಗ ಇವರೆಲ್ಲಿದ್ದರು?: ಕೇರಳದಲ್ಲಿ ಗುರುಪೀಠ, ಗುರುಗಳ ಪ್ರತಿಮೆ ಧ್ವಂಸ ಮಾಡಿದಾಗ ಬಿ.ಕೆ.ಹರಿಪ್ರಸಾದ್‌, ವಿನಯ ಕುಮಾರ್‌ ಸೊರಕೆ ಸೊಲ್ಲೆತ್ತಿಲ್ಲ, ಕೋಟಿ ಚೆನ್ನಯರ ತಾಯಿ ದೇಯಿ ಬೈದೆತ್ತಿಯನ್ನು ನಿಂದಿಸಿದಾಗ ರಮಾನಾಥ ರೈ ಖಂಡಿಸಿಲ್ಲ. ಅಭಯಚಂದ್ರ ಜೈನ್‌ ಕೂಡ ಮಾತನಾಡಲಿಲ್ಲ. ಈಗ ರಾಜಕೀಯ ಷಡ್ಯಂತ್ರದ ಮೂಲಕ ರಾಜಕಾರಣ ಮಾಡುತ್ತಿರುವ ಕಾಂಗ್ರೆಸ್‌ನಿಂದ ಧರ್ಮದ ಬಗ್ಗೆ ಪಾಠ ಕಲಿಯುವ ಅವಶ್ಯಕತೆ ಬಿಜೆಪಿಗೆ ಇಲ್ಲಎಂದು ಸುದರ್ಶನ ಮೂಡಬಿದಿರೆ ಹೇಳಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ