ಆ್ಯಪ್ನಗರ

ಬೆಂಗಳೂರಿನಲ್ಲಿ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆಗೆ ಖಾದರ್ ಖಂಡನೆ

ಕೊರೊನಾ ಮಾಹಿತಿ ಸಂಗ್ರಹ ಮಾಡಲು ಹೋಗಿದ್ದ ಆಶಾ ಕಾರ್ಯಕರ್ತೆಯರ ಮೇಲೆ ನಡೆದ ಹಲ್ಲೆ ಪ್ರಕರಣವನ್ನು ಕಾಂಗ್ರೆಸ್ ಶಾಸಕ ಯು.ಟಿ ಖಾದರ್ ಖಂಡಿಸಿದ್ದಾರೆ. ಜನರ ಹಿತಾಸಕ್ತಿಗಾಗಿ ದುಡಿಯುವ ಆಶಾ ಕಾರ್ಯಕರ್ತೆಯರಿಗೆ ಜನರು ಸ್ಪಂದಿಸಬೇಕು ಎಂದು ಮನವಿ ಮಾಡಿದ್ದಾರೆ.

Vijaya Karnataka 2 Apr 2020, 4:05 pm
ಮಂಗಳೂರು: ಬೆಂಗಳೂರಿನ ಸಾದೀಕ್ ನಗರದಲ್ಲಿ ಕೋವಿಡ್-19 ತಪಾಸಣೆಗಾಗಿ ಹೋಗಿದ್ದ ಆಶಾ ಕಾರ್ಯಕರ್ತರ‌ ಮೇಲೆ ನಡೆದ ಹಲ್ಲೆಯನ್ನು ಕಾಂಗ್ರೆಸ್ ಶಾಸಕ ಯು.ಟಿ.ಖಾದರ್ ತೀವ್ರವಾಗಿ ಖಂಡಿಸಿದ್ದಾರೆ.
Vijaya Karnataka Web ut khader


ಆಶಾ ಕಾರ್ಯಕರ್ತರು ಎಂದಿಗೂ ಜನರ ಹಿತಾಸಕ್ತಿಗಾಗಿ ದುಡಿಯುವ ಮಹಿಳೆಯರು. ಎಂದಿಗೂ ಜನರ ಹಿತಾಸಕ್ತಿಗೆ ನೋವುಂಟು ಮಾಡುವ ಕೆಲಸ ಆಶಾ ಕಾರ್ಯಕರ್ತರದಲ್ಲ‌. ಅವರು ನಮ್ಮ ಕುಟುಂಬದ ಒಳಿತಿಗಾಗಿ ಬಂದು ಆರೋಗ್ಯದ ಕುರಿತು ಮಾಹಿತಿ ಕೇಳಿದರೆ ಅವರಿಗೆ ಸ್ಪಂದಿಸುವುದು ನಮ್ಮೆಲ್ಲರ ಆದ್ಯ ಕರ್ತವ್ಯ ಎಂದರು.

ಕೊರೊನಾ ವೈರಸ್ ಜಾತಿ, ಮತ, ದೇಶ, ಗಡಿ, ಭಾಷೆ, ರಾಜ್ಯ, ಶ್ರೀಮಂತ, ಬಡವ, ಶಿಕ್ಷಿತರು, ಅಶಿಕ್ಷಿತರು ಎಂಬುದನ್ನು ನೋಡದೆ ಎಲ್ಲರಲ್ಲೂ ಹರಡುವ ಅಪಯಾಕಾರಿ ಸೋಂಕು. ನಾವೆಲ್ಲರೂ ಒಗ್ಗಟ್ಟಿನಿಂದ ವೈರಸ್ ಮುಕ್ತಿಗಾಗಿ ಹೋರಾಡಲೆ ಬೇಕು.

ಕೊರೊನಾ ಎಫೆಕ್ಟ್: ಲಾಕ್‌ಡೌನ್‌ ಕಟ್ಟುನಿಟ್ಟಾಗಿ ಜಾರಿಗೆ ತರುವಂತೆ ಬಿಎಸ್‌ವೈಗೆ ಮೋದಿ ಸೂಚನೆ

ವೈರಸ್ ಎಲ್ಲಿಂದ ಹೇಗೆ ಬಂತು ಎಂದು ಪರಸ್ಪರ ಕಿತ್ತಾಡುವ ಬದಲು ಎಲ್ಲರೂ ಎಲ್ಲರಿಗೂ ಎಲ್ಲ ವಿಷಯದಲ್ಲಿ ಸಹಕಾರ ನೀಡಿದರೆ ಇದರ ನಿರ್ಮೂಲನೆ ಮಾಡಲು ಸಾಧ್ಯ. ತಪಾಸಣೆಗೆ ಬರುವ ಎಲ್ಲಾ ವೈದ್ಯರು, ನರ್ಸ್ ಹಾಗೂ ಆಶಾ ಕಾರ್ಯಕರ್ತರಿಗೆ ಸಹಕಾರ ನೀಡಲೇಬೇಕು ಎಂದು ಖಾದರ್ ಮನವಿ ಮಾಡಿದ್ದಾರೆ.

ಪೂರ್ವ ಸಿದ್ದತೆ ಇಲ್ಲದೆ ಕೊರೊನಾ ಲಾಕ್‌ಡೌನ್: ಮೋದಿ ಸರ್ಕಾರಕ್ಕೆ ಸೋನಿಯಾ ಚಾಟಿ

ಬೆಂಗಳೂರಿನ ಸಾದೀಕ್ ನಗರದಲ್ಲಿ ಬುಧವಾರ ಆಶಾ ಕಾರ್ಯಕರ್ತೆಯರ ಮೇಲೆ ಹಲ್ಲೆ ನಡೆದಿದೆ. ಕೋವಿಡ್‌ ಮಾಹಿತಿ ಸಂಗ್ರಹ ಮಾಡಲು ಹೋಗಿದ್ದ ಆಶಾ ಕಾರ್ಯಕರ್ತೆಯರು ಎನ್‌ಆರ್‌ಸಿ ಮಾಹಿತಿ ಸಂಗ್ರಹ ಮಾಡಲು ಬಂದಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿ ಹಲ್ಲೆ ನಡೆಸಲಾಗಿದೆ ಎಂದು ಆರೋಪಿಸಲಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ