ಆ್ಯಪ್ನಗರ

ಮಂಗಳೂರಿನ ಹೃದಯಭಾಗದಲ್ಲೇ ಸೋಂಕು: ಬೋಳೂರು ಸೀಲ್‌ಡೌನ್‌

ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಮಾಹಾಮಾರಿ ಮಂಗಳೂರು ಹೃದಯಭಾಗಕ್ಕೂ ತಟ್ಟಿದ್ದು, ಬೋಳೂರಿನ 58ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬೋಳೂರು ವ್ಯಾಪ್ತಿಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಬಿಗು ಬಂದೋಬಸ್ತ್‌ ಮಾಡಲಾಗಿದೆ.

Vijaya Karnataka Web 1 May 2020, 10:39 am
ಮಂಗಳೂರು: ಜಗತ್ತನ್ನೇ ತಲ್ಲಣಗೊಳಿಸಿದ ಕೊರೊನಾ ಮಾಹಾಮಾರಿ ಮಂಗಳೂರು ಹೃದಯಭಾಗಕ್ಕೂ ತಟ್ಟಿದ್ದು, ಬೋಳೂರಿನ 58ವರ್ಷದ ಮಹಿಳೆಗೆ ಕೊರೊನಾ ಸೋಂಕು ದೃಢಪಟ್ಟಿದೆ. ಈ ಹಿನ್ನೆಲೆಯಲ್ಲಿ ಬೋಳೂರು ವ್ಯಾಪ್ತಿಯನ್ನು ಸೀಲ್‌ಡೌನ್‌ ಮಾಡಲಾಗಿದ್ದು, ಬಿಗು ಬಂದೋಬಸ್ತ್‌ ಮಾಡಲಾಗಿದೆ.
Vijaya Karnataka Web lockdown


ಬೋಳೂರು ಪ್ರದೇಶವನ್ನು ಸಂಪೂರ್ಣ ಸೀಲ್‌ಡೌನ್‌ ಮಾಡುವುದರ ಜತೆಗೆ 5 ಕಿ.ಮೀ. ವ್ಯಾಪ್ತಿಯ ಬಫರ್‌ಝೋನ್‌ ಎಂದು ಘೋಷಣೆ ಮಾಡಲಾಗಿದೆ.

ಸೀಲ್‌ಡೌನ್‌ ಪ್ರದೇಶ: ಪೂರ್ವದಲ್ಲಿ ಜೇಮ್ಸ್‌ ಡಿಸೋಜ ಅವರ ಮನೆ, ಪಶ್ಚಿಮದಲ್ಲಿ ಹಿಂದೂ ರುದ್ರಭೂಮಿ ಬೋಳಾರ, ಉತ್ತರದಲ್ಲಿ ಹೊಟೇಲ್‌ ಬಿ.ಜೆ. ಮತ್ತು ಹೊಟೇಲ್‌ ಶ್ರೀ ವಿನಾಯಕ ಸುಲ್ತಾನ ಬತ್ತೇರಿ, ದಕ್ಷಿಣದಲ್ಲಿ ಹಿಂದೂ ರುದ್ರಭೂಮಿ ಬೋಳೂರು ಪ್ರಧಾನ ರಸ್ತೆ, ಸುಲ್ತಾನ್‌ ಬತ್ತೇರಿವರೆಗೆ ಕಂಟೈನ್ಮೆಂಟ್‌ ಝೋನ್‌ ಎಂದು ಪರಿಗಣಿಸಲಾಗಿದೆ.

ಕೊರೊನಾಗಿಂತ ಹಲವು ಪಟ್ಟು ಹೆಚ್ಚು ಬಲಿ ಪಡೆಯಲಿದೆ ಸುದೀರ್ಘ ಲಾಕ್‌ಡೌನ್‌! ನಾರಾಯಣಮೂರ್ತಿ ಕಳವಳ

ಕಂಟೈನ್ಮೆಂಟ್‌ ವ್ಯಾಪ್ತಿಯನ್ನು ಬ್ಯಾರಿಕೇಡ್‌ನಿಂದ ಸಂಪೂರ್ಣ ಸೀಲ್‌ಡೌನ್‌ ಮಾಡಲಾಗಿದೆ. ಈ ಪ್ರದೇಶದ ಜನರಿಗೆ ಹೊರಗೆ ಹೋಗಲು ಹಾಗೂ ಹೊರಗಿನವರಿಗೆ ಈ ವ್ಯಾಪ್ತಿಗೆ ಬರಲು ಅವಕಾಶವನ್ನು ನಿರಾಕರಿಸಲಾಗಿದೆ.

ಕಂಟೈನ್ಮೆಂಟ್‌ ವ್ಯಾಪ್ತಿಯಲ್ಲಿ135 ಮನೆಗಳು, 12 ಅಂಗಡಿ, ಕಚೇರಿಗಳು ಬರುತ್ತಿದ್ದು, ಸುಮಾರು 640 ಮಂದಿ ವಾಸಿಸುತ್ತಿದ್ದಾರೆ.

ಪ್ರಥಮ ಪಿಯುಸಿ ಫಲಿತಾಂಶ ಮೇ 5 ರಂದು ಪ್ರಕಟ

ಔಷಧ ಸಿಂಪರಣೆ: ಬೋಳೂರು ವ್ಯಾಪ್ತಿಯಲ್ಲಿಗುರುವಾರ ಸಂಜೆ ಸೋಂಕು ನಿವಾರಣಾ ಸೊಲ್ಯುಷನ್‌ ಹೈಪೊ ಕ್ಲೋರೈಡ್‌ ವಿತ್‌ ಫಿನಾಯಿಲ್‌ ಮಿಶ್ರಣವನ್ನು ಸಿಂಪಡಿಸಲಾಗಿದೆ. ಅಗ್ನಿಶಾಮಕ ದಳದ ನೆರವಿನೊಂದಿಗೆ ಪಾಲಿಕೆ ಆರೋಗ್ಯ ವಿಭಾಗ ಸಿಂಪರಣೆ ಕಾರ್ಯ ನಡೆಸಿದೆ. ಸೋಮವಾರ ಕೂಡ ಸಿಂಪರಣೆ ನಡೆಸಿತ್ತು. ಈ ಪ್ರದೇಶದ ಉಸ್ತುವಾರಿಯನ್ನು ಮಹಾನಗರ ಪಾಲಿಕೆಯ ಕಾರ್ಯನಿರ್ವಾಹಕ ಎಂಜಿನಿಯರ್‌ ಲಿಂಗೇಗೌಡ ನಿಭಾಯಿಸುತ್ತಿದ್ದಾರೆ.

ಕೊರೊನಾ ವೈರಸ್‌ ಚೀನಾದ್ದೇ.. ನಮ್ಮತ್ರ ಸಾಕ್ಷಿ ಇದೆ: ಡೊನಾಲ್ಡ್‌ ಟ್ರಂಪ್‌

5 ಕಿಮೀ ವ್ಯಾಪ್ತಿ ಬಫರ್‌ಝೋನ್‌
ಬೋಳೂರಿನಿಂದ 5 ಕಿಮೀ. ವ್ಯಾಪ್ತಿಯಲ್ಲಿ ಬಫರ್‌ಝೋನ್‌ ಗಡಿ ಗುರುತಿಸಲಾಗಿದೆ. ಪೂರ್ವದಲ್ಲಿ ಪದವಿನಂಗಡಿ, ಪಶ್ಚಿಮದಲ್ಲಿ ಅರಬೀ ಸಮುದ್ರ, ಉತ್ತರದಲ್ಲಿ ಎಂಸಿಎಫ್‌ ರಾಷ್ಟ್ರೀಯ ಹೆದ್ದಾರಿ, ದಕ್ಷಿಣದಲ್ಲಿ ಬೋಳಾರ ನೇತ್ರಾವತಿ ನದಿಯವರೆಗೆ ಬಫರ್‌ ಝೋನ್‌ ಎಂದು ಘೋಷಣೆ ಮಾಡಲಾಗಿದೆ.

ಈ ವ್ಯಾಪ್ತಿಯಲ್ಲಿ 16530 ಮನೆಗಳಿದ್ದು, 1275 ಅಂಗಡಿ, ಕಚೇರಿ, 79800 ಜನಸಂಖ್ಯೆಯಿದೆ. ಈ ಪ್ರದೇಶದಲ್ಲಿ ಕೋವಿಡ್‌ - 19 ಫ್ಲೈಯಿಂಗ್‌ ಸ್ಕ್ವಾಡ್‌ ಹಾಗೂ ಜಿಲ್ಲಾಆರೋಗ್ಯ ಇಲಾಖೆ ನಿಗಾ ವಹಿಸಿದೆ. ಆಶಾ ಕಾರ್ಯಕರ್ತೆಯರು ಮನೆಮನೆಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಲಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ