ಆ್ಯಪ್ನಗರ

ಸುಳ್ಯ: ಕೊರೊನಾ ದೃಢಪಟ್ಟ ವ್ಯಕ್ತಿಯ ಸಂಪರ್ಕದಲ್ಲಿದ್ದ 34 ಮಂದಿ ಹೋಂಕ್ವಾರಂಟೈನ್‌ಗೆ

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಕು ಧೃಡವಾಗುತ್ತಿದ್ದಂತೆಯೇ ಆತನ ಸಂಪರ್ಕದಲ್ಲಿದ್ದ 34 ಮಂದಿಯನ್ನು ಹೋಂ ಕ್ವಾರಂಟೈನ್‌ಗೆ ಒಳಪಡಿಸಲಾಗಿದೆ.

Vijaya Karnataka Web 2 Apr 2020, 8:57 am
ಸುಳ್ಯ: ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನ ಸರಕಾರಿ ಆಸ್ಪತ್ರೆಯಲ್ಲಿ ಹೋಂಕ್ವಾರಂಟೈನ್‌ ನಲ್ಲಿದ್ದ ಅಜ್ಜಾವರದ ವ್ಯಕ್ತಿಯಲ್ಲಿ ಕೊರೊನಾ ವೈರಸ್ ಸೋಕು ಧೃಡ ವಾಗುತ್ತಿದ್ದಂತೆ ಆತನ ನೇರ ಸಂಪರ್ಕದಲ್ಲಿ12 ಹಾಗೂ ಇತರ 22 ಒಟ್ಟು 34 ಮಂದಿಯನ್ನು ಹೋಂಕ್ವಾರಂಟೈನ್‌ಗೆ ಕಳುಹಿಸಲು ಸಿದ್ಧತೆ ನಡೆದಿದ್ದು, ಇದೇ ವೇಳೆ ಕ್ವಾರಂಟೈನ್‌ ಇಡುವ ಸ್ಥಳದ ಊರವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.
Vijaya Karnataka Web Coronavirus


ಸೋಂಕಿತ ವ್ಯಕ್ತಿಯ ನೇರ ಸಂಪರ್ಕದಲ್ಲಿದ್ದ ಅವರ ಮನೆಯವರು 12 ಮಂದಿಯನ್ನು ತೀವ್ರ ನಿಗಾ ಇಡುವ ನಿಟ್ಟಿನಲ್ಲಿಆಸ್ಪತ್ರೆ ಗೆ ಶಿಫ್ಟ್‌ ಮಾಡಿಲಾಗಿದೆ. ಉಳಿದಂತೆ ಸೋಂಕಿತ ವ್ಯಕ್ತಿಯ ಮನೆಯವರ ಸಂಪರ್ಕದಲ್ಲಿದ್ದ 22 ಮಂದಿಯನ್ನು ಗುರುತಿಸಲಾಗಿದ್ದು, ಅವರಲ್ಲಿ8 ಮಂದಿಯನ್ನು ಉಳಿದ 14 ಮಂದಿಯನ್ನು ಅವರವರ ಮನೆಯಲ್ಲೇ ಹೋಂಕ್ವಾರಂಟೈನ್‌ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

ಇನ್ನು ಸೂಕ್ತ ವ್ಯವಸ್ಥೆ ಮಾಡದ ಅಧಿಕಾರಿಗಳು: ಕಾಂತಮಂಗಲ ಮತ್ತು ಕೆರೆಮೂಲೆ ಹಾಸ್ಟೇಲ್‌ ಗಳಲ್ಲಿ ಕ್ವಾರಂಟೈನ್‌ನಲ್ಲಿಟ್ಟು ನಿಗಾ ವಹಿಸಲು ಆರೋಗ್ಯ ಇಲಾಖೆ ಮತ್ತು ತಹಸೀಲ್ದಾರ್‌, ಸಹಾಯಕ ನೇತೃತ್ವದಲ್ಲಿ ಕಾರ್ಯಯೋಜನೆ ನಡೆದರೂ ಅದು ಯಶಸ್ವಿಯಾಗದೆ, ಸೋಂಕಿತ ವ್ಯಕ್ತಿಯ ಮನೆಯವರ ಸಂಪರ್ಕದಲ್ಲಿದ್ದ 22 ಮಂದಿಯನ್ನು ಗುರುತಿಸಲಾಗಿದ್ದು, ಅವರಲ್ಲಿ8 ಮಂದಿ ಹಾಗೂ ಉಳಿದ 14 ಮಂದಿಯನ್ನು ಅವರವರ ಮನೆಯಲ್ಲೇ ಇದ್ದಾರೆ. ಸುಮಾರು 100ಮೀಟರ್‌ ಅಂತರದಲ್ಲಿ ಜನವಸತಿ ಪ್ರದೇಶಗಳು ಇಲ್ಲದ ಪ್ರದೇಶಗಳಿಗೆ ಸ್ಥಳಾಂತರಿಸದೇ ಇರುವುದು ಜನಪ್ರತಿನಿಧಿಗಳ ಮತ್ತು ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ