ಆ್ಯಪ್ನಗರ

ಕಾರ್ಮಿಕರ ಸ್ಥಳಾಂತರಕ್ಕೆ ಅವಕಾಶ: ದಕ್ಷಿಣ ಕನ್ನಡದಿಂದ 2 ಸಾವಿರ ಕಾರ್ಮಿಕರು ಮರಳಿ ಊರಿಗೆ

ಗುರುವಾರವಷ್ಟೇ ಲಾಕ್‌ಡೌನ್‌ನಲ್ಲಿ ಹಲವು ಸಡಿಲಿಕೆಗಳನ್ನು ತಂದಿದ್ದ ರಾಜ್ಯ ಸರಕಾರ ಈಗ ರಾಜ್ಯದಲ್ಲಿ ಕಾರ್ಮಿಕರ ಸ್ಥಳಾಂತರಕ್ಕೂ ಅನುಮತಿ ನೀಡಿದೆ. ಈ ಹಿನ್ನೆಲೆ ದಕ್ಷಿಣ ಕನ್ನಡ ಜಿಲ್ಲೆಯಿಂದ ಉತ್ತರ ಕರ್ನಾಟಕದ ಸುಮಾರು 2 ಸಾವಿರ ಕಾರ್ಮಿಕರು ಮರಳಿ ಊರಿಗೆ ಹೋಗಲಿದ್ದಾರೆ.

Vijaya Karnataka Web 24 Apr 2020, 10:45 pm
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಿಂದ ಸುಮಾರು 2 ಸಾವಿರ ಉತ್ತರ ಕರ್ನಾಟಕದ ಕಾರ್ಮಿಕರು ಮರಳಿ ಊರಿಗೆ ತೆರಳಲಿದ್ದು, ಶುಕ್ರವಾರ ಮೊದಲ ಹಂತದ ಬಸ್‌ಗಳು ಪುತ್ತೂರು ಮತ್ತು ಮಂಗಳೂರು ವಿಭಾಗದಿಂದ ಹೊರಟಿವೆ.
Vijaya Karnataka Web bus


ಕಾರ್ಮಿಕರನ್ನು ಕೊಂಡೊಯ್ಯಲು ಮಂಗಳೂರು ವಿಭಾಗದಿಂದ 50 ಮತ್ತು ಪುತ್ತೂರು ವಿಭಾಗದಿಂದ 50 ಕೆಎಸ್ಆರ್‌ಟಿಸಿ ಬಸ್ ಗಳನ್ನು ವ್ಯವಸ್ಥೆ ಮಾಡಲಾಗಿದ್ದು, ಒಂದೊಂದು ಬಸ್‌ನಲ್ಲಿ 20 ಪ್ರಯಾಣಿಕರು ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರಯಾಣ ಬೆಳೆಸಲಿದ್ದಾರೆ. ಶುಕ್ರವಾರ ಮಂಗಳೂರು ವಿಭಾಗದಿಂದ 27 ಬಸ್ ಹೊರಟಿದ್ದು, ಇದರಲ್ಲಿ ಮಂಗಳೂರು ಮತ್ತು ಮೂಡುಬಿದಿರೆಯ ಕಾರ್ಮಿಕರನ್ನು ಕರೆದೊಯ್ಯಲಾಗಿದೆ. ಇನ್ನು, ಪುತ್ತೂರು ವಿಭಾಗದಿಂದ 40 ಬಸ್‌ಗಳು ಹೊರಟಿದ್ದು, ಧರ್ಮಸ್ಥಳ, ಬಂಟ್ವಾಳ, ಪುತ್ತೂರು, ಸುಳ್ಯ ವ್ಯಾಪ್ತಿಯ ಕಾರ್ಮಿಕರನ್ನು ಕರೆದೊಯ್ಯಲಾಗಿದೆ.

ಚಾಲಕರು ಮತ್ತು ನಿರ್ವಾಹಕರಿಗೆ ಕೆಎಸ್‌ಆರ್‌ಟಿಸಿಯಿಂದ ಮಾಸ್ಕ್, ಗ್ಲೌಸ್ ನೀಡಿದರೆ, ಕಾರ್ಮಿಕರಿಗೆ ಕಾರ್ಮಿಕ ಇಲಾಖೆಯಿಂದ ಮಾಸ್ಕ್, ಗ್ಲೌಸ್ ಒದಗಿಸಲಾಗಿದೆ. ಲಾಕ್‌ಡೌನ್‌ ಹಿನ್ನಲೆಯಲ್ಲಿ ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಿಕ್ಕಿಹಾಕಿಕೊಂಡಿರುವ ವಲಸೆ ಕಾರ್ಮಿಕರು ಹಾಗೂ ಕೂಲಿ ಕಾರ್ಮಿಕರು ಕೃಷಿ ಕೆಲಸಕ್ಕಾಗಿ ತಮ್ಮ ಗ್ರಾಮಗಳಿಗೆ ಹಿಂತಿರುಗಲು ಅಥವಾ ನಿರ್ಮಾಣ ಮತ್ತು ಇತರ ಕೆಲಸಗಳಿಗಾಗಿ ತಮ್ಮ ಸ್ವಂತ ಊರಿಗೆ ಹೋಗಲು ಬಯಸುತ್ತಿದ್ದಾರೆ.

ರಾಜ್ಯದಲ್ಲಿ ಕಾರ್ಮಿಕರ ಸ್ಥಳಾಂತರಕ್ಕೆ ಅವಕಾಶ, ಸಾಮಾಜಿಕ ಅಂತರ ಪಾಲನೆ ಕಡ್ಡಾಯ

ಭಾರತ ಸರಕಾರದ ಗೃಹ ಮಂತ್ರಾಲಯದ ಆದೇಶದನ್ವಯ ವಲಸೆ ಮತ್ತು ಕೂಲಿ ಕಾರ್ಮಿಕರನ್ನು ರಾಜ್ಯದೊಳಗೆ ಸ್ಥಳಾಂತರಿಸಲು ರಾಜ್ಯ ಸರಕಾರ ಏಪ್ರಿಲ್‌ 24ರಂದು ಆದೇಶ ಮಾಡಿದೆ. ಈ ಹಿನ್ನೆಲೆಯಲ್ಲಿ ಕಾರ್ಮಿಕರು ಸ್ವಂತ ಊರಿಗೆ ತೆರಳಿದ್ದಾರೆ. ಕೆಎಸ್ಆರ್‌ಟಿಸಿ ಬಸ್‌ಗಳನ್ನು ಉಪಯೋಗಿಸಿ ಸಾಮಾಜಿಕ ಅಂತರ ಕಾಯ್ದುಕೊಂಡು ಪ್ರತಿಯೊಂದು ಬಸ್ ಗಳಲ್ಲಿ ಶೇ.40 ರಂತೆ ಭರ್ತಿ ಮಾಡಿ ಕಳುಹಿಸಲಾಗಿದೆ. ಪ್ರತಿಯೊಬ್ಬ ಕಾರ್ಮಿಕರಿಗೂ ಮಾಸ್ಕ್, ಗ್ಲೌಸ್‌ಗಳನ್ನು ನೀಡಲಾಗಿದೆ ಎಂದು ಕಾರ್ಮಿಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

ದೇಶದಲ್ಲಿ 23,452 ಕ್ಕೇರಿದ ಕೊರೊನಾ ವೈರಸ್‌ ಪ್ರಕರಣಗಳು, ಸಂಪೂರ್ಣ ಅಂಕಿಅಂಶ ಇಲ್ಲಿದೆ ನೋಡಿ..

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ