ಆ್ಯಪ್ನಗರ

ದ.ಕ. ಲೋಕಸಭೆ ಕ್ಷೇತ್ರದ ಬಿಜೆಪಿ ಟಿಕೆಟ್‌ ಖಾಲಿಯಿಲ್ಲ: ಮಠಂದೂರು

ನಮ್ಮಲ್ಲಿ ಅಭ್ಯರ್ಥಿತನದ ಗೊಂದಲಗಳಿಲ್ಲ. ಹುದ್ದೆ ಖಾಲಿ ಬಿದ್ದಿಲ್ಲ. ಚುನಾವಣೆ ಬಂದಾಗ ಹಲವು ಅಭ್ಯರ್ಥಿಗಳಿರುತ್ತಾರೆ. ರಾಜಕೀಯ ವಿರೋಧಿಗಳಿಗೆ ಯಾವುದೂ ಸಿಗದೇ ಇದ್ದಾಗ ಅಪಪ್ರಚಾರ ಮಾಡುತ್ತಾರೆ. ಇದೇನು ಹೊಸತಲ್ಲ. ನಮ್ಮದು ಪಾರದರ್ಶಕ ವ್ಯವಸ್ಥೆಇರುವ ಪಕ್ಷ . ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದರು.

Vijaya Karnataka 26 Feb 2019, 3:11 pm
ಪುತ್ತೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಲ್ಲಿ ಬಿಜೆಪಿ ಟಿಕೆಟ್‌ ಖಾಲಿ ಇಲ್ಲ ಎಂದು ಹೇಳುವ ಮೂಲಕ ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಮೂರನೇ ಬಾರಿಗೆ ಪಕ್ಷ ದ ಟಿಕೆಟ್‌ ಸಿಗಲಿದೆ ಎಂಬ ಸ್ಪಷ್ಟ ಸಂದೇಶವನ್ನು ಬಿಜೆಪಿ ಜಿಲ್ಲಾಧ್ಯಕ್ಷ ಸಂಜೀವ ಮಠಂದೂರು ನೀಡಿದ್ದಾರೆ.
Vijaya Karnataka Web Sanjeev


ಪತ್ರಿಕಾಗೋಷ್ಠಿಯಲ್ಲಿ ಸೋಮವಾರ ಮಾತನಾಡಿ, ಪಕ್ಷದ ಟಿಕೆಟ್‌ಗಾಗಿ ಆಕಾಂಕ್ಷಿಗಳಿರುವುದು ಸಹಜ. ಗೆಲ್ಲುವ ಕುದುರೆಗೆ ಎಲ್ಲರೂ ಬಾಜಿ ಕಟ್ಟುತ್ತಾರೆಯೇ ಹೊರತು ಸೋಲುವ ಕುದುರೆಗೆ ಕಟ್ಟುವುದಿಲ್ಲ. ಇಲ್ಲಿ ಬಿಜೆಪಿ ಗೆಲ್ಲುವ ಕುದುರೆ. ಹಾಗಾಗಿ ಸ್ಪರ್ಧಾಕಾಂಕ್ಷಿಗಳಿರುವುದು ಸಹಜ. ಕಳೆದ ವರ್ಷ ನಡೆದ ವಿಧಾನಸಭೆ ಚುನಾವಣೆ ಸಂದರ್ಭದಲ್ಲೂ ಪಕ್ಷ ದ ಟಿಕೆಟ್‌ಗಾಗಿ ಸಾಕಷ್ಟು ಆಕಾಂಕ್ಷಿಗಳಿದ್ದರು. ತಮಗೇ ಟಿಕೆಟ್‌ ಎಂದು ಹೇಳಿಕೊಂಡವರೂ ಇದ್ದರು. ಅದೆಲ್ಲ ಸಹಜ. ಆದರೆ ಈ ಬಾರಿ ಪರಿಸ್ಥಿತಿ ಅಷ್ಟೊಂದು ಸ್ಪರ್ಧಾತ್ಮಕವಾಗಿಲ್ಲ ಎಂದರು.

ಹಾಲಿ ಸಂಸದ ನಳಿನ್‌ ಕುಮಾರ್‌ ಕಟೀಲ್‌ ರಾಜ್ಯದಲ್ಲೇ ನಂಬರ್‌ ವನ್‌ ಸಂಸದರೆಂಬ ಹೆಸರು ಪಡೆದುಕೊಂಡಿದ್ದಾರೆ. ಇಡೀ ರಾಜ್ಯದಲ್ಲಿ ಬೂತ್‌ ಮಟ್ಟದಲ್ಲಿ ಅವರಷ್ಟು ಸಂಪರ್ಕ ಇಟ್ಟುಕೊಂಡಿರುವ ಸಂಸದರಿಲ್ಲ. ಹೀಗಿರುವಾಗ ನಮ್ಮಲ್ಲಿ ಅಭ್ಯರ್ಥಿತನದ ಗೊಂದಲಗಳಿಲ್ಲ. ಹುದ್ದೆ ಖಾಲಿ ಬಿದ್ದಿಲ್ಲ. ಚುನಾವಣೆ ಬಂದಾಗ ಹಲವು ಅಭ್ಯರ್ಥಿಗಳಿರುತ್ತಾರೆ. ರಾಜಕೀಯ ವಿರೋಧಿಗಳಿಗೆ ಯಾವುದೂ ಸಿಗದೇ ಇದ್ದಾಗ ಅಪಪ್ರಚಾರ ಮಾಡುತ್ತಾರೆ. ಇದೇನು ಹೊಸತಲ್ಲ. ನಮ್ಮದು ಪಾರದರ್ಶಕ ವ್ಯವಸ್ಥೆಇರುವ ಪಕ್ಷ . ಒಮ್ಮತದಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡುತ್ತಾರೆ ಎಂದರು.

ಪಕ್ಷ ಸಂಪೂರ್ಣ ಸನ್ನದ್ಧ:
ಲೋಕಸಭೆ ಚುನಾವಣೆಯನ್ನು ಎದುರಿಸಲು ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಸಂಪೂರ್ಣ ಸನ್ನದ್ಧವಾಗಿದೆ. ಮಂಗಳೂರು ಕ್ಷೇತ್ರ ವ್ಯಾಪ್ತಿಯ 8 ವಿಧಾನಸಭೆ ಕ್ಷೇತ್ರಗಳ ಪೈಕಿ ಏಳರಲ್ಲಿ ಬಿಜೆಪಿ ಶಾಸಕರಿದ್ದಾರೆ. ಕೋಟ ಶ್ರೀನಿವಾಸ ಪೂಜಾರಿ ವಿಧಾನ ಪರಿಷತ್‌ ಸದಸ್ಯರು. ಇದಲ್ಲದೆ ಜಿಪಂ, ತಾಪಂ, ನಗರಸಭೆ, ಪುರಸಭೆಗಳಲ್ಲಿ ಬಿಜೆಪಿ ಪ್ರಾಬಲ್ಯವಿದೆ. ಜಿಲ್ಲೆಯ 232 ಗ್ರಾಪಂಗಳ ಪೈಕಿ 232ರಲ್ಲಿ ಬಿಜೆಪಿ ಬೆಂಬಲಿತರಿಗೆ ಮೆಜಾರಿಟಿ ಇದೆ. ಇದೆಲ್ಲವೂ ಪಕ್ಷ ಕ್ಕೆ ವರದಾನ ಎಂದರು.

ಜಿಲ್ಲೆಯ 1800 ಬೂತ್‌ ಸಮಿತಿಗಳು ಕೂಡ ಚುನಾವಣೆಗೆ ಸಿದ್ಧವಾಗಿವೆ. ಫಲಾನುಭವಿಗಳನ್ನು ಗಮನದಲ್ಲಿಟ್ಟುಕೊಂಡು ಕಮಲಜ್ಯೋತಿ ಕಾರ್ಯಕ್ರಮ ಮಾಡಲಾಗುವುದು. ಇದರ ಜತೆಗೆ ಬೈಕ್‌ ರಾಲಿ, ವಾಹನ ರಾಲಿ, ಸಂಸದರ ಸಾಧನೆ ಬಿಂಬಿಸುವ ಕಾರ್ಯಕ್ರಮ ನಡೆಯಲಿವೆ. 55 ಮಹಾ ಶಕ್ತಿ ಕೇಂದ್ರಗಳು ಮತ್ತು 300 ಶಕ್ತಿಕೇಂದ್ರಗಳಲ್ಲಿ ಕಾರ್ಯಾಗಾರ ನಡೆಸಲಾಗುವುದು. ರಾಜ್ಯ, ಕೇಂದ್ರ ಮಟ್ಟದ ನಾಯಕರು ಭೇಟಿ ನೀಡಿ ಕಾರ್ಯಕ್ರಮ ನಡೆಸಲಿದ್ದಾರೆ ಎಂದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ