Please enable javascript.ಧರ್ಮಸ್ಥಳ: 19ರಂದು ಸುಜ್ಞಾನ ನಿಧಿ ವಿತರಣೆ - dharmastala - Vijay Karnataka

ಧರ್ಮಸ್ಥಳ: 19ರಂದು ಸುಜ್ಞಾನ ನಿಧಿ ವಿತರಣೆ

Vijaya Karnataka 17 Sep 2017, 3:19 pm
Subscribe

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಜ್ಞಾನ ನಿಧಿ ಶಿಷ್ಯವೇತನವನ್ನು ಬೆಂಗಳೂರು ಜವಾಹರಲಾಲ್‌ ನೆಹರು ಅತ್ಯಾಧುನಿಕ ವಿಜ್ಞಾನ ಸಂಶೋಧನೆ ಕೇಂದ್ರದ ಅಧ್ಯಕ್ಷ ಪ್ರೊ.ಸಿ.ಎನ್‌.ಆರ್‌. ರಾವ್‌ ಸೆ. 19ರಂದು ವಿತರಿಸಲಿದ್ದಾರೆ ಎಂದು ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ತಿಳಿಸಿದರು.

news/mangaluru/dharmastala
ಧರ್ಮಸ್ಥಳ: 19ರಂದು ಸುಜ್ಞಾನ ನಿಧಿ ವಿತರಣೆ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸುಜ್ಞಾನ ನಿಧಿ ಶಿಷ್ಯವೇತನವನ್ನು ಬೆಂಗಳೂರು ಜವಾಹರಲಾಲ್‌ ನೆಹರು ಅತ್ಯಾಧುನಿಕ ವಿಜ್ಞಾನ ಸಂಶೋಧನೆ ಕೇಂದ್ರದ ಅಧ್ಯಕ್ಷ ಪ್ರೊ.ಸಿ.ಎನ್‌.ಆರ್‌. ರಾವ್‌ ಸೆ. 19ರಂದು ವಿತರಿಸಲಿದ್ದಾರೆ ಎಂದು ಯೋಜನೆಯ ಸಮುದಾಯ ಅಭಿವೃದ್ಧಿ ವಿಭಾಗ ನಿರ್ದೇಶಕ ಬಿ. ಜಯರಾಮ ನೆಲ್ಲಿತ್ತಾಯ ತಿಳಿಸಿದರು.

ಶನಿವಾರ ಬೆಳ್ತಂಗಡಿ ವಾರ್ತಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಸುಜ್ಞಾನ ನಿಧಿ ಬಗ್ಗೆ ವಿವರ ನೀಡಿದರು. ಯೋಜನೆ ವತಿಯಿಂದ ಕರ್ನಾಟಕದ ಸ್ವ-ಸಹಾಯ ಸಂಘ ಸದಸ್ಯರ ಮಕ್ಕಳಿಗೆ ನೀಡಲಾಗುವ ಶಿಷ್ಯವೇತನ ವಿತರಣೆ ಬೆಳಗ್ಗೆ 10.30ಕ್ಕೆ ಧರ್ಮಸ್ಥಳದ ಮಹೋತ್ಸವ ಸಭಾಭವನದಲ್ಲಿ ನಡೆಯಲಿದ್ದು, ಧರ್ಮಾಧಿಕಾರಿ ಡಾ.ಡಿ.ವೀರೇಂದ್ರ ಹೆಗ್ಗಡೆಯವರು ಅಧ್ಯಕ್ಷ ತೆ ವಹಿಸಲಿದ್ದಾರೆ. ಹೇಮಾವತಿ ವಿ. ಹೆಗ್ಗಡೆ, ಗ್ರಾಮಾಭಿವೃದ್ಧಿ ಯೋಜನೆ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಎಲ್‌. ಎಚ್‌. ಮಂಜುನಾಥ್‌ ಮುಖ್ಯ ಅತಿಥಿಗಳಾಗಿರುವರು ಎಂದರು.

2007ರಲ್ಲಿ ಯೋಜನೆಯ ಬೆಳ್ಳಿ ಹಬ್ಬದ ಸವಿನೆನಪಿಗೆ ಸ್ವ-ಸಹಾಯ ಸಂಘ ಸದಸ್ಯರ ಮಕ್ಕಳಿಗೆ ತಾಂತ್ರಿಕ ಶಿಕ್ಷ ಣ ಪಡೆಯಲು ಅನುಕೂಲವಾಗುವಂತೆ ಮಾಸಿಕ ಶಿಷ್ಯವೇತನ ನೀಡುವ ಕಾರ್ಯಕ್ರಮ ಸುಜ್ಞಾನ ನಿಧಿ ಆರಂಭಿಸಲಾಯಿತು. ಒಂದು ದಶಕ ಪೂರೈಸಿರುವ ಈ ಯೋಜನೆಯಲ್ಲಿ 25000 ಮಕ್ಕಳಿಗೆ 30 ಕೋಟಿ ರೂ. ವಿತರಿಸಲಾಗಿದೆ. ಮಾಸಿಕ 400 ರೂ. ಹಾಗೂ 1000 ರೂ. ವರೆಗೆ ಶಿಷ್ಯವೇತನ ವಿತರಿಸಲಾಗುತ್ತದೆ ಎಂದರು.

ಆರ್ಥಿಕವಾಗಿ ತೀರಾ ಹಿಂದುಳಿದ ಕೂಲಿ ಕಾರ್ಮಿಕರು, ಸಣ್ಣ, ಅತಿ ಸಣ್ಣ ರೈತರು, ಪರಿಶಿಷ್ಟ ಜಾತಿ, ಪಂಗಡದ ಮಕ್ಕಳು ತಾಂತ್ರಿಕ ಹಾಗೂ ವೃತ್ತಿಪರ ಶಿಕ್ಷ ಣ ಪಡೆಯಬೇಕೆಂಬ ಉದ್ದೇಶದಿಂದ ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆಯವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಯೋಜನೆ ಪಾಲುದಾರರ ಮಕ್ಕಳಿಗೆ ಸುಜ್ಞಾನ ನಿಧಿ ಶಿಷ್ಯವೇತನ ಅನುಷ್ಠಾನಗೊಳಿಸಿ, ಯುವ ವಿದ್ಯಾರ್ಥಿಗಳಿಗೆ ವಿಶೇಷ ಉತ್ತೇಜನ ನೀಡುತ್ತಿದ್ದಾರೆ. ಪ್ರಸ್ತುತ ವರ್ಷ ಆಯ್ಕೆಯಾದ 4209 ಹಾಗೂ ನವೀಕರಣ 5821 ವಿದ್ಯಾರ್ಥಿಗಳ ಶಿಷ್ಯವೇತನಕ್ಕಾಗಿ 6.50 ಕೋಟಿ ರೂ. ಮೀಸಲಿಡಲಾಗಿದೆ.

ಯೋಜನೆಯ ಸ್ವ-ಸಹಾಯ ಸಂಘಗಳ ಹಾಗೂ ಪ್ರಗತಿಬಂಧು ಕುಟುಂಬಗಳ ಮಕ್ಕಳು ಆರ್ಥಿಕ ಸಮಸ್ಯೆಯಿಂದ ವಿದ್ಯಾಭ್ಯಾಸ ಮೊಟಕುಗೊಳಿಸಬಾರದು. ನಿಟ್ಟಿನಲ್ಲಿ ಕಳೆದ 10 ವರ್ಷಗಳಿಂದ ನೀಡಲಾಗುತ್ತಿದೆ. ಗ್ರಾಮಾಭಿವೃದ್ಧಿ ಯೋಜನೆಯ ಬೆಳ್ಳಿಹಬ್ಬದ ಸಂದರ್ಭ ಸುಜ್ಞಾನ ನಿಧಿಯನ್ನು ರಾಜ್ಯದ ಎಲ್ಲ ಜಿಲ್ಲೆಗಳಲ್ಲಿ ಜಾರಿಯಲ್ಲಿದೆ. ರಾಜ್ಯಾದ್ಯಂತ 2387 ಕಾಲೇಜಿನಲ್ಲಿ 5820 ವಿದ್ಯಾರ್ಥಿಗಳು ಸುಜ್ಞಾನ ನಿಧಿ ಪಡೆದು ಶಿಕ್ಷ ಣ ಪಡೆಯುತ್ತಿದ್ದಾರೆ. ಈ ವಿದ್ಯಾರ್ಥಿಗಳ ಬಗ್ಗೆ ಆಯಾಯ ಕಾಲೇಜುಗಳ ಪ್ರಿನ್ಸಿಪಾಲರು ವರದಿ ನೀಡುತ್ತಾರೆ.

2017-18ರಲ್ಲಿ ನಾನಾ ಜಿಲ್ಲೆಗಳಿಂದ ಶಿಷ್ಯವೇತನಕ್ಕಾಗಿ 8153 ಬೇಡಿಕೆ ಬಂದಿದ್ದು, ಆಯ್ಕೆ ಸಮಿತಿ ರಚಿಸಿ ಪರಿಶೀಲನೆ ನಡೆಸಲಾಗಿದೆ. ಸಮಿತಿ ಮುಖ್ಯವಾಗಿ ವಿದ್ಯಾರ್ಥಿಗಳ ಅರ್ಹತಾ ಪರೀಕ್ಷೆಯಲ್ಲಿ ಪಡೆದ ಅಂಕ, ಕುಟುಂಬದ ಆದಾಯ ಮತ್ತು ವೃತ್ತಿಪರ ಶಿಕ್ಷ ಣವೇ ಮುಂತಾದ ಮಾನದಂಡದಲ್ಲಿ ಆಯ್ಕೆ ಮಾಡಲಾಗಿದೆ. ಈಗಾಗಲೇ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಆಯ್ಕೆ ಪತ್ರ ಹಾಗೂ ನವೀಕರಣಗೊಳ್ಳಲಿರುವ ವಿದ್ಯಾರ್ಥಿಗಳಿಗೆ ನವೀಕರಣ ಪತ್ರ ಆಯಾ ಶಿಕ್ಷ ಣ ಸಂಸ್ಥೆಗಳಿಗೆ ಕಳುಹಿಸಿಕೊಡಲಾಗಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ಗ್ರಾಮಾಭಿವೃದ್ಧಿ ಯೋಜನೆ ನಿರ್ದೇಶಕ ಚಂದ್ರಶೇಖರ್‌, ಬೆಳ್ತಂಗಡಿ ತಾ. ಯೋಜನಾಧಿಕಾರಿ ಜಯಕರ ಶೆಟ್ಟಿ, ಸಮುದಾಯ ವಿಭಾಗ ಪ್ರಬಂಧಕ ಸೋಮಪ್ಪ ಪೂಜಾರಿ, ಎಂಜಿನಿಯರ್‌ ಪುಷ್ಪರಾಜ್‌, ಯೋಜನೆ ಮೇಲ್ವಿಚಾರಕ ರಾಜೇಶ್‌ ಉಪಸ್ಥಿತರಿದ್ದರು.

ಕಾಮೆಂಟ್‌ ಮಾಡಿ

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ