ಆ್ಯಪ್ನಗರ

ಮುಂಬಯಿಯಿಂದ ಮಂಗಳೂರಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಪ್ರಮುಖ ಆರೋಪಿ ಬಂಧನ

ಮುಂಬಯಿಯಿಂದ ಮಂಗಳೂರಿಗೆ ಡ್ರಗ್ಸ್‌ ಪೂರೈಸುತ್ತಿದ್ದ ಪ್ರಮುಖ ಆರೋಪಿ ಬಂಧನವಾಗಿದೆ. ಮೂಲತಃ ಮಂಗಳೂರು ಬೆಂಗರೆ ನಿವಾಸಿ ಶಾನ್‌ ನವಾಜ್‌ ಬಂಧಿತ ಆರೋಪಿ. ಈತನ ಬಂಧನ ಮೂಲಕ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

Vijaya Karnataka Web 29 Sep 2020, 7:19 am
Vijaya Karnataka Web arrest
ಸಾಂದರ್ಭಿಕ ಚಿತ್ರ
ಮಂಗಳೂರು: ಮಂಗಳೂರು ಸೇರಿದಂತೆ ರಾಜ್ಯದ ನಾನಾ ಕಡೆಗೆ ಮುಂಬಯಿಯಿಂದ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ ಪ್ರಧಾನ ಆರೋಪಿಯನ್ನು ನಗರ ಅಪರಾಧ ಪತ್ತೆ ದಳದ ಪೊಲೀಸರು ಬಂಧಿಸಿದ್ದಾರೆ.

ಮೂಲತಃ ಮಂಗಳೂರು ಬೆಂಗರೆ ನಿವಾಸಿ ಶಾನ್‌ ನವಾಜ್‌(35) ಬಂಧಿತ ಆರೋಪಿ. ಈತನ ವಿರುದ್ಧ ಈ ಹಿಂದೆಯೇ ನಗರ ನಾರ್ಕೋಟಿಕ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶಾನ್‌ ನವಾಜ್‌ ಬಂಧನ ಮೂಲಕ ಡ್ರಗ್ಸ್‌ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 6ಕ್ಕೆ ಏರಿಕೆಯಾಗಿದೆ.

ಮಾದಕ ವಸ್ತು ಎಂಡಿಎಂಎ ಸೇವನೆ ಹಾಗೂ ಮಾರಾಟ ಆರೋಪದಲ್ಲಿ ಡ್ಯಾನ್ಸರ್‌ ಕಿಶೋರ್‌ ಅಮನ್‌, ಅಕೀಲ್‌ ನೌಶೀಲ್‌, ಮಹಮ್ಮದ್‌ ಶಾಕೀರ್‌, ತರುಣ್‌ರಾಜ್‌, ಆಸ್ಕಾ ಎಂಬವರನ್ನು ಈ ಹಿಂದೆಯೇ ಬಂಧಿಸಲಾಗಿದ್ದು, ತರುಣ್‌ರಾಜ್‌ಗೆ ಜಾಮೀನು ಸಿಕ್ಕಿದೆ.

ಗಾಂಜಾ ಪೂರೈಕೆಯ ಕಿಂಗ್‌ ಪಿನ್‌
ಮುಂಬಯಿಯಿಂದ ಮಂಗಳೂರಿಗೆ ಗಾಂಜಾ ಪೂರೈಕೆ ಮಾಡುತ್ತಿದ್ದ ಕಿಂಗ್‌ ಪಿನ್‌ ಶಾನ್‌ ನವಾಜ್‌ ಆಗಿದ್ದಾನೆ. ಈತ ಶಾಕೀರ್‌ಗೆ ಡ್ರಗ್ಸ್‌ ಪೂರೈಕೆ ಮಾಡುತ್ತಿದ್ದ. ಶಾಕೀರ್‌ ನಂತರ ನೌಶೀಲ್‌, ಕಿಶೋರ್‌ಗೆ ಮಾರಾಟ ಮಾಡಿ ಅವರು ನಗರದಲ್ಲಿ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಮಾರಾಟ ಮಾಡುತ್ತಿದ್ದರು.

ಯಶಸ್ವಿ ಕಾರ್ಯಾಚರಣೆ ಸೆ.19ರಂದು ಕಿಶೋರ್‌ ಮತ್ತು ನೌಶೀಲ್‌ನನ್ನು ಬಂಧಿಸಿದ ಪೊಲೀಸರು ಸಮಗ್ರ ವಿಚಾರಣೆ ನಡೆಸಿ ಇಡೀ ಡ್ರಗ್ಸ್‌ ಜಾಲವನ್ನು ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಮಂಗಳೂರು ಪೊಲೀಸರ ಕಾರ್ಯಾಚರಣೆಗೆ ಶ್ಲಾಘನೆ ವ್ಯಕ್ತವಾಗಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ