ಆ್ಯಪ್ನಗರ

ಸುಳ್ಯ: ಕುಡಿದ ಮತ್ತಿನಲ್ಲಿ ನದಿಗೆ ಹಾರಿದ ರಬ್ಬರ್‌ ಸಂಶೋಧನಾ ಕೇಂದ್ರದ ವಿಜ್ಞಾನಿ!

ಕಡಬ ಕೆಂಚಭಟ್ರೆ ಸಮೀಪ ಕಚೇರಿ ಹೊಂದಿರುವ ಭಾರತೀಯ ರಬ್ಬರ್‌ ಸಂಶೋಧನಾ ಕೇಂದ್ರದ ವಿಜ್ಞಾನಿ ತಮಿಳುನಾಡು ಮೂಲದ 39 ಹರೆಯದ ರವಿಚಂದ್ರನ್‌ ಬಿಯರ್‌ ಕುಡಿದು ಹೊಳೆಗೆ ಹಾರಿದವರು. ರಕ್ಷಣೆ ಬಳಿಕ ಕಡಬ ಸಮುದಾಯ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ. ಕೆಲ ಸಮಯಗಳ ಹಿಂದೆ ಕಡಬಕ್ಕೆ ಆಗಮಿಸಿದ ರವಿಚಂದ್ರ ಹಾಗೂ ಅವರ ಪತ್ನಿ ಇಬ್ಬರು ಮಕ್ಕಳೊಂದಿಗೆ ರಬ್ಬರ್‌ ಸಂಶೋಧನಾ ಕೇಂದ್ರದ ವಸತಿ ಗೃಹದಲ್ಲಿ ವಾಸವಾಗಿದ್ದರು.

Vijaya Karnataka Web 1 Oct 2020, 7:29 am
ಕಡಬ: ಕುಡಿದ ಮತ್ತಿನಲ್ಲಿ ಕಡಬದಲ್ಲಿರುವ ರಬ್ಬರ್‌ ಸಂಶೋಧನಾ ಕೇಂದ್ರದ ವಿಜ್ಞಾನಿಯೊಬ್ಬರು ಹೊಸಮಠ ಹೊಳೆಗೆ ಹಾರಿದ್ದು, ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ಅವರನ್ನು ಅಲ್ಲಿದ್ದ ಸಾರ್ವಜನಿಕರು, ಪೊಲೀಸರು ಮೇಲಕ್ಕೆತ್ತಿ ರಕ್ಷಣೆ ಮಾಡಿದ ಘಟನೆ ಬುಧವಾರ ಸಂಜೆ ನಡೆದಿದೆ.
Vijaya Karnataka Web man
Picture used for representational purpose only.

ಕಡಬ ಕೆಂಚಭಟ್ರೆ ಸಮೀಪ ಕಚೇರಿ ಹೊಂದಿರುವ ಭಾರತೀಯ ರಬ್ಬರ್‌ ಸಂಶೋಧನಾ ಕೇಂದ್ರದ ವಿಜ್ಞಾನಿ ತಮಿಳುನಾಡು ಮೂಲದ 39 ಹರೆಯದ ರವಿಚಂದ್ರನ್‌ ಬಿಯರ್‌ ಕುಡಿದು ಹೊಳೆಗೆ ಹಾರಿದವರು. ರಕ್ಷಣೆ ಬಳಿಕ ಕಡಬ ಸಮುದಾಯ ಆಸ್ಪತ್ರೆಗೆ ಅವರನ್ನು ದಾಖಲಿಸಿದ್ದಾರೆ. ಕೆಲ ಸಮಯಗಳ ಹಿಂದೆ ಕಡಬಕ್ಕೆ ಆಗಮಿಸಿದ ರವಿಚಂದ್ರ ಹಾಗೂ ಅವರ ಪತ್ನಿ ಇಬ್ಬರು ಮಕ್ಕಳೊಂದಿಗೆ ರಬ್ಬರ್‌ ಸಂಶೋಧನಾ ಕೇಂದ್ರದ ವಸತಿ ಗೃಹದಲ್ಲಿ ವಾಸವಾಗಿದ್ದರು.

ಹೊಳೆಗೆ ಹಾರಲು ಕಾರಣ ಏನು ಎಂಬುದು ತಿಳಿದು ಬಂದಿಲ್ಲ. ಕುಡಿತದ ಅಮಲಿನಿಂದಲೋ? ಅಥವಾ ಬೇರೆ ಯಾವುದಾದರು ವೈಯಕ್ತಿಕ ಕಾರಣದಿಂದಲೋ? ಹೊಳಗೆ ಹಾರಿದ್ದಾರೋ ಎನ್ನುವುದು ತಿಳಿದುಬಂದಿಲ್ಲ.

ಅಂಚೆ ಇಲಾಖೆ ವಿಶಿಷ್ಟ ದಾಖಲೆ: ಒಂದೇ ದಿನ ಲಕ್ಷ ಖಾತೆ ಓಪನ್‌, ಡಿಜಿಟಲ್‌ ಪರಿವರ್ತನೆಯ ಮೊದಲ ಹೆಜ್ಜೆ!

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ