ಆ್ಯಪ್ನಗರ

ಸ್ನಾನಕ್ಕೆಂದು ನದಿಗಿಳಿದ ರೈತ ಮುಖಂಡ ಮೃತ್ಯು

ಶನಿವಾರ ಬೆಳಗ್ಗೆ ನಂದಾವರ ದೇವಸ್ಥಾನದ ಪಕ್ಕ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಸಜೀಪಮುನ್ನೂರು ಗ್ರಾಮದ ರೈತ ಮುಖಂಡ, ಬಳಕೆದಾರರ ಹೋರಾಟಗಾರ ಶರತ್‌ ಕುಮಾರ್‌ (45) ಮೃತಪಟ್ಟಿದ್ದಾರೆ.

Vijaya Karnataka 25 Mar 2018, 3:56 pm
ಬಂಟ್ವಾಳ: ಶನಿವಾರ ಬೆಳಗ್ಗೆ ನಂದಾವರ ದೇವಸ್ಥಾನದ ಪಕ್ಕ ನೇತ್ರಾವತಿ ನದಿಯಲ್ಲಿ ಸ್ನಾನಕ್ಕೆಂದು ತೆರಳಿದ್ದ ಸಜೀಪಮುನ್ನೂರು ಗ್ರಾಮದ ರೈತ ಮುಖಂಡ, ಬಳಕೆದಾರರ ಹೋರಾಟಗಾರ ಶರತ್‌ ಕುಮಾರ್‌ (45) ಮೃತಪಟ್ಟಿದ್ದಾರೆ.
Vijaya Karnataka Web farmer death
ಸ್ನಾನಕ್ಕೆಂದು ನದಿಗಿಳಿದ ರೈತ ಮುಖಂಡ ಮೃತ್ಯು


ಶರತ್‌ ಕಾಲು ಜಾರಿ ನದಿಗೆ ಬಿದ್ದು, ಸಾವನ್ನಪ್ಪಿರಬೇಕು ಎಂದು ಶಂಕಿಸಲಾಗಿದ್ದು, ಬಂಟ್ವಾಳ ನಗರ ಪೊಲೀಸ್‌ ಠಾಣೆಯಲ್ಲಿ ಅಸ್ವಾಭಾವಿಕ ಸಾವು ಎಂದು ಪ್ರಕರಣ ದಾಖಲಾಗಿದೆ. ಅವರಿಗೆ ಪತ್ನಿ, ಪುತ್ರ ಇದ್ದಾರೆ.

ಕರ್ನಾಟಕ ರಾಜ್ಯ ರೈತ ಸಂಘ ಹಸಿರು ಸೇನೆ ತಾಲೂಕು ಅಧ್ಯಕ್ಷ ರಾಗಿದ್ದ ಶರತ್‌, ತುಂಬೆ ವೆಂಟೆಡ್‌ ಡ್ಯಾಂ ಸಂತ್ರಸ್ತರ ಹೋರಾಟ, ಎತ್ತಿನಹೊಳೆ ಹೋರಾಟ, ಸ್ಥಳೀಯವಾಗಿ ಯುವಕ ಸಂಘಗಳಲ್ಲಿ ಮುಂಚೂಣಿಯಲ್ಲಿದ್ದರು. ಆರ್‌ಟಿಐ ಕಾರ್ಯಕರ್ತರಾಗಿಯೂ ಜನರೊಂದಿಗೆ ಬೆರೆಯುತ್ತಿದ್ದರು. ರೈತ ಸಂವಾದ ಏರ್ಪಡಿಸುವುದು, ವಿದ್ಯುತ್‌ ಬಳಕೆದಾರರ ಚಳವಳಿ ಸಕ್ರಿಯತæ ಮೂಲಕ ಸರಕಾರದ ಗಮನಕ್ಕೆ ಜನರ ಸಮಸ್ಯೆ ತರುವಲ್ಲಿ ಯಶಸ್ವಿಯಾಗಿದ್ದರು.

ಹೇಗೆ ಮೃತ್ಯು: ಶರತ್‌ ಅವರು ಮನೆಯಿಂದ ಸಜೀಪಮುನ್ನೂರು ಗ್ರಾಮದಲ್ಲಿರುವ ತನ್ನ ಮನೆಯಿಂದ ನಂದಾವರ ದೇವಸ್ಥಾನದ ನೇತ್ರಾವತಿ ನದಿಗೆ ಸ್ನಾನಕ್ಕೆಂದು ತೆರಳಿದ್ದು, ಬಳಿಕ ದೇವಸ್ಥಾನಕ್ಕೆ ತೆರಳಿ, ಮರಳುವ ವಾಡಿಕೆ ಇಟ್ಟುಕೊಂಡಿದ್ದರು. ಅದೇ ರೀತಿ ಶನಿವಾರವೂ ಬೆಳಗ್ಗೆ ಸುಮಾರು 6.30ರ ವೇಳೆ ಮನೆಯಿಂದ ತೆರಳಿದ್ದ ಅವರು, ಬಾರದೆ ಇರುವುದನ್ನು ಕಂಡು ಅನುಮಾನಗೊಂಡು ಪೊಲೀಸರಿಗೆ ಮಾಹಿತಿ ನೀಡಿ ಹುಡುಕಾಟ ನಡೆಸಿದಾಗ ಬೈಕ್‌ ಮತ್ತು ಚಪ್ಪಲಿ ನದಿತೀರದಲ್ಲಿ ಕಂಡುಬಂದಿದೆ. ಮುಳುಗುತಜ್ಞರು ದೇಹ ಮೇಲಕ್ಕೆತ್ತಿದ್ದು, ಬಳಿಕ ಬಂಟ್ವಾಳ ಸರಕಾರಿ ಆಸ್ಪತ್ರೆಗೆ ಸಾಗಿಸಲಾಯಿತು. ಅಲ್ಲಿ ಶರತ್‌ ಮೃತಪಟ್ಟಿರುವುದಾಗಿ ತಿಳಿಸಲಾಯಿತು. ಕಾಲುಜಾರಿ ಬಂಡೆ ಮೇಲೆ ಬಿದ್ದ ಕಾರಣ ತಲೆಗೆ ಏಟು ಬಿದ್ದು ಮೃತಪಟ್ಟಿರಬೇಕು ಎಂದು ಶಂಕಿಸಲಾಗಿದೆ. ಈ ಹಿನ್ನೆಲೆಯಲ್ಲಿ ಬಂಟ್ವಾಳ ನಗರ ಪೊಲೀಸರು 174 ಸಿಆರ್‌ ಪಿಸಿಯಡಿ ಅಸ್ವಾಭಾವಿಕ ಮರಣ ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ