ಆ್ಯಪ್ನಗರ

ಪೊಲೀಸ್‌ ಭದ್ರತೆಯಲ್ಲಿ ಗೋಲಿಬಾರ್‌ಗೆ ಬಲಿಯಾದವರ ಮೃತದೇಹ ದಫನ

ಮೃತದೇಹವನ್ನು ಯುನಿಟಿ ಮಸ್ಜಿದ್‌ ಉಲ್‌ ಎಹ್ಸಾನ್‌ ಮಸೀದಿಗೆ ತೆಗೆದುಕೊಂಡು ಹೋಗಿ, ಮೃತದೇಹಗಳಿಗೆ ಸ್ನಾನ ಮಾಡಿಸಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಬಳಿಕ ಕುದ್ರೋಳಿ ಮತ್ತು ಕಂದಕ್‌ಗೆ ಪೊಲೀಸ್‌ ಬಂದೋಬಸ್ತ್‌ನಲ್ಲಿ ಕರೆದೊಯ್ಯಲಾಯಿತು. ಇಬ್ಬರ ಮನೆಯಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಸೀದಿಗೆ ಕೊಂಡೊಯ್ದು ಬಳಿಕ ದಫನ ಮಾಡಲಾಯಿತು.

Vijaya Karnataka 20 Dec 2019, 7:55 pm

ಮಂಗಳೂರು: ಮಂಗಳೂರು ನಗರದಲ್ಲಿ ಗುರುವಾರ ಸಂಜೆ ನಡೆದ ಹಿಂಸಾಚಾರದಲ್ಲಿ ಮೃತಪಟ್ಟ ಕಂದಕ್‌ ನಿವಾಸಿ ಜಲೀಲ್‌(49) ಮತ್ತು ಕುದ್ರೋಳಿಯ ನೌಶೀನ್‌ (23) ಅವರ ಮೃತದೇಹವನ್ನು ಶುಕ್ರವಾರ ಸಂಜೆ ಪೊಲೀಸ್‌ ಬಿಗಿ ಭದ್ರತೆಯಲ್ಲಿಅಂತಿಮ ವಿಧಿವಿಧಾನ ನಡೆಸಿ ದಫನ ಮಾಡಲಾಯಿತು.
Vijaya Karnataka Web Mangaluru 01


ನಗರದ ವೆನ್ಲಾಕ್‌ ಆಸ್ಪತ್ರೆಯಲ್ಲಿ ಶುಕ್ರವಾರ ಬೆಳಗ್ಗೆ ಶವ ಮಹಜರು ನಡೆಸಲಾಯಿತು. ಮಧ್ಯಾಹ್ನ 2.30ರ ವೇಳೆಗೆ ಮೃತದೇಹವನ್ನು ಯುನಿಟಿ ಮಸ್ಜಿದ್‌ ಉಲ್‌ ಎಹ್ಸಾನ್‌ ಮಸೀದಿಗೆ ಕರೆದುಕೊಂಡು ಹೋಗಿದ್ದು, ಮೃತದೇಹಗಳ ಸ್ನಾನ ಮಾಡಿಸಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಬಳಿಕ ಕುದ್ರೋಳಿ ಮತ್ತು ಕಂದಕ್‌ಗೆ ಪೊಲೀಸ್‌ ಬಂದೋಬಸ್ತ್‌ನಲ್ಲಿ ಕರೆದೊಯ್ಯಲಾಯಿತು. ಇಬ್ಬರ ಮನೆಯಲ್ಲೂ ವಿಶೇಷ ಪ್ರಾರ್ಥನೆ ಸಲ್ಲಿಸಿದ ಬಳಿಕ ಮಸೀದಿಗೆ ಕೊಂಡೊಯ್ದು ಬಳಿಕ ದಫನ ಮಾಡಲಾಯಿತು.

ಕುದ್ರೋಳಿ, ಕಂದಕ್‌, ಕಾರ್‌ಸ್ಟ್ರೀಟ್‌ ವ್ಯಾಪ್ತಿಯಲ್ಲಿ ಕೆಎಸ್‌ಆರ್‌ಪಿ ತುಕಡಿ ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು.

ಪೌರತ್ವ ಪ್ರತಿಭಟನೆ : ಮಂಗಳೂರಿನಲ್ಲಿ ಕಾಂಗ್ರೆಸ್ ನಿಯೋಗ ಪೊಲೀಸ್ ವಶಕ್ಕೆ

ಮುಖಂಡರ ಭೇಟಿ

ಶಾಸಕ ಯು.ಟಿ. ಖಾದರ್‌, ವಿಧಾನ ಪರಿಷ್‌ ಸದಸ್ಯರಾದ ಎಂ. ಫಾರೂಕ್‌, ಐವನ್‌ ಡಿಸೋಜ, ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್‌, ತಹಸೀಲ್ದಾರ್‌ ಗುರುಪ್ರಸಾದ್‌, ಮಾಜಿ ಶಾಸಕ ಮೊಯ್ದೀನ್‌ ಬಾವ, ರಶೀದ್‌ ಹಾಜಿ, ಮನ್ಸೂರ್‌ ಅಹ್ಮದ್‌, ಅಥಾವುಲ್ಲಾ ಜೋಕಟ್ಟೆ, ಜಲೀಲ್‌ ಕೃಷ್ಣಾಪುರ ಮತ್ತಿತರ ಮುಖಂಡರು ಮೃತರ ಅಂತಿಮ ದರ್ಶನ ಪಡೆದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ