ಆ್ಯಪ್ನಗರ

ಕರಾವಳಿಯಲ್ಲಿ ವರುಣನ ಅಬ್ಬರ; ಮತ್ತೆ ರೆಡ್‌ ಅಲರ್ಟ್‌

ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ಶನಿವಾರದ ಬಳಿಕ ಆರೆಂಜ್‌ ಅಲರ್ಟ್‌ ಇರಲಿದೆ. ಆ.9, 10ರಂದು ಮತ್ತೆ ರೆಡ್‌ ಅಲರ್ಟ್‌ನ ಸೂಚನೆಯಿದೆ. ಮೀನುಗಾರರು ಹಾಗೂ ಸಾರ್ವಜನಿಕ ರು ಎಚ್ಚರದಿಂದ ಇರುವಂತೆ ತಿಳಿಸಲಾಗಿದೆ.

Vijaya Karnataka Web 6 Aug 2020, 7:25 pm
ಮಂಗಳೂರು: ಕರಾವಳಿಯಲ್ಲಿ ಕಳೆದೆರಡು ದಿನಗಳಿಂದ ರೆಡ್‌ ಅಲರ್ಟ್‌ ಘೋಷಣೆ ಮಾಡಿದ್ದು, ಶುಕ್ರವಾರ ಬೆಳಗ್ಗೆವರೆಗೂ ಮುಂದುವರಿಯಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಸೂಚನೆ ನೀಡಿದೆ.
Vijaya Karnataka Web ಮಳೆ ಮೋಡ
ಮಳೆ ಮೋಡ


ದ.ಕ. ಜಿಲ್ಲೆಯ ಪುತ್ತೂರು, ಸುಳ್ಯ, ಬಂಟ್ವಾಳ, ಬೆಳ್ತಂಗಡಿ ತಾಲೂಕುಗಳಲ್ಲಿ ಗುರುವಾರ ಭಾರೀ ಮಳೆಯಾಗಿದ್ದು, ಮಂಗಳೂರು ನಗರ ಹಾಗೂ ಗ್ರಾಮಾಂತರದಲ್ಲಿ ಮಳೆಯ ಪ್ರಮಾಣ ಕೊಂಚ ಕಡಿಮೆಯಾಗಿದೆ. ಮಂಗಳೂರು ತಾಲೂಕಿನ ಗುರುಪುರ ಹೋಬಳಿಯ ಕಿಲಿಂಜಾರು ಪ್ರದೇಶದಲ್ಲಿ ಮನೆಯೊಂದಕ್ಕೆ ಹಾನಿಯಾದರೆ, ಪೆರ್ಮನ್ನೂರು, ಇಡ್ಯಾ ಸೇರಿದಂತೆ ನಗರದ ಕೆಲವು ಕಡೆಯಲ್ಲಿಮನೆ ಕುಸಿತ ಹಾಗೂ ಸಣ್ಣ ಗುಡ್ಡ ಕುಸಿತವಾಗಿದೆ. ಮಂಗಳೂರಿನ ಅಶೋಕನಗರದ ರಾಮ ಕಿರೋಡಿಯನ್‌ ರಸ್ತೆಯಲ್ಲಿಮರವೊಂದು ಬಿದ್ದು ಸಂಚಾರ ಹಾಗೂ ಮನೆಗಳಿಗೆ ಹಾನಿಯಾಗಿದೆ.

ಅಲರ್ಟ್‌ ಮುಂದುವರಿಕೆ:
ಭಾರತೀಯ ಹವಾಮಾನ ಇಲಾಖೆ ಮಾಹಿತಿಯಂತೆ ಶನಿವಾರದ ಬಳಿಕ ಆರೆಂಜ್‌ ಅಲರ್ಟ್‌ ಇರಲಿದೆ. ಆ.9, 10ರಂದು ಮತ್ತೆ ರೆಡ್‌ ಅಲರ್ಟ್‌ನ ಸೂಚನೆಯಿದೆ. ಮೀನುಗಾರರು ಹಾಗೂ ಸಾರ್ವಜನಿಕ ರು ಎಚ್ಚರದಿಂದ ಇರುವಂತೆ ತಿಳಿಸಲಾಗಿದೆ. ಈಗಾಗಲೇ ದ.ಕ . ಜಿಲ್ಲಾಡಳಿತ ತುರ್ತು ಪರಿಸ್ಥಿತಿ ಎದುರಿಸಲು 1077 ಟ್ರೋಲ್‌ ಫ್ರೀ ಸಂಖ್ಯೆ ನೀಡಿದ್ದು, ಸಾರ್ವಜನಿಕರು ಇದರ ಸದುಪಯೋಗಪಡಿಸಿಕೊಳ್ಳುವಂತೆ ಜಿಲ್ಲಾಡಳಿತ ವಿನಂತಿಸಿದೆ.

ಕಡಲ್ಕೊರೆತ ತೀವ್ರ: ಉಳ್ಳಾಲದ ಸೋಮೇಶ್ವರ ಹಾಗೂ ಕೈಕೋ ಪ್ರದೇಶದಲ್ಲಿಕಡಲ್ಕೊರೆತ ತೀವ್ರವಾಗಿದೆ. ಸೋಮೇಶ್ವರ ದ ಬಟ್ಟಂಪಾಡಿಯ ಸಂಪರ್ಕ ರಸ್ತೆ ಬಹುತೇಕ ಕಡಲ ಪಾಲಾಗಿದೆ. ಅಪಾಯದ ಅಂಚಿನಲ್ಲಿರುವ ಮನೆಗಳನ್ನು ಬೇರೆ ಕಡೆಗೆ ಸ್ಥಳಾಂತರ ಮಾಡಲು ಸೂಚನೆ ನೀಡಲಾಗಿದೆ.

ಅಪಾಯದಲ್ಲಿ ನದಿ ನೀರಿನ ಮಟ್ಟ: ಕರಾವಳಿಯ ನದಿ ನೀರಿನ ಮಟ್ಟದಲ್ಲಿಸಾಕಷ್ಟು ಏರಿಕೆಯಾಗಿದೆ. ಪಶ್ಚಿಮ ಘಟ್ಟದಲ್ಲಿಸುರಿಯುತ್ತಿರುವ ನಿರಂತರ ಮಳೆಯಿಂದಾಗಿ ನದಿಯ ನೀರಿನ ಮಟ್ಟ ಏರಿಕೆಯಾಗಿದೆ.

ಬಂಟ್ವಾಳದಲ್ಲಿ ನೇತ್ರಾವತಿ ನದಿಯ ಮಟ್ಟ ಈಗ 7.6 ಮೀ. ಇದೆ. ಆದರೆ ಅಪಾಯದ ಮಟ್ಟ 8.5 ಮೀ., ಉಪ್ಪಿನಂಗಡಿಯಲ್ಲಿ ನೇತ್ರಾವತಿ ಮಟ್ಟ 29.0 ಮೀ. ಜತೆಯಲ್ಲಿ ಕುಮಾರಧಾರಾ ನದಿ ನೀರಿನ ಮಟ್ಟ 24 ಮೀ. ಇದೆ. ಕಳೆದ ಬಾರಿ ಆ.9 ರಂದು ಉಪ್ಪಿನಂಗಡಿಯಲ್ಲಿನೇತ್ರಾವತಿ-ಕುಮಾರಧಾರಾ ನದಿಗಳು ಸಂಗಮವಾಗಿತ್ತು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ