ಆ್ಯಪ್ನಗರ

ಗುರುಪುರ ಮಠದಗುಡ್ಡೆಯ ಮನೆಗಳು ಜಖಂ

ಕೈಕಂಬ : ಸತತ ಮಳೆಯಿಂದಾಗಿ ಗುರುಪುರ ಮೂಳೂರು ಸೈಟ್‌ ಮಠದಗುಡ್ಡೆಯಲ್ಲಿ ಮರ ಮತ್ತು ಬಂಡೆ ಕಲ್ಲು ಕುಸಿದು ಬಿದ್ದು ಮನೆಗಳೆರಡು ಸಂಪೂರ್ಣ ಜಖಂಗೊಂಡಿದ್ದು, ಪ್ರದೇಶದಲ್ಲಿ ಇನ್ನೂ ಕೆಲವು ಮನೆಗಳು ಅಪಾಯದಂಚಿಗೆ ಸಿಲುಕಿವೆ.

Vijaya Karnataka 24 Jul 2019, 5:00 am
ಕೈಕಂಬ : ಸತತ ಮಳೆಯಿಂದಾಗಿ ಗುರುಪುರ ಮೂಳೂರು ಸೈಟ್‌ ಮಠದಗುಡ್ಡೆಯಲ್ಲಿ ಮರ ಮತ್ತು ಬಂಡೆ ಕಲ್ಲು ಕುಸಿದು ಬಿದ್ದು ಮನೆಗಳೆರಡು ಸಂಪೂರ್ಣ ಜಖಂಗೊಂಡಿದ್ದು, ಪ್ರದೇಶದಲ್ಲಿ ಇನ್ನೂ ಕೆಲವು ಮನೆಗಳು ಅಪಾಯದಂಚಿಗೆ ಸಿಲುಕಿವೆ.
Vijaya Karnataka Web hosuse damaged
ಗುರುಪುರ ಮಠದಗುಡ್ಡೆಯ ಮನೆಗಳು ಜಖಂ


ಮಮತಾ ಅವರ ಮನೆ ಮೇಲೆ ಗುಡ್ಡದ ಬೃಹತ್‌ ಮರ, ಬಂಡೆ ಮತ್ತು ಮಣ್ಣು ಜರಿದು ಮನೆ ಸಂಪೂರ್ಣ ನೆಲಸಮಗೊಂಡಿದೆ. ಸೋಮವಾರ ಮುಸ್ಸಂಜೆಗೆ ಈ ದುರ್ಘಟನೆ ಸಂಭವಿಸಿದೆ. ಆಗ ಮನೆಯಲ್ಲಿ ಇಬ್ಬರು ಶಾಲೆಗೆ ಹೋಗುವ ಮಕ್ಕಳೊಂದಿಗೆ ದಂಪತಿ(ಮಮತಾ-ಆರ್‌ ಕೆ ಶರ್ಮ) ಇದ್ದು, ಎಲ್ಲರೂ ಮನೆಯಿಂದ ಓಡಿ ಹೋಗಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮರ, ಮಣ್ಣು-ಬಂಡೆ ಉರುಳಿ, ಮನೆಯ ಗೋಡೆಗಳು ಕುಸಿದಿದ್ದು, ಮನೆ ತುಂಬೆಲ್ಲ ಕೆಸರು, ಕಲ್ಲು ತುಂಬಿಕೊಂಡಿದೆ.

ಇಲ್ಲಿನ ಜ್ವಾರಾ ಎಂಬವರ ಮನೆಯ ಹಿಂಬದಿಯಲ್ಲಿ ಗುಡ್ಡದ ಬಂಡೆ, ಮಣ್ಣು ಜರಿದು ಮನೆ ಮೇಲೆ ಬಿದ್ದಿದೆ. ಈ ದುರ್ಘಟನೆ ಸಂಭವಿಸಿದ ಸಂದರ್ಭದಲ್ಲಿ ಮನೆಯಲ್ಲಿ ದಂಪತಿ, ಮಕ್ಕಳ ಸಹಿತ ಏಳು ಮಂದಿ ಇದ್ದರು. ಮಮತಾ ಮತ್ತು ಜ್ವಾರಾ ಕುಟುಂಬವು ಕಳೆದ ರಾತ್ರಿ ತಮ್ಮ ಸಂಬಂಧಿಗಳ ಮನೆಯಲ್ಲಿ ವಾಸ್ತವ್ಯ ಹೂಡಿತ್ತು. ಮಠದಗುಡ್ಡೆಯ ಉಸ್ಮಾನ್‌ ಎಂಬವರ ಮನೆ ಪಕ್ಕದ ಗುಡ್ಡೆ ಕುಸಿದು ಮನೆ ಅಪಾಯದಂಚಿಗೆ ಸಿಲುಕಿದೆ. ಇಲ್ಲಿ ಇನ್ನೂ ಕೆಲವು ಮನೆಗಳ ಪಕ್ಕದಲ್ಲಿ ಗುಡ್ಡೆ ಜರಿದಿದ್ದು, ಮಳೆ ಮುಂದುವರಿದರೆ ಇನ್ನಷ್ಟು ಅಪಾಯ ಸಾಧ್ಯತೆ ಇದೆ.

ರಸ್ತೆಗುರುಳಿದ ಗುಡ್ಡದ ಕಲ್ಲು-ಮಣ್ಣು: ಮಠದ ಸೈಟಿಗೆ ಹೋಗುವ ರಸ್ತೆ ಪಕ್ಕದ ಮೂರು ಕಡೆ ಗುಡ್ಡದ ಮಣ್ಣಿನೊಂದಿಗೆ ಬಂಡೆಗಳು ಕುಸಿದಿವೆ. ಇನ್ನು ಕೆಲವು ಬಂಡೆಗಳು ಕುಸಿಯುವ ಅಂಚಿನಲ್ಲಿದ್ದು, ಇವು ಕುಸಿದರೆ ರಸ್ತೆಯ ಮತ್ತೊಂದು ಬದಿಯಲ್ಲಿರುವ ಮನೆಗಳಿಗೆ ಅಪಾಯ ತಪ್ಪಿದ್ದಲ್ಲ. ಪ್ರಕೃತಿ ವಿಕೋಪ ಭೀತಿಯಿಂದ ಈ ಪ್ರದೇಶದ ಕೆಲವು ಕುಟುಂಬಗಳು ಈಗಾಗಲೇ ಬೇರೆಡೆಗೆ ಗುಳೆ ಹೋಗಿವೆ.

ದುರ್ಘಟನಾ ಪ್ರದೇಶಕ್ಕೆ ಕಂದಾಯ ನಿರೀಕ್ಷ ಕ(ಆರ್‌ಐ) ಆಸೀಫ್‌ ಇಕ್ಬಾಲ್‌ ಸೂಚನೆಯಂತೆ ಗ್ರಾಮ ಲೆಕ್ಕಾಧಿಕಾರಿ(ವೀಎ) ಮಂಜುಳಾ, ಕಂದಾಯ ಇಲಾಖೆ ಸಿಬ್ಬಂದಿ ಅಶ್ರಫ್‌ ಭೇಟಿ ನೀಡಿ ಪರಿಶೀಲನೆ ನಡೆಸಿ, ಪರಿಹಾರಕ್ಕೆ ವರದಿ ಮಾಡಿದರು. ಜೊತೆಯಲ್ಲಿ ಗುರುಪುರ ಗ್ರಾಪಂ ವಾರ್ಡ್‌ ಸದಸ್ಯ ರಾಜೇಶ್‌ ಸುವರ್ಣ, ಸ್ಥಳೀಯರು ಇದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ