ಮಂಗಳೂರು: ಕರಾವಳಿ ಜಿಲ್ಲೆಯಲ್ಲಿ ಫೆ.22ರಿಂದ ಮಾ.24ರವರೆಗೆ ಮೌಢ್ಯ ತಿಂಗಳಾದ ಕಾರಣ ಮದುವೆ, ಗೃಹಪ್ರವೇಶ, ಸೀಮಂತ ಶುಭ ಕಾರ್ಯಕ್ರಮಗಳ ಸಂಖ್ಯೆ ಇಳಿಮುಖವಾಗಿದೆ. ಪರಿಣಾಮ ಮಾರುಕಟ್ಟೆಯಲ್ಲಿ ಹೂ, ತರಕಾರಿ, ಮೀನು ಮಾಂಸಗಳ ದರವೂ ಗಣನೀಯವಾಗಿ ಇಳಿಕೆ ಕಂಡಿದೆ. ಉತ್ತರ ಕರ್ನಾಟಕ, ಬಯಲು ಪ್ರದೇಶದಲ್ಲಿ ಈ ವರ್ಷ ಭಾರಿ ಮಳೆಯಾದ ಕಾರಣ ತರಕಾರಿ, ದವಸ-ಧಾನ್ಯಗಳು ನೆರೆಗೆ ಕೊಚ್ಚಿ ಹೋಗಿದ್ದು, ತರಕಾರಿ ಬೆಳೆ ಗಗನಕ್ಕೇರಿದ್ದವು. ಟೊಮ್ಯಾಟೋ ಸೇರಿದಂತೆ ಪ್ರತಿಯೊಂದು ತರಕಾರಿ ದರವೂ ಶತಕದ ಆಸುಪಾಸಿನಲ್ಲಿದ್ದವು. ಆದರೆ ಕ್ರಮೇಣ ಇಳಿಕೆಯಾಗುತ್ತಾ ಬಂದಿದ್ದು, ಈಗ ಗ್ರಾಹಕರು ಖುಷಿಯಾಗಿದ್ದಾರೆ.
ಹೂವು, ಮೀನು ದರವೂ ಅಗ್ಗ
ತರಕಾರಿ ಮಾದರಿಯಲ್ಲೇ ಮೀನಿನ ದರದಲ್ಲೂ ಗಣನೀಯ ಇಳಿಕೆಯಾಗಿದೆ. ಭಟ್ಕಳ ಮಲ್ಲಿಗೆ, ಶಂಕರಪುರ ಮಲ್ಲಿಗೆ ಒಂದು ತಿಂಗಳಿನಿಂದೀಚೆಗೆ ಭಾರಿ ಇಳಿಕೆ ಕಂಡಿದೆ. ಫೆಬ್ರವರಿ ಮೊದಲ ವಾರದಲ್ಲಿ ಶಂಕರಪುರ ಅಟ್ಟೆಗೆ 2100ರೂ. ಇದ್ದರೆ ಭಟ್ಕಳ ಮಲ್ಲಿಗೆ 1030 ಇತ್ತು. ಮಾರ್ಚ್ ಮೊದಲ ವಾರದಲ್ಲಿ ಈ ದರ ಶಂಕರಪುರ 690ರೂ. ಮತ್ತು ಭಟ್ಕಳ 330ಕ್ಕೆ ಇಳಿಕೆಯಾಗಿದೆ. ಉಳಿದಂತೆ ಮಾ.5ರಂದು ಸೇವಂತಿಗೆ (ಮೈಸೂರು) 1150ರೂ. ಚಿತ್ರದುರ್ಗ 1400ರೂ. ಕಾಕಡ 660ರೂ., ಗೊಂಡೆ 400ರೂ.ನಂತೆ ಮಾರಾಟವಾಗಿವೆ ಎನ್ನುತ್ತಾರೆ ಹೂವಿನ ವ್ಯಾಪಾರಿ ಇರ್ಫಾನ್ ಕಲ್ಲಾಪು.
-
ತರಕಾರಿ ಮಾರುಕಟ್ಟೆ ದರ (ಕೆಜಿಗೆ)
ಟೊಮ್ಯಾಟೋ 12ರೂ., ಬದನೆ (ಉಡುಪಿ) 60ರೂ., ಕೆಂಪು ಬದನೆ 30ರೂ., ಚಿಕ್ಕಮಂಗಳೂರು ಬದನೆ 20 ರೂ., ಬೀನ್ಸ್ 32ರೂ., ಅಲೂಗಡ್ಡೆ 24 ರೂ., ತೊಂಡೆ ಕಾಯಿ 24ರೂ., ಅಲಸಂಡೆ 30ರೂ., ಸುವರ್ಣಗಡ್ಡೆ 22ರೂ., ನುಗ್ಗೆಕಾಯಿ 100ರೂ., ಸೌತೆಕಾಯಿ 12ರೂ., ಕಾಯಿಮೆಣಸು 80ರೂ., ಮೆಂತೆಸೊಪ್ಪು 40ರೂ., ಕೊತ್ತಂಬರಿ ಸೊಪ್ಪು 40ರೂ., ಸೊರೆಕಾಯಿ 30ರೂ., ಕ್ಯಾಬೇಜ್ 20ರೂ. ಎನ್ನುತ್ತಾರೆ ಕಾರ್ಸ್ಟ್ರೀಟ್ ಪಿಎಸ್ಬಿ ವೆಜಿಟೇಬಲ್ಸ್ ಮಾಲೀಕ ಶೇಖರ್.
ಮೀನು ಮಾರಾಟ ದರ (ಕೆಜಿಗೆ)ಬಂಗುಡೆ 200 ರೂ., ಬೂತಾಯಿ 120ರೂ., ಅಂಜಲ್ 700ರೂ., ಮಾಂಜಿ 800ರೂ., ಕೊಡ್ಡೆಯಿ 300ರೂ., ನಂಗ್ 350ರೂ., ಏಡಿ 300, ಸಿಗಡಿ 550ರೂ. ಮುರು 250ರೂ., ಡಿಸ್ಕೋ 130ರೂ.