ಆ್ಯಪ್ನಗರ

ಶ್ರೀಕ್ಷೇತ್ರ ಧರ್ಮಸ್ಥಳ ನಿಂದನೆ ಪ್ರಕರಣ: ಸೋಮನಾಥ ನಾಯಕರಿಗೆ ಶಿಕ್ಷೆ

ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಿ...

Vijaya Karnataka Web 26 Mar 2018, 8:20 am
ಬೆಳ್ತಂಗಡಿ : ಶ್ರೀ ಕ್ಷೇತ್ರ ಧರ್ಮಸ್ಥಳ, ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ, ಅವರ ಕುಟುಂಬ ಹಾಗೂ ಅವರು ನಡೆಸುತ್ತಿರುವ ವಿವಿಧ ಸಂಸ್ಥೆಗಳ ಕುರಿತು ಗುರುವಾಯನಕೆರೆ ನಾಗರಿಕ ಸೇವಾ ಟ್ರಸ್ಟ್‌ನ ಅಧ್ಯಕ್ಷ ರಾದ ಕೆ. ಸೋಮನಾಥ ನಾಯಕ್‌ ಅವರಿಗೆ ನ್ಯಾಯಾಲಯದ ಪ್ರತಿಬಂಧಕಾಜ್ಞೆಯನ್ನು ಉಲ್ಲಂಘಿಸಿ, ಸುಳ್ಳು ಆರೋಪ ಹೊರಿಸಿ ಪತ್ರಿಕಾ ಹೇಳಿಕೆ ಮತ್ತು ಪ್ರಕಟಣೆ ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿ ಮೂರು ತಿಂಗಳು ಜೈಲು ಶಿಕ್ಷೆ, ಅವರ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳುವಂತೆ ಹಾಗೂ ಅರ್ಜಿದಾರರಾದ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ರೂ. 4,93,000 ಪರಿಹಾರ ಧನವನ್ನು ನೀಡುವಂತೆ ಆದೇಶಿಸಿದೆ. ಒಂದು ತಿಂಗಳೊಳಗೆ ಪರಿಹಾರ ಧನ ನೀಡಲು ವಿಫಲವಾದಲ್ಲಿ ಅವರ ಆಸ್ತಿಯನ್ನು ಬಹಿರಂಗ ಏಲಂ ಮಾಡಿ ಹಣವನ್ನು ಶ್ರೀ ಕ್ಷೇತ್ರಕ್ಕೆ ನೀಡಬೇಕಾಗಿ ಸಹಾ ನ್ಯಾಯಾಲಯ ಆದೇಶ ಮಾಡಿದೆ.
Vijaya Karnataka Web insulting dharmasthala case
ಶ್ರೀಕ್ಷೇತ್ರ ಧರ್ಮಸ್ಥಳ ನಿಂದನೆ ಪ್ರಕರಣ: ಸೋಮನಾಥ ನಾಯಕರಿಗೆ ಶಿಕ್ಷೆ


ಮಾ. 23ರಂದು ಆದೇಶ ಮಾಡಿದ ನ್ಯಾಯಾಲಯವು ಆದೇಶ ಮಾಡಿದ ನಂತರವೂ ನಾಯಕ್‌ ಅವರು ಮುಂದುವರಿಸಿದ್ದಲ್ಲಿ ಅರ್ಜಿದಾರರಿಗೆ ಹೆಚ್ಚುವರಿ ಪರಿಹಾರ ನೀಡಲು ಸಹಾ ಬದ್ದರು. ನಾಯಕರು ತಾನು ಅರ್ಜಿದಾರರಲ್ಲಿ ಕ್ಷ ಮೆ ಕೇಳಲು ಸಿದ್ಧನಿರುವುದಾಗಿ ನ್ಯಾಯಾಲಯಕ್ಕೆ ನಿವೇದನೆ ಮಾಡಿದ್ದರೂ ನ್ಯಾಯಾಲಯವು ಸೂಕ್ತ ಅಭಿಪ್ರಾಯ ವ್ಯಕ್ತಪಡಿಸಿ ಅವರ ಮನವಿಯನ್ನು ತಿರಸ್ಕರಿಸಿದೆ.

ಬೆಳ್ತಂಗಡಿಯ ವಕೀಲರಾದ ರತ್ನವರ್ಮ ಬುಣ್ಣು ಹಾಗೂ ಬದ್ರನಾಥ ಸಂಪಿಗೆತ್ತಾಯ ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಪರವಾಗಿ ನ್ಯಾಯಾಲಯ ನಿಂದನೆಯ ಅರ್ಜಿ ಸಲ್ಲಿಸಿದ್ದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ