ಆ್ಯಪ್ನಗರ

ಧರ್ಮಸ್ಥಳ ಮಂಜುನಾಥನಿಗೆ ಅಪಚಾರ: ಸಿಎಂ ಕುಮಾರಸ್ವಾಮಿ ಪಶ್ಚಾತ್ತಾಪ

ಮಂಜುನಾಥ ಸ್ವಾಮಿಗೆ ದೊರೆಯೂ ಒಂದೆ, ಸಾಮಾನ್ಯನು ಒಂದೇ. ಆತನ ನ್ಯಾಯ ಎಲ್ಲರಿಗೂ ಸಮಾನ. ಅಂತ ಸ್ವಾಮೀಯ ಹೆಸರನ್ನು ನಾನು ಎಳೆದು ತರಬಾರದಿತ್ತು ಎಂದು ಹೇಳುವ ಮೂಲಕ 12 ವರ್ಷಗಳ ಹಿಂದೆ ತಾನು ಕ್ಷೇತ್ರದ ಅಧಿಪತಿಯ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿದ್ದು ತಪ್ಪು ಎಂದು ಪರೋಕ್ಷವಾಗಿ ಅಭಿಪ್ರಾಯಪಟ್ಟರು.

Vijaya Karnataka Web 9 Feb 2019, 3:27 pm
ಧರ್ಮಸ್ಥಳ: 12 ವರ್ಷಗಳ ಹಿಂದೆ ಧರ್ಮಸ್ಥಳದ ಹೆಸರನ್ನು ಎಳೆದು ತರುವ ಮೂಲಕ ಅಪಚಾರ ಮಾಡಿದ್ದೆ ಎಂಬ ಭಾವನೆ ನನಗಿದೆ. ಅಪಚಾರ ಎಸಗಿದ ಯಾರನ್ನು ಮಂಜುನಾಥ ಸ್ವಾಮಿ ಬಿಡುವುದಿಲ್ಲ. ಎಲ್ಲರ ನಡುವಳಿಕೆಯನ್ನು ಸ್ವಾಮಿ ಗಮನಿಸುತ್ತಿರುತ್ತಾನೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು.
Vijaya Karnataka Web hdk2


ಮಹಾಮಸ್ತಕಾಭಿಷೇಕದ ಸಂದರ್ಭದಲ್ಲಿ ಜನ ಕಲ್ಯಾಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಮಂಜುನಾಥ ಸ್ವಾಮಿಗೆ ದೊರೆಯೂ ಒಂದೆ, ಸಾಮಾನ್ಯನು ಒಂದೇ. ಆತನ ನ್ಯಾಯ ಎಲ್ಲರಿಗೂ ಸಮಾನ. ಅಂತ ಸ್ವಾಮೀಯ ಹೆಸರನ್ನು ನಾನು ಎಳೆದು ತರಬಾರದಿತ್ತು ಎಂದು ಹೇಳುವ ಮೂಲಕ 12 ವರ್ಷಗಳ ಹಿಂದೆ ತಾನು ಕ್ಷೇತ್ರದ ಅಧಿಪತಿಯ ಹೆಸರಿನಲ್ಲಿ ಆಣೆ ಪ್ರಮಾಣ ಮಾಡಿದ್ದು ತಪ್ಪು ಎಂದು ಪರೋಕ್ಷವಾಗಿ ಅಭಿಪ್ರಾಯಪಟ್ಟರು.

ಇಂದಿನಿಂದ ಧರ್ಮಸ್ಥಳ ಬಾಹುಬಲಿ ಮಹಾ ಮಜ್ಜನ

ಮೂವತ್ತೇಳು ವರ್ಷಗಳಿಂದ ರತ್ನಗಿರಿ ಶೃಂಗದ ಮೇಲೆ ಗಗನಮುಖಿಯಾಗಿ, ಧ್ಯಾನಸ್ಥ ವದನನಾಗಿ ಕಂಗೊಳಿಸುತ್ತಿರುವ ಧರ್ಮಸ್ಥಳ ಬಾಹುಬಲಿಗೆ 12 ವರ್ಷಗಳಿಗೊಮ್ಮೆ ನಡೆಯುವ ಪುಣ್ಯಸ್ನಾನ ಮಹಾಮೇರು ಮಹೋತ್ಸವದ ನಾಲ್ಕನೇ ಆವೃತ್ತಿ ಶನಿವಾರ ತೆರೆದುಕೊಳ್ಳಲಿದ್ದು, ದಶ ದಿನಗಳ ವಿರಾಟ್‌ ಉತ್ಸವ ಧರ್ಮಸ್ಥಳದಲ್ಲಿ ಅನಾವರಣಗೊಳ್ಳುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ