ಆ್ಯಪ್ನಗರ

ಸುಬ್ರಹ್ಮಣ್ಯದಲ್ಲಿ ಘರ್ಷಣೆ: ಗುರುಪ್ರಸಾದ್‌ಗೆ ನ್ಯಾಯಾಂಗ ಬಂಧನ

ಸುಬ್ರಹ್ಮಣ್ಯ ಮಠದ ಆವರಣದಲ್ಲಿ ನಡೆದಿದ್ದ ಸುಧರ್ಮ ಸಭೆಯಲ್ಲಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಸಲಾಗುವ ಸರ್ಪಸಂಸ್ಕಾರ ಸೇವೆಯ ಬಗ್ಗೆ ಚೈತ್ರಾ ಕುಂದಾಪುರ ಸಂಸ್ಕಾರ ರಹಿತವಾಗಿ ಮಾತನಾಡಿದ್ದಾಳೆ ಎಂದು ಆರೋಪಿಸಿ ಗುರುಪ್ರಸಾದ್‌ ಪಂಜ ಮತ್ತು ಚೈತ್ರಾ ಕುಂದಾಪುರ ಮಧ್ಯೆ ಫೇಸ್‌ಬುಕ್‌ನಲ್ಲಿ ಚರ್ಚೆಗಳಾಗಿ, ಅ.24ರಂದು ಸುಬ್ರಹ್ಮಣ್ಯದಲ್ಲಿ ಎರಡೂ ತಂಡಗಳ ಮಧ್ಯೆ ಮಾರಾಮಾರಿ ನಡೆದಿತ್ತು.

Vijaya Karnataka 1 Nov 2018, 9:21 am
ಸುಳ್ಯ(ದ.ಕ.): ಸುಳ್ಯ ತಾಲೂಕು ಹಿಂದೂ ಜಾಗರಣ ವೇದಿಕೆ ಕಾರ್ಯದರ್ಶಿ ಗುರುಪ್ರಸಾದ್‌ ಪಂಜ ಮತ್ತು ಚೈತ್ರಾ ಕುಂದಾಪುರ ತಂಡಗಳ ನಡುವೆ ಸುಬ್ರಹ್ಮಣ್ಯದಲ್ಲಿ ನಡೆದ ಘರ್ಷಣೆಗೆ ಸಂಬಂಧಿಸಿದಂತೆ ಆರೋಪಿ ಗುರುಪ್ರಸಾದ್‌ ಪಂಜರನ್ನು ಸುಬ್ರಹ್ಮಣ್ಯ ಪೊಲೀಸರು ಬುಧವಾರ ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, 14 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
Vijaya Karnataka Web arrested


ಸುಬ್ರಹ್ಮಣ್ಯ ಮಠದ ಆವರಣದಲ್ಲಿ ನಡೆದಿದ್ದ ಸುಧರ್ಮ ಸಭೆಯಲ್ಲಿ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಡೆಸಲಾಗುವ ಸರ್ಪಸಂಸ್ಕಾರ ಸೇವೆಯ ಬಗ್ಗೆ ಚೈತ್ರಾ ಕುಂದಾಪುರ ಸಂಸ್ಕಾರ ರಹಿತವಾಗಿ ಮಾತನಾಡಿದ್ದಾಳೆ ಎಂದು ಆರೋಪಿಸಿ ಗುರುಪ್ರಸಾದ್‌ ಪಂಜ ಮತ್ತು ಚೈತ್ರಾ ಕುಂದಾಪುರ ಮಧ್ಯೆ ಫೇಸ್‌ಬುಕ್‌ನಲ್ಲಿ ಚರ್ಚೆಗಳಾಗಿ, ಅ.24ರಂದು ಸುಬ್ರಹ್ಮಣ್ಯದಲ್ಲಿ ಎರಡೂ ತಂಡಗಳ ಮಧ್ಯೆ ಮಾರಾಮಾರಿ ನಡೆದಿತ್ತು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿ ಚೈತ್ರಾ ಕುಂದಾಪುರ ಈಗಾಗಲೇ ನ್ಯಾಯಾಂಗ ಬಂಧನದಲ್ಲಿದ್ದು, ಘಟನೆಯಲ್ಲಿ ಹಲ್ಲೆಗೊಳಗಾಗಿದ್ದ ಗುರುಪ್ರಸಾದ್‌ ಪಂಜ ಪುತ್ತೂರಿನ ಖಾಸಗಿ ಆಸ್ಪತ್ರೆಯೊಂದರಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ ಬುಧವಾರ ಸುಬ್ರಹ್ಮಣ್ಯ ಎಸ್‌ಐ ಗೋಪಾಲ ನೇತೃತ್ವದ ಪೊಲೀಸರ ತಂಡ ಆಸ್ಪತ್ರೆಯಿಂದ ಆತನನ್ನು ಬಿಡುಗಡೆಗೊಳಿಸಿ ಸುಳ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ನ್ಯಾಯಾಲಯದಲ್ಲಿ ಆರೋಪಿ ಗುರುಪ್ರಸಾದ್‌ನನ್ನು ವಿಚಾರಣೆ ನಡೆಸಿದ್ದು, ನ.13ರವರೆಗೆ ನ್ಯಾಯಾಂಗ ಬಂಧನ ವಿಧಿಸಿದ್ದಾರೆ. ಈ ಮಧ್ಯೆ ಗುರುಪ್ರಸಾದ್‌ ನಿರೀಕ್ಷ ಣಾ ಜಾಮಿನಿಗಾಗಿ ಅರ್ಜಿ ಸಲ್ಲಿಸಿದ್ದು ಅರ್ಜಿಯ ವಿಚಾರಣೆ ಅ.2ರಂದು ನಡೆಯಲಿದೆ.

ಗುರುಪ್ರಸಾದ್‌ನನ್ನು ಆಸ್ಪತ್ರೆಯಿಂದ ಬಿಡುಗಡೆಗೊಳಿಸಿ ಪೊಲೀಸರು ಬಂಧಿಸಿದ್ದಾರೆ. ಆತನಿಗೆ ಗಂಭೀರ ಹಲ್ಲೆಯಾಗಿದ್ದು, ಹೆಚ್ಚಿನ ಚಿಕಿತ್ಸೆಯ ಅವಶ್ಯಕತೆಯಿದೆ. ಆದ್ದರಿಂದ ಚಿಕಿತ್ಸೆಗೆ ಅನುಮತಿ ನೀಡಬೇಕು ಎಂದು ಗುರುಪ್ರಸಾದ್‌ ಪರ ವಕೀಲರು ಕೋರ್ಟ್‌ಗೆ ಮನವಿ ಮಾಡಿದರು. ಮನವಿ ಪುರಸ್ಕರಿಸಿದ ಕೋರ್ಟ್‌ ಚಿಕಿತ್ಸೆಯ ಅವಶ್ಯಕತೆ ಕಂಡು ಬಂದಲ್ಲಿ ನೀಡಬೇಕು ಎಂದು ಜೈಲು ಅಧಿಕಾರಿಗಳಿಗೆ ಆದೇಶಿಸಿದೆ. ಚೈತ್ರಾ ಕುಂದಾಪುರ ಅವರ ಅರ್ಜಿ ವಿಚಾರಣೆ ಪುತ್ತೂರು ನ್ಯಾಯಾಲಯದಲ್ಲಿ ಪ್ರಗತಿಯಲ್ಲಿದೆ ಎಂದು ತಿಳಿದುಬಂದಿದೆ.

ಆಶಿತ್‌ ಕಲ್ಲಾಜೆಗಾಗಿ ಮುಂದುವರಿದ ಶೋಧ: ಪ್ರಕರಣಕ್ಕೆ ಸಂಬಂಧಿಸಿದಂತೆ ಚೈತ್ರಾ ಕುಂದಾಪುರ ಅವರು ಆಶಿತ್‌ ಕಲ್ಲಾಜೆ ಮತ್ತು ಇನ್ನಿಬ್ಬರ ಮೇಲೂ ದೂರು ನೀಡಿದ್ದು ಈ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ಮುಂದುವರಿದಿದೆ ಎಂದು ಸುಳ್ಯ ವೃತ್ತ ನಿರೀಕ್ಷ ಕರು ತಿಳಿಸಿದ್ದಾರೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ