ಆ್ಯಪ್ನಗರ

ಕದ್ರಿ ಠಾಣೆ ಸಿಬ್ಬಂದಿಗೆ ಠಾಣೆಯಲ್ಲೇ ಸೀಮಂತ

ಕದ್ರಿ ಪೊಲೀಸ್‌ ಠಾಣೆ ಮಹಿಳಾ ಸಿಬ್ಬಂದಿಗೆ ಮಂಗಳವಾರ ಠಾಣೆ ಸಿಬ್ಬಂದಿಗಳೆಲ್ಲಸೇರಿ ಠಾಣೆಯಲ್ಲಿಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ಮಾಡಿಸುವ ಮೂಲಕ ಖಾಸಗಿ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

Vijaya Karnataka 17 Oct 2019, 5:00 am
ವಿಕ ಸುದ್ದಿಲೋಕ ಮಂಗಳೂರು
Vijaya Karnataka Web kadri station staff seemantha
ಕದ್ರಿ ಠಾಣೆ ಸಿಬ್ಬಂದಿಗೆ ಠಾಣೆಯಲ್ಲೇ ಸೀಮಂತ


ಕದ್ರಿ ಪೊಲೀಸ್‌ ಠಾಣೆ ಮಹಿಳಾ ಸಿಬ್ಬಂದಿಗೆ ಮಂಗಳವಾರ ಠಾಣೆ ಸಿಬ್ಬಂದಿಗಳೆಲ್ಲಸೇರಿ ಠಾಣೆಯಲ್ಲಿಸಂಪ್ರದಾಯದಂತೆ ಸೀಮಂತ ಕಾರ್ಯಕ್ರಮ ಮಾಡಿಸುವ ಮೂಲಕ ಖಾಸಗಿ ಕಾರ್ಯಕ್ರಮವನ್ನು ವಿಶಿಷ್ಟವಾಗಿ ಆಚರಿಸಿದ್ದಾರೆ.

ಬೆಳಗಾವಿ ಮೂಲದ ಗೌರವ್ವ ಎಂಬವರು ಕಳೆದ ಒಂದೂವರೆ ವರ್ಷದಿಂದ ಕದ್ರಿ ಪೊಲೀಸ್‌ ಠಾಣೆಯ ಮಹಿಳಾ ಸಿಬ್ಬಂದಿಯಾಗಿದ್ದಾರೆ. ಠಾಣೆಯ ಇನ್‌ಸ್ಪೆಕ್ಟರ್‌ ಶಾಂತಾರಾಮ ಅವರ ನೇತೃತ್ವದಲ್ಲಿಠಾಣೆಯ ಸಿಬ್ಬಂದಿ ಅವರ ಆಶಯದಂತೆ ಠಾಣೆಯಲ್ಲೇ ಸೀಮಂತ ಮಾಡಿಸುವ ಬಗ್ಗೆ ನಿರ್ಧಾರ ಕೈಗೊಳ್ಳಲಾಯಿತು.

ಅದರಂತೆ ಗೌರವ್ವ ಅವರಲ್ಲಿವಿಷಯ ಪ್ರಸ್ತಾಪಿಸಿ ಅವರನ್ನು ಕಾರ್ಯಕ್ರಮಕ್ಕೆ ಒಪ್ಪಿಸಿ ಅವರ ಪತಿ ಶಿವಾನಂದ ಮತ್ತು ಕುಟುಂಬವನ್ನೂ ಆಮಂತ್ರಿಸಲಾಯಿತು. ಕರಾವಳಿ ಸಂಪ್ರದಾಯದಂತೆ ನಡೆದ ಕಾರ್ಯಕ್ರಮದಲ್ಲಿಮಂಗಳೂರಿನ ವಿವಿಧ ಪೊಲೀಸ್‌ ಠಾಣೆ ಸಿಬ್ಬಂದಿ ಭಾಗವಹಿಸಿ ಅತ್ಯಂತ ವಿಶಿಷ್ಟವಾಗಿ ನಡೆದ ಈ ಕಾರ್ಯಕ್ರಮದಲ್ಲಿ ಸಂಭ್ರಮಿಸಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ