ಆ್ಯಪ್ನಗರ

ಕೊರೊನಾ ಎಫೆಕ್ಟ್: ನೆಂಟ್ರ ಮನೆಗೆ ನೋ ಎಂಟ್ರಿ, ನೆರೆಕರೆಯವರಲ್ಲಿ ಮಾತಿಲ್ಲ- ಕಥೆ ಇಲ್ಲ!

ಸಂಬಂಧಗಳನ್ನೇ ದೂರ ಮಾಡುವಷ್ಟು ಪ್ರಾಬಲ್ಯವನ್ನು ಕಣ್ಣಿಗೆ ಕಾಣದ ಈ ಕೊರೊನಾ ವೈರಸ್‌ ಹೊಂದಿದೆ ಎನ್ನುವುದು ಸ್ಪಷ್ಟ. ಇದೀಗ ಸಂಬಂಧಿಕರು, ನೆಂಟರಿಷ್ಟರು ದೂರವಾಗುತ್ತಿದ್ದಾರೆ. ಹೆತ್ತಬ್ಬೆಯ ನೋಡಲು ಮಗನಿಗೆ ಅವಕಾಶ ಸಿಗುತ್ತಿಲ್ಲ. ಹುಷಾರಿಲ್ಲದ ಅಣ್ಣನ ಯೋಗಕ್ಷೇಮ ವಿಚಾರಿಸಲು ತಂಗಿಯನ್ನೂ ಬಿಡುತ್ತಿಲ್ಲ. ನಿತ್ಯ ದಿನಕ್ಕೆ ನಾಲ್ಕು ಬಾರಿ ಮಾತನಾಡುತ್ತಿದ್ದ ನೆರೆಹೊರೆಯವರು ಅಪರಿಚಿತರಾಗಿದ್ದಾರೆ.

Vijaya Karnataka Web 31 Mar 2020, 8:22 am
ಅಶೋಕ್‌ ಕಲ್ಲಡ್ಕ ಮಂಗಳೂರು
Vijaya Karnataka Web lockdown


ಕೊರೊನಾ ವೈರಸ್‌ ಭೀಕರತೆ ಎಷ್ಟರ ಮಟ್ಟಿಗೆ ತಲುಪಿದೆ ಎನ್ನುವುದು ದಿನ ಕಳೆದಂತೆ ಬಯಲಾಗುತ್ತಿದೆ. ಇದೀಗ ಸಂಬಂಧಿಕರು, ನೆಂಟರಿಷ್ಟರು ದೂರವಾಗುತ್ತಿದ್ದಾರೆ. ಹೆತ್ತಬ್ಬೆಯ ನೋಡಲು ಮಗನಿಗೆ ಅವಕಾಶ ಸಿಗುತ್ತಿಲ್ಲ. ಹುಷಾರಿಲ್ಲದ ಅಣ್ಣನ ಯೋಗಕ್ಷೇಮ ವಿಚಾರಿಸಲು ತಂಗಿಯನ್ನೂ ಬಿಡುತ್ತಿಲ್ಲ. ನಿತ್ಯ ದಿನಕ್ಕೆ ನಾಲ್ಕು ಬಾರಿ ಮಾತನಾಡುತ್ತಿದ್ದ ನೆರೆಹೊರೆಯವರು ಅಪರಿಚಿತರಾಗಿದ್ದಾರೆ.

ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದಂತೆ, ಸಂಬಂಧಗಳ ನಡುವಿನ ಅಂತರವೂ ಜಾಸ್ತಿಯಾಗುತ್ತಿದೆ. ನಗರದ ಬಹುತೇಕ ಫ್ಲ್ಯಾಟ್‌ ಗಳಲ್ಲಿ ವಿಸಿಟರ್‌ಗಳು, ಸಂಬಂಧಿಕರಿಗೆ ಅವಕಾಶ ನೀಡುತ್ತಿಲ್ಲ. ಅಂತಹ ಸ್ಥಿತಿಗೆ ಕೊರೊನಾ ವೈರಸ್‌ ತಂದು ನಿಲ್ಲಿಸಿದೆ.

ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 400 ಅಪಾರ್ಟ್‌ಮೆಂಟ್‌ಗಳಿವೆ. ಇದರಲ್ಲಿ ಬಹುತೇಕ ಅಪಾರ್ಟ್‌ಮೆಂಟ್‌ಗಳಲ್ಲಿ ಹೊರಗಿನವರಿಗೆ ಪ್ರವೇಶವಿಲ್ಲ ಎಂದು ಬೋರ್ಡ್‌ ಹಾಕಲಾಗಿದೆ. ಕೆಲವು ಕಡೆಗಳಲ್ಲಿ ಸಂಬಂಧಿಕರಿಗೂ ಪ್ರವೇಶವಿಲ್ಲ ಎಂದು ಬೋರ್ಡ್‌ ಹಾಕಲಾಗಿದೆ. ನಗರದ ಅತ್ತಾವರ, ಪಾಂಡೇಶ್ವರ, ಕುದ್ರೋಳಿ, ಮಣ್ಣಗುಡ್ಡೆ, ಉರ್ವ ಹೊಯಿಗೆಬೈಲ್‌, ಚಿಲಿಂಬಿಗಳಲ್ಲಿ ಬೋರ್ಡ್‌ ಹಾಕಲಾಗಿದೆ.

ಪಾಂಡೇಶ್ವರ ಬಳಿಯ ಫ್ಲ್ಯಾಟ್‌ನಲ್ಲಿ ವಾಸಿಸುತ್ತಿರುವ ಅಲೋಕ್‌ನಾಥ್‌ ಅವರಿಗೆ ಕೆಪಿಟಿ ಬಳಿಯ ತನ್ನ ಅಣ್ಣನ ಫ್ಲ್ಯಾಟ್‌ನಲ್ಲಿರುವ ಅಮ್ಮನನ್ನು ನೋಡಲು ಅವಕಾಶ ಸಿಗಲಿಲ್ಲ. ಲಾಲ್‌ಭಾಗ್‌ ಸಮೀಪದ ಫ್ಲ್ಯಾಟ್‌ ನಿವಾಸಿಯಾದ ಕವಿತಾ ಅವರಿಗೆ ಅಲ್ಲೇ ಸಮೀಪದ ಬಳ್ಳಾಲ್‌ ಬಾಗ್‌ನ ಫ್ಲ್ಯಾಟ್‌ನಲ್ಲಿರುವ ಅಣ್ಣ ರಾಮಪ್ರಸಾದ್‌ ಅವರನ್ನು ನೋಡಲು ಸಾಧ್ಯವಾಗಿಲ್ಲ.

ಇದು ಫ್ಲ್ಯಾಟ್‌ಗಳ ಕಥೆಯಾದರೆ, ಇಂಡಿಪೆಂಡೆಂಟ್‌ ಮನೆಗಳಲ್ಲಿಯೂ ಹೊರಗಿನವರಿಗೆ ಪ್ರವೇಶವಿಲ್ಲ ಎಂಬ ಬೋರ್ಡ್‌ ಒಂದೊಂದಾಗಿ ಕಾಣಿಸಲಾರಂಭಿಸಿದೆ. ವೈರಸ್‌ ಹರಡುವುದನ್ನು ತಡೆಗಟ್ಟುವ ನಿಟ್ಟಿನಲ್ಲಿಇದು ಅಗತ್ಯ ಹಾಗೂ ಅನಿವಾರ್ಯ ಕೂಡ. ಅದರೊಂದಿಗೆ ಸಂಬಂಧಗಳನ್ನೇ ದೂರ ಮಾಡುವಷ್ಟು ಪ್ರಾಬಲ್ಯವನ್ನು ಕಣ್ಣಿಗೆ ಕಾಣದ ಈ ವೈರಸ್‌ ಹೊಂದಿದೆ ಎನ್ನುವುದು ಸ್ಪಷ್ಟ.

ನೆರೆಕರೆಯವರು ಅಪರಿಚಿತರಾಗಿದ್ದಾರೆ. ಯಾರೂ ಅಂಗಳಕ್ಕೆ ಕಾಲಿಡುತ್ತಿಲ್ಲ. ಒಬ್ಬರನ್ನೊಬ್ಬರು ಯಾರೂ ಕರೆದು ಮಾತನಾಡಿಸುತ್ತಿಲ್ಲ. ಒಂದು ವಾರದಿಂದ ಮಾತಿಲ್ಲ, ಕಥೆ ಇಲ್ಲ.

ಮಕ್ಕಳಾಟಕ್ಕೆ ಬ್ರೇಕ್‌

ಮನೆಯಂಗಳ, ರಸ್ತೆ ಅಂಚು, ಟೆರೇಸ್‌ ಮೇಲೆ, ಮೈದಾನ, ಪಾರ್ಕ್ ಮುಂತಾದ ಕಡೆಗಳಲ್ಲಿ ಮಕ್ಕಳ ಆಟಕ್ಕೆ ಬ್ರೇಕ್‌ ಬಿದ್ದಿದೆ. ಎಲ್ಲಿಯೂ ಮಕ್ಕಳ ಕೂಗು, ಕಿರುಚಾಟ ಕೇಳಿಸುತ್ತಿಲ್ಲ. ಮಕ್ಕಳ ಕಲರವ ಇಲ್ಲದೆ ಗಲ್ಲಿಗಲ್ಲಿಯೂ ಡಲ್‌ ಹೊಡೆಯುತ್ತಿದೆ.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ