ಆ್ಯಪ್ನಗರ

ಹಗುರ ಮಳೆಯಿಂದ ಕೊರೊನಾ ನಾಶ! ಮಂಗಳೂರು ವೈದ್ಯ ಹೇಳಿಕೆ!

ಹಗುರು ಮಳೆಯಾದರೆ ತೊಂದರೆ ಇಲ್ಲ, ಆದರೆ ನಿರಂತರವಾಗಿ ಭಾರೀ ಮಳೆಯಾದರೆ ಕೊರೊನಾ ವೈರಸ್ ಸಂಖ್ಯೆ ಇಮ್ಮಡಿಯಾಗಲು ನೆರವಾಗುತ್ತದೆ ಎಂದು ಮಂಗಳೂರು ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್ ಭಂಡಾರಿ ಹೇಳಿದ್ದಾರೆ.

Vijaya Karnataka Web 24 Mar 2020, 8:30 pm
ಮಂಗಳೂರು: ಹಗುರು ಮಳೆಯಾದರೆ ತೊಂದರೆ ಇಲ್ಲ, ಆದರೆ ನಿರಂತರವಾಗಿ ಭಾರೀ ಮಳೆಯಾದರೆ ಕೊರೊನಾ ವೈರಸ್ ಸಂಖ್ಯೆ ಇಮ್ಮಡಿಯಾಗಲು ನೆರವಾಗುತ್ತದೆ ಎಂದು ಮಂಗಳೂರು ತಾಲೂಕು ವೈದ್ಯಾಧಿಕಾರಿ ಡಾ. ಸುಜಯ್ ಭಂಡಾರಿ ಹೇಳಿದ್ದಾರೆ.
Vijaya Karnataka Web Coronavirus 7


ಕರಾವಳಿಯಲ್ಲಿ ಹವಾಮಾನ ಇಲಾಖೆ ವರದಿ ಪ್ರಕಾರ ಮುಂದಿನ 2-3 ದಿನ ಹಗುರು ಮಳೆಯಾಗುವ ಸಾಧ್ಯತೆಯ ಹಿನ್ನೆಲೆಯಲ್ಲಿ ವಿಜಯ ಕರ್ನಾಟಕ ಡಾ. ಸುಜಯ್ ಅವರನ್ನು ಸಂಪರ್ಕಿಸಿದಾಗ ಈ ಮಾಹಿತಿ ನೀಡಿದರು.

ಒಂದೆರಡು ಹಗುರ ಮಳೆ ಕೊರೊನಾ ವೈರಸ್ ನಿರ್ಮೂಲನೆಗೆ ಸಹಕಾರಿಯಾಗಲಿದೆ. ಯಾಕೆಂದರೆ ಮಳೆ ನಿಂತ ಬಳಿಕ ಉಷ್ಣಾಂಶದಲ್ಲಿ ಏರಿಕೆಯಾಗುತ್ತದೆ. ಇದು ವೈರಸ್ ನಾಶಕ್ಕೆ ಸಹಕಾರಿಯಾಗಬಲ್ಲದು ಎಂದು ಅವರು ಅಭಿಪ್ರಾಯ ಪಟ್ಟರು.

ಕತಾರ್‌ನಲ್ಲಿ 'ಕೊರಾನಾ' ನಿಯಂತ್ರಣಕ್ಕೆ ಕಟ್ಟುನಿಟ್ಟಿನ ಕ್ರಮಗಳು ಹೀಗಿವೆ ನೋಡಿ!

ನಿರಂತರ ಮಳೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಮಳೆಯಿಂದ ಉಷ್ಣಾಂಶ ಇಳಿಕೆಯಾಗುವುದರಿಂದ ವೈರಸ್ ವೃದ್ದಿಯಾಗಲಿದೆ ಎಂದು ಅವರು ಹೇಳಿದರು.

ಆಯುಷ್ಮಾನ್ ಭಾರತ್ ಯೋಜನೆಯಡಿ ಕೊರೊನಾಗೆ ಚಿಕಿತ್ಸೆ ಲಭ್ಯ!

ಕೊರೊನಾ ಸೇರಿದಂತೆ ಎಲ್ಲ ತರಹದ ವೈರಸ್ ಗಳು ಶೀತ ಉಷ್ಣತೆಯಲ್ಲಿ ವೃದ್ಧಿಯಾಗುತ್ತದೆ. ಶೈತ್ಯಾಗಾರದಲ್ಲಿ ವೃದ್ಧಿಯಾದಂತೆ ಅದರ ಸಂಖ್ಯೆ ಹೆಚ್ಚಾಗುತ್ತದೆ. ಸದ್ಯದ ಹವಾಮಾನ ಇಲಾಖೆ ವರದಿ ಪ್ರಕಾರ ನಿರಂತರ ಮಳೆ ಸುರಿಯುವ ಸಾಧ್ಯತೆ ಇಲ್ಲ. ಚದುರಿದಂತೆ ಹಗುರ ಮಳೆ ಬಿದ್ದ ಬಳಿಕ ಉಷ್ಣತೆಯಲ್ಲಿ ಏರಿಕೆಯಾಗುತ್ತದೆ. ಇದು ಕೊರೊನಾ ವೈರಸ್ ನ್ನು ಪ್ರಕೃತಿಯೇ ಕೊಲ್ಲಲು ನೆರವಾಗುತ್ತದೆ ಎಂದು ಅವರು ನುಡಿದರು.

ಮುಂದಿನ ಲೇಖನ

Vijay Karnataka News App: ನಿಮ್ಮ ಸುತ್ತಮುತ್ತಲು ನಡೆಯುವ ವಿದ್ಯಮಾನಗಳನ್ನುಹಂಚಿಕೊಳ್ಳಲು ಬಯಸುತ್ತೀರಾ? ಹಾಗಿದ್ದಲ್ಲಿ ವಿಜಯ ಕರ್ನಾಟಕ ಆ್ಯಪ್‌ಡೌನ್‌ಲೋಡ್‌ ಮಾಡಿಕೊಳ್ಳಿ ಹಾಗೂ ರಿಪೋರ್ಟ್‌ ಕಳಿಸಿ
ಲೇಟೆಸ್ಟ್‌ ನ್ಯೂಸ್‌ ಅಪ್‌ಡೇಟ್‌ಗಳನ್ನು ಪಡೆಯಿರಿ, Vijay Karnataka ಫೇಸ್‌ಬುಕ್‌ಪೇಜ್‌ ಲೈಕ್‌ ಮಾಡಿರಿ